ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking ತೀವ್ರ ಚಳಿ: ದೆಹಲಿ ಖಾಸಗಿ ಶಾಲೆಗಳಿಗೆ ಜ.15ರವರೆಗೆ ರಜೆ ಘೋಷಿಸಿದ ಶಿಕ್ಷಣ ನಿರ್ದೇಶನಾಲಯ

|
Google Oneindia Kannada News

ನವದೆಹಲಿ, ಜನವರಿ 08: ರಾಷ್ಟ್ರ ರಾಜಧಾನಿ ನವದೆಹಲಿ ದಿನೇ ದಿನ ಚಳಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ತಕ್ಷಣದಿಂದ ಜನವರಿ 15ರವರೆಗೆ ರಜೆ ಘೋಷಿಸಿ ಶಿಕ್ಷಣ ನಿರ್ದೇಶನಾಲಯ ಭಾನುವಾರ ಆದೇಶ ಹೊರಡಿಸಿದೆ.

ನವದೆಹಲಿ ಕೆಲವು ವಾರಗಳಿಂದಲೂ ನಿರಂತರವಾಗಿ ತೀವ್ರ ಚಳಿಗೆ ತತ್ತರಿಸಿ ಹೋಗಿದೆ. ಇಂದು (ಜ.8) ಭಾನುವಾರ ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್​ಗೆ ತೀವ್ರ ಹಂತಕ್ಕೆ ಇಳಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ದೆಹಲಿಯ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿ ಸರ್ಕಾರದ ಸೂಚನೆಯ ಮೇರೆಗೆ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.

Heavy Cold in New Delhi: Holiday announced for private schools till January 15

ಭಾರತ್ ಜೋಡೋ ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲ್ಲಭಾರತ್ ಜೋಡೋ ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲ್ಲ

ಖಾಸಗಿ ಶಾಲೆಯ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರ್ಯಾಯ ತರಗತಿಗಳು ನಡೆಯಲಿವೆ. ರಜೆ ಇದ್ದರೂ ಶೈಕ್ಷಣಿಕ ಕಾರ್ಯಕ್ಷಮತೆ ಬಗ್ಗೆ ಗಮನಹರಿಸಲಾಗುವುದು ಎಂದು ಶಿಕ್ಷಣ ನಿರ್ದೇಶನಾಲಯ ಹೇಳಿದೆ.

ಭಾನುವಾರ ಬೆಳಗ್ಗೆ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಎದುರಿನ ವ್ಯಕ್ತಿ ಕಾಣದಂತೆ ಮಂಜು ಕವಿದ ವಾತಾವರಣ ಕಂಡು ಬಂತು. ಇಲ್ಲಿನ ಜನರು ತೀವ್ರ ಚಳಿಗೆ ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆ ಯಾರು ಸಹ ಮನೆಯಿಂದ ಹೊರ ಬರುತ್ತಿಲ್ಲ. ಈ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತರೆಡೆಗೆ ಪ್ರಯಾಣಿ ಕೈಗೊಳ್ಳಬೇಕಿದ್ದ ಸುಮಾರು 20 ವಿಮಾನಗಳ ಹಾರಾಟದಲ್ಲಿ ಸ್ಥಗಿತಗೊಂಡಿತ್ತು ಎನ್ನಲಾಗಿದೆ.

ವಿಮಾನವಷ್ಟೇ ಅಲ್ಲದೇ ಮಂಜಿನ ವಾತಾವರಣದಿಂದಾಗಿ 42 ರೈಲುಗಳು ಸಂಚಾರವು ಸಮಯಕ್ಕೆ ಸರಿಯಾಗಿ ನಡೆದಿಲ್ಲ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ದೆಹಲಿ ಭಾಗದಲ್ಲಿ ಚಳಿ ಹೆಚ್ಚಾಗುತ್ತಲೆ ಇದೆ. ಇದು ಹೀಗೆ ಮುಂದುವರಿಯವ ನಿರೀಕ್ಷೆ ಇದೆ. ಈ ಕಾರಣಕ್ಕೆ ಜನರು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ದೆಹಲಿ ಸರ್ಕಾರ ಮನವಿ ಮಾಡಿದೆ.

English summary
Heavy Cold in New Delhi: Holiday announced for private schools till January 15 by Directorate of Education
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X