ಗುರುವಾರ ಭಾರತದಲ್ಲಿ ನಡೆದ ಪ್ರಮುಖ ಘಟನಾವಳಿಗಳು
ಬೆಂಗಳೂರು, ಫೆ. 12: ಭಾರತ ಹಾಗೂ ಇತರ ದೇಶಗಳಲ್ಲಿ ಗುರುವಾರ ನಡೆದ ಪ್ರಮುಖ ಘಟನೆಗಳ ಕುರಿತು ಚಿತ್ರ ಸಹಿತ ಸಂಕ್ಷಿಪ್ತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.
ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಕ್ರೀಡಾಳುಗಳ ಪದಕ ಬೇಟೆ ಮುಂದುವರಿದಿದೆ. ಅಬುಧಾಬಿಯಲ್ಲಿ ಆರಂಭವಾಗಲಿರುವ ರೆಡ್ ಬುಲ್ ಏರ್ ರೇಸ್ ವಿಶ್ವ ಚಾಂಪಿಯನ್‌ಶಿಪ್ ನಿಮಿತ್ತ ವೈಮಾನಿಕ ಪರಿಶೀಲನೆ ನಡೆಸಲಾಯಿತು. ಇನ್ನಿತರ ಸುದ್ದಿಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಉತ್ತರ ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಗಿದೆ. ಪೈಲಟ್ ಹಾಗೂ ಸಹ ಪೈಲಟ್ ಇಬ್ಬರೂ ಮೃತಪ್ಟಟಿದ್ದಾರೆ. ಮುಂಬೈನಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೌರಶಕ್ತಿ ಉಪಯೋಗಿಸಿ ಆಹಾರ ತಯಾರಿಸಿದ್ದಾರೆ. ಮುಂಬೈನಲ್ಲಿ ಏರ್ಪಡಿಸಿದ್ದ ಫೆಮಿನಾ ಬ್ಯೂಟಿ ಅವಾರ್ಡ್ಸ್-2015 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್ ಎಲ್ಲರ ಗಮನ ಸೆಳೆದರು. ಇನ್ನಷ್ಟು ಸುದ್ದಿಗಳ ಕುರಿತು ಚಿತ್ರ ಸಹಿತ ಸುದ್ದಿಗಳನ್ನು ನೀಡಲು ಕೆಳಗೆ ಕ್ಲಿಕ್ ಮಾಡಿ.

ಖಡ್ಗ ವೀರರು
ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಪುರುಷರ ಕತ್ತಿ ವರಸೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಪುರುಷರ ತಂಡ.

ವೈಮಾನಿಕ ಪರಿಶೀಲನೆ
ಅರಬ್ ರಾಷ್ಟ್ರಗಳ ಅಬುಧಾಬಿ ನಗರದ ಮಧ್ಯೆ ಹರಿಯುತ್ತಿರುವ ಸರೋವರದ ಮೇಲೆ ವಿಮಾನಗಳು ಹಾರಿ ಪರಿಶೀಲನೆ ನಡೆಸಿದವು. ಈ ವಾರದ ಅಂತ್ಯದಲ್ಲಿ ರೆಡ್ ಬುಲ್ ಏರ್ ರೇಸ್ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದ್ದು, ಇದಕ್ಕಾಗಿ ಈ ಪರಿಶೀಲನೆ ನಡೆಸಲಾಯಿತು.

ಉಡಾವಣೆಗೆ ಸಿದ್ಧತೆ
ಅಮೆರಿಕದ ಕೇಪ್ ಕನವರಲ್ ವಾಯು ದಳ ನಿಲ್ದಾಣದಲ್ಲಿ ಮೂರನೇ ಉಡಾವಣೆಗೆ ಸಿದ್ಧವಾಗಿರುವ ಫಾಲ್ಕನ್ 9 ಸ್ಪೇಸ್‌ಎಕ್ಸ್ ರಾಕೆಟ್.

ಮೂರನೇ ಉಡಾವಣೆ
ಅಮೆರಿಕದ ಕೇಪ್ ಕನವರಲ್ ವಾಯು ದಳ ನಿಲ್ದಾಣದಲ್ಲಿ ಮೂರನೇ ಬಾರಿಗೆ ಉಡಾವಣೆ ಮಾಡಲಾದ ಫಾಲ್ಕನ್ 9 ಸ್ಪೇಸ್‌ಎಕ್ಸ್ ರಾಕೆಟ್.

ಪ್ರಮಾಣವಚನಕ್ಕೆ ಬನ್ನಿ
ನವದೆಹಲಿ ಮುಖ್ಯಮಂತ್ರಿಯಾಗಿ ಫೆ. 14ರಂದು ಪ್ರಮಾಣವಚನ ಸ್ವೀಕರಿಸಲಿರುವ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಆದರೆ, ಪ್ರಧಾನಿ ನಿರಾಕರಿಸಿದ್ದಾರೆ.

ಖಡ್ಗ ಶೂರೆಯರು
ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಮಹಿಳೆಯರ ಕತ್ತಿ ವರಸೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ತಂಡ ಪದಕ ತೋರಿಸಿ ಸಂಭ್ರಮಿಸಿದರು.

ಹೆಲಿಕಾಪ್ಟರ್ ಅಪಘಾತ
ಉತ್ತರ ಕಾಶ್ಮೀರದ ಗುಡ್ಡದ ಪ್ರದೇಶದಲ್ಲಿ ಅಪಘಾತಗೊಂಡು ನಾಶವಾದ ಸೇನಾ ಹೆಲಿಕಾಪ್ಟರ್‌ನ ಅವಶೇಷಗಳನ್ನು ಸೈನಿಕರು ಹಾಗೂ ಅಧಿಕಾರಿಗಳು ಪರಿಶೀಲಿಸಿದರು. ಈ ಅಪಘಾತದಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ.

ರಾಜ್ಯಪಾಲರೊಂದಿಗೆ ಔತಣ
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ರಾಜ್ಯಪಾಲರ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ಭಾಗವಹಿಸಿದ್ದರು.

ಸೌರಶಕ್ತಿ ಆಹಾರ
ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಸೌರಶಕ್ತಿ ಉಪಯೋಗಿಸಿ ಆಹಾರ ತಯಾರಿಸಿದರು.

ಸೋನಮ್ ಸೌಂದರ್ಯ
ಮುಂಬೈನಲ್ಲಿ ಏರ್ಪಡಿಸಿದ್ದ ಫೆಮಿನಾ ಬ್ಯೂಟಿ ಅವಾರ್ಡ್ಸ್-2015 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.

ದೀನದಯಾಳ್ ಉಪಾಧ್ಯಾಯ ಪುಣ್ಯತಿಥಿ
ಭೋಪಾಲದಲ್ಲಿ ಆಯೋಜಿಸಿದ್ದ ದಿ. ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹಾಗೂ ಆರ್‌ಎಸ್ಎಸ್ ಸಹ ಕಾರ್ಯವಾಹ ದತ್ತಾತ್ರೇಯ ಭಾಗವಹಿಸಿದ್ದರು.












Click it and Unblock the Notifications