ಕೇರಳದಲ್ಲಿ ಭಾರೀ ಮಳೆ: 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್- ಕರಾವಳಿ ಕರ್ನಾಟಕದಲ್ಲಿಯೂ ಮಳೆ ಮುನ್ಸೂಚನೆ
ತಿರುವನಂತಪುರಂ, ಸೆಪ್ಟೆಂಬರ್ 15: ಕೇರಳದ ದಕ್ಷಿಣ ವಲಯದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಪೂರ್ವ ಮಧ್ಯಪ್ರದೇಶದ ಮೇಲಿನ ಚಂಡಮಾರುತದ ಪರಿಚಲನೆಯ ಪ್ರಭಾವದಿಂದಾಗಿ ಕೇರಳದಲ್ಲಿ ಪ್ರತ್ಯೇಕವಾದ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಕೇರಳದಲ್ಲಿ ಸೆ.21ರವರೆಗೆ ಗುಡುಗು ಸಹಿತ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ ಮಾನ್ಸೂನ್ ಕೊರತೆಯು ( ಈ ತಿಂಗಳ ಆರಂಭದಿಂದ ) ಶೇಕಡಾ 49 ರಿಂದ ಶೇಕಡಾ 40 ಕ್ಕೆ ಕಡಿಮೆಯಾಗಿದೆ. ಕೇರಳದಲ್ಲಿ ಸರಾಸರಿ 1888.2 ಮಿ.ಮೀ ಮಳೆಯಾಗಬೇಕಿತ್ತು. ಸೆಪ್ಟೆಂಬರ್ 15ರ ವರೆಗೆ ಕೇವಲ 1126.7 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ. ಕಣ್ಣೂರು ಜಿಲ್ಲೆಯ ಕಣ್ಣೂರು ತಲಶ್ಶೇರಿ, ಕಾಸರಗೋಡು ಜಿಲ್ಲೆಯ ಹೊಸದುರ್ಗ ಮತ್ತು ಬಾಯಾರ್‌ನಲ್ಲಿ 7 ಸೆಂ.ಮೀ ಭಾರೀ ಮಳೆಯಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಮುಂದಿನ 3-4 ದಿನಗಳಲ್ಲಿ ಕಡಿಮೆ ಒತ್ತಡದ ಪ್ರದೇಶವು ಪಶ್ಚಿಮ ಮಧ್ಯಪ್ರದೇಶ ಮತ್ತು ಗುಜರಾತ್‌ನಾದ್ಯಂತ ಚಲಿಸುವ ಸಾಧ್ಯತೆಯಿದೆ. ಇದು ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಳೆಯನ್ನು ತರಲಿದೆ ಎಂದು ಹೇಳಲಾಗುತ್ತಿದೆ.
ಇದೇ ರೀತಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ಉತ್ತರ ಕನ್ನಡ: 165.5 ಮಿ.ಮೀ
ದಕ್ಷಿಣ ಕನ್ನಡ: 103 ಮಿ.ಮೀ
ಶಿವಮೊಗ್ಗ: 56.5 ಮಿ.ಮೀ
ಉಡುಪಿ: 54.5 ಮಿ.ಮೀ
ಕೊಡಗು: 43.5 ಮಿ.ಮೀ
ಹಾಸನ: 38 ಮಿ.ಮೀ
ಚಿಕ್ಕಮಗಳೂರು: 34.5 ಮಿ.ಮೀ
ಹೆಚ್ಚು ಮಳೆ ಬಿದ್ದ ಸ್ಥಳಗಳು
ದೇವಗಿರಿ: 165.5 ಮಿ.ಮೀ
ಹಳದೀಪುರ: 132.5 ಮಿ.ಮೀ
ಕಡ್ಲೆ: 130.5 ಮಿ.ಮೀ
ಕಡತೋಕ: 127 ಮಿ.ಮೀ
ಚಂದಾವರ: 109.5 ಮಿ.ಮೀ












Click it and Unblock the Notifications