ರೈಲ್ವೆ ನಿಯಮ ಬದಲಾಗಿದೆಯಾ, ಇನ್ನೂ 5 ವರ್ಷದ ಮಕ್ಕಳಿಗೆ ಟಿಕೆಟ್ ಖರೀದಿಸಬೇಕಾ?
ನವದೆಹಲಿ, ಆಗಸ್ಟ್ 18: ಮಕ್ಕಳಿಗಾಗಿ ರೈಲು ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿಗಳನ್ನು ರೈಲ್ವೇ ಸಚಿವಾಲಯವು ತಳ್ಳಿಹಾಕಿದೆ. ಭಾರತೀಯ ರೈಲ್ವೆಯು 06.03.2020 ರಂದು ಹೊರಡಿಸಿದ 2020 ರ ಸುತ್ತೋಲೆ ಸಂಖ್ಯೆ 12 ರ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ರಿಸರ್ವೇಶನ್ ಅಗತ್ಯವಿಲ್ಲ ಮತ್ತು ಉಚಿತವಾಗಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದೆ.
ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ರೈಲ್ವೇ ಸಚಿವಾಲಯವು ಟಿಕೆಟ್ ಕಾಯ್ದಿರಿಸುವ ನಿಯಮವನ್ನು ಬದಲಾಯಿಸಿದೆ ಎಂದು ಬುಧವಾರದಂದು ಕೆಲವು ಮಾಧ್ಯಮ ವರದಿಗಳನ್ನು ಇಲಾಖೆ ನಿರಾಕರಿಸಿದೆ. ಮಕ್ಕಳಿಗೆ ರೈಲು ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಪಡೆಯಬೇಕಾಗುತ್ತದೆ ಎಂದು ಈ ವರದಿಗಳು ಹೇಳುತ್ತಿದ್ದರಿಂದ ಈ ಸುದ್ದಿಗಳು ಮತ್ತು ಮಾಧ್ಯಮ ವರದಿಗಳು ತಪ್ಪಾಗಿವೆ ಎಂದು ಇಲಾಖೆ ಹೇಳಿದೆ.
ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ತಿಳಿಸಲಾಗಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ, ಅವರು ಬಯಸಿದರೆ ಟಿಕೆಟ್ ಖರೀದಿಸಲು ಮತ್ತು ಅವರ 5 ವರ್ಷದೊಳಗಿನ ಮಗುವಿಗೆ ಸ್ಥಳವನ್ನು ಕಾಯ್ದಿರಿಸಲು ಆಯ್ಕೆಯನ್ನು ನೀಡಲಾಗಿದೆ. ಅವರು ಪ್ರತ್ಯೇಕ ಸ್ಥಳವನ್ನು ಬಯಸದಿದ್ದರೆ ಟಿಕೆಟ್ ಉಚಿತವಾಗಿದೆ. ಅದು ಮೊದಲಿನಂತೆಯೇ ನಿಯಮ ಇರುತ್ತದೆ ಎಂದು ಸ್ಪಷ್ಟೀಕರಣವನ್ನು ನೀಡಿದೆ.
ರೈಲ್ವೇ ಸಚಿವಾಲಯದ 06.03.2020 ರ ಸುತ್ತೋಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳು ಉಚಿತವಾಗಿ ಕರೆದುಕೊಂಡು ಹೋಗಬಹುದು ಎಂದು ಹೇಳುತ್ತದೆ. ಆದಾಗ್ಯೂ, ಪ್ರತ್ಯೇಕ ಆಸನವನ್ನು ನೀಡಲಾಗುವುದಿಲ್ಲ. ಆದ್ದರಿಂದ ಪ್ರತ್ಯೇಕ ಸ್ಥಳ ಬೇಡದಿದ್ದರೆ ಯಾವುದೇ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದಾಗ್ಯೂ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಪೂರ್ಣ ಆಸನವನ್ನು ಬುಕ್ ಮಾಡಿದರಷ್ಟೇ ಪೂರ್ಣ ವಯಸ್ಕ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಿದೆ.

ಲಕ್ನೋ ಮೇಲ್‌ನ ರೈಲಿನಲ್ಲಿ ಶಿಶುಗಳಿಗೆ ಆಸನ
1-5 ವರ್ಷ ವಯಸ್ಸಿನ ಮಕ್ಕಳಿಗೆ ಆಸನವನ್ನು ರಿಸರ್ವ್ ಮಾಡಿದರಷ್ಟೇ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೇ ಇತ್ತೀಚೆಗೆ ಲಕ್ನೋ ಮೇಲ್‌ನ ಎಸಿ ಮೂರನೇ ಬೋಗಿಯಲ್ಲಿ ಶಿಶುಗಳಿಗೆ ಆಸನದ ಆಯ್ಕೆಯನ್ನು ನೀಡಿದೆ. ಇದು ಪ್ರಯಾಣಿಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದೆ. ರೈಲು ನಿಲ್ದಾಣಗಳಲ್ಲಿ ಐಆರ್‌ಸಿಟಿಸಿ ಮತ್ತು ರೈಲ್ವೆ ಮೀಸಲಾತಿ ಬೂತ್‌ಗಳಲ್ಲಿ ಟಿಕೆಟ್ ಕಾಯ್ದಿರಿಸುವಾಗ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೀಟು ನೀಡುವ ವ್ಯವಸ್ಥೆಯನ್ನು ರೈಲ್ವೆ ಈಗ ಜಾರಿಗೆ ತಂದಿದೆ.

5 ವರ್ಷದೊಳಗಿನ ಮಕ್ಕಳಿಗೆ ಆಸನವಿರಲ್ಲ
ನಿಯಮದ ಪ್ರಕಾರ 5-11 ವರ್ಷದೊಳಗಿನ ಮಗುವಿಗೆ ಪೂರ್ಣ ಸ್ಥಳ ಕಾಯ್ದಿರಿಸಿದರೆ ಶುಲ್ಕ ಪಾವತಿಸಬೇಕಾಗುತ್ತದೆ. ಆದಾಗ್ಯೂ 5 ವರ್ಷದೊಳಗಿನ ಮಕ್ಕಳ ವಿಷಯಕ್ಕೆ ಬಂದರೆ, ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯು ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳ ಹೆಸರನ್ನು ಭರ್ತಿ ಮಾಡಿದ ನಂತರ ಮಕ್ಕಳ ಸ್ಥಳ ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನು ಹಾಕಿರುವುದಿಲ್ಲ.

ಸ್ಥಳಾವಕಾಶ ತೆಗೆದುಕೊಂಡರೆ ಪೂರ್ಣ ಶುಲ್ಕ
ಮಗುವಿನ ವಯಸ್ಸು 0 ಇಂದ 4 ವರ್ಷಗಳು ಇದ್ದರೆ ಸ್ಥಳಾವಕಾಶ ಕೋರದೆ ನೀವು ಆಯ್ಕೆ ಮಾಡಿದರೆ ಮಕ್ಕಳಿಗೆ ಉಚಿತ ಪ್ರಯಾಣ ಮಾಡಬಹುದಾಗಿದೆ. ಅದೇ ನೀವು ಮಕ್ಕಳ ಆಸನವನ್ನು ಆಯ್ಕೆ ಮಾಡಿದರೆ ಅರ್ಧ ಬೆಲೆ ಕಟ್ಟಬೇಕಾಗಿರುತ್ತದೆ. ಮಗುವಿನ ವಯಸ್ಸು 5-11 ವರ್ಷಗಳು ಇದ್ದರೆ ನೀವು ಪೂರ್ಣ ಸ್ಥಳವನ್ನು ಆಯ್ಕೆ ಮಾಡಿದರಷ್ಟೇ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ 12 ವರ್ಷವಯಸ್ಸು ಮೀರಿದ ಎಲ್ಲರಿಗೂ ಪೂರ್ಣ ಶುಲ್ಕ ಇರುತ್ತದೆ.

ರೈಲ್ವೆಯಿಂದ ಔಪಚಾರಿಕ ಪ್ರಕಟಣೆ ಇಲ್ಲ
ಟಿಕೆಟ್ ಕಾಯ್ದಿರಿಸಲು ಬಯಸುವ ಪ್ರಯಾಣಿಕರು ರೈಲು ಟಿಕೆಟ್‌ನಲ್ಲಿ ಪೂರ್ಣ ರಿಯಾಯಿತಿ ಪಡೆಯಲು ಶಿಶುಗಳ ಆಸನಕ್ಕೆ ಸ್ಥಳವನ್ನು ಕಾಯ್ದಿರಿಸಬೇಕು. ಭಾರತೀಯ ರೈಲ್ವೇ ಈ ವಿಷಯದ ಬಗ್ಗೆ ಯಾವುದೇ ಔಪಚಾರಿಕ ಪ್ರಕಟಣೆಯನ್ನು ಮಾಡಿಲ್ಲವಾದರೂ, IRCTCಯ ವೆಬ್‌ಸೈಟ್‌ನಲ್ಲಿ ಹೊಸ ಟಿಕೆಟ್ ನಿಯಮಗಳನ್ನು ಈಗಾಗಲೇ ಅನ್ವಯಿಸಲಾಗಿದೆ.












Click it and Unblock the Notifications