Rain Alert: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಈ ವಾರ ಸುರಿಯಲಿದೆ ಭಾರೀ ಮಳೆ- ಎಲ್ಲೆಲ್ಲಿ? ಅಂಕಿಅಂಶ, ಮಾಹಿತಿ, ವಿವರ
ನವದೆಹಲಿ, ಸೆಪ್ಟೆಂಬರ್ 26: ದೇಶದ ವಾಯುವ್ಯ ಭಾಗಗಳಿಂದ ನೈಋತ್ಯ ಮಾನ್ಸೂನ್ ಮರೆಯಾಗಲು ಪ್ರಾರಂಭಿಸಿದೆ. ಆದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಗಾಲ ಇನ್ನೂ ಒಂದು ವಾರ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಕೆಲವು ದಿನಗಳಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಎಡಬಿಡದೇ ಮಳೆ ಸುರಿಯುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ತಮಿಳುನಾಡಿನ ಉತ್ತರ ಕರಾವಳಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆಯು ಮುಂದುವರಿಯುತ್ತದೆ. ಇದಲ್ಲದೆ, ಈ ವಾರದ ಅಂತ್ಯದ ವೇಳೆಗೆ ಉತ್ತರ ಅಂಡಮಾನ್ ಸಮುದ್ರದ ಮೇಲೆ ಮತ್ತೊಂದು ಚಂಡಮಾರುತದ ಪರಿಚಲನೆಯು ರೂಪುಗೊಳ್ಳುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ (ಸೆ. 26, 28 ಮತ್ತು 29) ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಡಹಿತಿ ಹಂಚಿಕೊಂಡಿದೆ.
ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಗುರುವಾರ ಹಾಗೂ ಶುಕ್ರವಾರ ( ಸೆ. 28-29 ) ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕೇವಲ ಗುರುವಾರ ಮತ್ತು ಉತ್ತರ ಒಳನಾಡಿನಲ್ಲಿ ಶುಕ್ರವಾರ ಇದೇ ರೀತಿಯ ಹವಾಮಾನ ಮುನ್ಸೂಚನೆ ನೀಡಲಾಗಿದೆ.
ಗುರುವಾರ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕರಾವಳಿಗಳಲ್ಲಿ ಮಳೆಯಾಗುವ ಸಂಭವವಿದೆ. ಕೆಲ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ತಮಿಳುನಾಡಿನ ನೀಲಗಿರಿ, ತಿರುಪತ್ತೂರು ಮತ್ತು ವೆಲ್ಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಮಳೆಯ ಪ್ರಮಾಣ 115.5 ಮಿಮೀಯಿಂದ 204.5 ಮಿಮೀ ವರೆಗೂ ಇರಲಿದೆ. ಈ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ.
ದಕ್ಷಿಣ ಭಾರತದ ಎಲ್ಲಾ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರು ಜಾಗರೂಕರಾಗಿ ಇರಬೇಕೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸೆಪ್ಟೆಂಬರ್‌ನಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಹೆಚ್ಚುವರಿ ಮಳೆಯನ್ನು ದಾಖಲಿಸಿವೆ.

ಸೆಪ್ಟೆಂಬರ್ 1 ಮತ್ತು 25 ರ ನಡುವೆ, ತಮಿಳುನಾಡು - 126.2 ಮಿಮೀ, ಕೇರಳ -318.8 ಮಿಮೀ, ಆಂಧ್ರ 151.4 ಮಿಮೀ ಮತ್ತು ತೆಲಂಗಾಣ 200.4 ಮಿಮೀ ದಾಖಲಾಗಿದೆ. ಇದು ಕ್ರಮವಾಗಿ ಶೇ 33, ಶೇ 39, ಶೇ 20 ಮತ್ತು ಶೇ 47 ರಷ್ಟು ಅಧಿಕವಾಗಿದೆ. ಆದರೆ ಕರ್ನಾಟಕವು ಈ ಅವಧಿಯಲ್ಲಿ 128.4 ಮಿಮೀ ಮಳೆಯನ್ನು ದಾಖಲಿಸಿದೆ. ಶೇ 2 ರಷ್ಟು ಅಲ್ಪ ಕೊರತೆಯನ್ನು ಕಂಡಿದೆ.
ಕರ್ನಾಟಕದಲ್ಲಿ ಜೂನ್ 1 ರಿಂದ ಕೇವಲ 654.4 ಮಿಮೀ ಮಳೆಯಾಗಿದ್ದು ಶೇ 18ರಷ್ಟು ಕೊರತೆಯನ್ನು ದಾಖಲಿಸಿದೆ.
ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ಚಿಕ್ಕಬಳ್ಳಾಪುರ: 76 ಮಿ.ಮೀ
ಬೆಂಗಳೂರು ನಗರ: 72.5 ಮಿ.ಮೀ
ಬೀದರ್: 63 ಮಿ.ಮೀ
ತುಮಕೂರು: 53 ಮಿ.ಮೀ
ಬಳ್ಳಾರಿ: 52.5 ಮಿ.ಮೀ
ಹಾಸನ: 48 ಮಿ.ಮೀ
ಬೆಂಗಳೂರು ಗ್ರಾಮಾಂತರ: 46 ಮಿ.ಮೀ
ವಿಜಯಪುರ: 45 ಮಿ.ಮೀ
ರಾಯಚೂರು: 44.5 ಮಿ.ಮೀ
ಕೋಲಾರ: 42 ಮಿ.ಮೀ
ಕಲಬುರಗಿ: 40.5 ಮಿ.ಮೀ
ಉತ್ತರ ಕನ್ನಡ: 37.5 ಮಿ.ಮೀ
ಅತಿ ಹೆಚ್ಚು ಮಳೆ ಸುರಿದ ಪ್ರದೇಶಗಳು
ಕಳ್ಳಿನಾಯಕನಹಳ್ಳಿ, ಚಿಕ್ಕಬಳ್ಳಾಪುರ: 76 ಮಿ.ಮೀ
ಅರಕೆರೆ, ಬೆಂಗಳೂರು ನಗರ: 72.5 ಮಿ.ಮೀ
ಅಲಿಯಾಬಾದ್, ಬೀದರ್: 63 ಮಿ.ಮೀ
ತಿಪ್ಪೇನಹಳ್ಳಿ: 57 ಮಿ.ಮೀ
ಚಂದ್ರಗಿರಿ, ತುಮಕೂರು: 53 ಮಿ.ಮೀ












Click it and Unblock the Notifications