ವಿಶ್ವದ 12 ಮಹಿಳಾ ರಕ್ಷಣಾ ಸಚಿವರು ಇವರು
ನವದೆಹಲಿ, ಸೆಪ್ಟೆಂಬರ್ 4: ನಿರ್ಮಲಾ ಸೀತಾರಾಮನ್ ಅವರನ್ನು ಭಾರತದ ರಕ್ಷಣಾ ಸಚಿವರನ್ನಾಗಿ ಆರಿಸುತ್ತಿದ್ದಂತೆಯೇ ಇಂದಿರಾ ಗಾಂಧಿಯವರ ನಂತರ ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 3 ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣಾ ಇಲಾಖೆಯ ಹೊಣೆ ವಹಿಸಲಾಯಿತು.
ವಿಶ್ವದ ಹಲವು ರಾಷ್ಟ್ರಗಳು ಮಹಿಳೆಯರಿಗೆ ರಕ್ಷಣಾ ಕ್ಷೇತ್ರದ ಜವಾಬ್ದಾರಿಯನ್ನು ನೀಡಿದ್ದವು. ಆ ಜವಾಬ್ದಾರಿಯನ್ನು ಮಹಿಳೆಯರು ಸಮರ್ಥವಾಗಿಯೇ ನಿಭಾಯಿಸಿದ್ದಾರೆ ಕೂಡ. 1960 ರಲ್ಲಿ ಶ್ರೀಲಂಕಾದ ಸಿರಿಮಾವೋ ಭಂಡಾರನಾಯಿಕೆ ಈ ಹುದ್ದೆಯನ್ನು ಪಡೆದ ಮೊದಲ ಮಹಿಳೆ ಅನ್ನಿಸಿದರು. ಇದೀಗ ಭಾರತ ನಿರ್ಮಲಾ ಸೀತಾರಾಮನ್ ಸಹ ಅದೇ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದ ಹೊಣೆಹೊತ್ತ ಪ್ರಮುಖ ಮಹಿಳೆಯರ ಹೆಸರು ಇಲ್ಲಿದೆ.

ಸಿರಿಮಾವೋ ಬಂಡಾರನಾಯಿಕೆ
ಶ್ರೀಲಂಕದ ಸಿರಿಮಾವೋ ರಾಟ್ವಟ್ಟೆ ಬಂಡಾರನಾಯಿಕೆ 1960-65 ಮತ್ತು 1970-77 ರಲ್ಲಿ ಈ ಹುದ್ದೆ ಅಲಂಕರಿಸಿದ್ದರು. ಆಸ್ಟ್ರೇಲಿಯಾದ ರಾಸ್ ಕೆಲ್ಲಿ 1987 -88ರವರೆಗೆ ರಕ್ಷಣಾ ಖಾತೆಯ ಜವಾಬ್ದಾರಿ ಹೊತ್ತಿದ್ದರು.

ಬೆನಿಜಿರ್ ಬುಟ್ಟೊ
ಪಾಕಿಸ್ತಾನದ ಬೆನೆಜಿರ್ ಬುಟ್ಟೋ 1988-90ರವರೆಗೆ ರಕ್ಷಣಾ ಸಚಿವೆಯಾಗಿದ್ದರು. ಕೆನಡಾದ ಮೇರಿ ಕಾಲಿನ್ಸ್ 1989-93ರವರೆಗೆ ಈ ಉನ್ನತ ಗೌರವ ಪಡೆದಿದ್ದರು.

ಎಲಿಸಬೆತ್ ರೆಹ್ನ್
ಫಿನ್ಲೆಂಡ್ ನ ಎಲಿಸಬೆತ್ ರೆಹ್ನ್ 1990-95ರವರೆಗೆ ರಕ್ಷಣಾ ಸಚಿವರಾಗಿದ್ದರು.

ಖಾಲಿದಾ ಜಿಯಾ
ಬಾಂಗ್ಲಾದೇಶದ ಬೇಗಂ ಖಾಲಿದಾ ಜಿಯಾ 1991-96 ಮತ್ತು 2001-06ರವರೆಗೆ ಈ ಆಯಕಟ್ಟಿನ ಹುದ್ದೆ ಹೊಂದಿದ್ದರು.

ಕ್ರಿಸ್ಟಿನ್ ಕ್ರೋಹ್ನ್
ನಾರ್ವೇಯ ಕ್ರಿಸ್ಟಿನ್ ಕ್ರೋಹ್ನ್ 2001-05ರಿಂದ ಈ ಹುದ್ದೆ ಪಡೆದಿದ್ದರೆ. ಫ್ರಾನ್ಸ್ನ ಮೈಕೆಲ್ ಎಲಿಯಟ್ ಮೆರಿ 2002-07ರವರೆಗೆ, ಕೊಲಂಬಿಯಾದ ಮಾರ್ತಾ ಲುಸಿಯಾ ರಾಮಿರೆಜ್ ದಿ ರಿಂಕಾನ್ 2002-03 ವರೆಗೆ, ಸ್ವೀಡನ್ ನ ಲೆನಾ ಜೆಲ್ಮ್ ವಾಲೆನ್ 2002 ರಲ್ಲಿ ಈ ಹುದ್ದೆ ಪಡೆದಿದ್ದರು.

ಅನ್ನೆಟ್ಟ್ ಕಿಂಗ್
ನ್ಯೂಜಿಲೆಂಡ್ ನ ಅನ್ನೆಟ್ಟ್ ಕಿಂಗ್ 2005-07 ರವೆರೆಗೆ ಈ ಹುದ್ದೆ ಅಲಂಕರಿಸಿದ್ದರು. ಸದ್ಯಕ್ಕೆ ಭಾರತದ ನಿರ್ಮಲಾ ಸೀತಾರಾಮನ್ (2017) ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications