• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಂಸ ನಿಷೇಧದ ಬಗ್ಗೆ ಹರ್ಯಾಣ ಸರ್ಕಾರದಿಂದ ಸ್ಪಷ್ಟನೆ

By Mahesh
|

ಚಂಡೀಗಢ, ಸೆ. 13: ಜೈನರ ಉಪವಾಸ ಹಬ್ಬ 'ಪರ್ಯೂಷನ್ ಪರ್ವ' ಅಂಗವಾಗಿ ಮಾಂಸ ನಿಷೇಧಿಸಿರುವ ಬಿಜೆಪಿ ಆಡಳಿತದ ರಾಜ್ಯಗಳ ಪಟ್ಟಿಗೆ ಐದನೇ ರಾಜ್ಯವಾಗಿ ಹರ್ಯಾಣ ಸೇರ್ಪಡೆಗೊಂಡಿದೆ. ಅದರೆ, ಈ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಹರ್ಯಾಣ ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಛತ್ತೀಸ್‌ಗಢಗಳಲ್ಲಿ ವಿವಾದಾತ್ಮಕ ಮಾಂಸ ನಿಷೇಧ ಜಾರಿಯಲ್ಲಿದೆ.

ಜೈನರ ಉಪವಾಸ ಹಬ್ಬ 'ಪರ್ಯೂಷನ್ ಪರ್ವ' ಪ್ರಯುಕ್ತ ಸೆಪ್ಟಂಬರ್ 11 ರಿಂದ 19ರವರೆಗೆ ಎಲ್ಲ ಪ್ರಾಣಿ ವಧಾಗೃಹಗಳು ಮುಚ್ಚಿರಬೇಕು. ಈ ಅವಧಿಯಲ್ಲಿ ಪ್ರಾಣಿಗಳನ್ನು ಕೊಲ್ಲಬಾರದು ಎಂದು ನಗರ ಸ್ಥಳೀಯ ಸಂಸ್ಥೆಗಳ ಇಲಾಖೆ ಸೆಪ್ಟಂಬರ್ 10ರಂದು ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ. ಆದೇಶದ ಉಲ್ಲಂಘನೆಯಾದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆದೇಶ ಎಚ್ಚರಿಕೆ ನೀಡಲಾಗಿದೆ.

Haryana Government clarification on Paryushan Parva Meat Ban

ಅದರೆ, ಮಾಂಸ ಮಾರಾಟಕ್ಕೆ ನಿಷೇಧ ಹೇರಿಲ್ಲ. ಈಗ ಹಾಕಿರುವ ನಿರ್ಬಂಧದ ಆದೇಶ ಕೂಡಾ ತಾತ್ಕಾಲಿಕವಾಗಿದ್ದು, ವಧಾಗೃಹಗಳ ಮಾಲೀಕರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.

ಹರ್ಯಾಣದಲ್ಲಿ ನಿಷೇಧ ಆದೇಶವನ್ನು ಹೊರಡಿಸಿರುವುದು ಇದೇ ಮೊದಲ ಬಾರಿಯಾಗಿದೆ. ನವರಾತ್ರಿಯ ಅವಧಿಯಲ್ಲಿ ಇಂಥ ಆದೇಶವನ್ನು ಯಾಕೆ ಹೊರಡಿಸುವುದಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಮಾಂಸ ಮಾರುಕಟ್ಟೆ ಸಂಘದ ವಕ್ತಾರ ಸಲೀಂ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು haryana ಸುದ್ದಿಗಳುView All

English summary
Haryana State Government clarified that only an appeal had been made to shut slaughter houses and not kill animals during the Jain festival ‘Paryushan Parva'. The festival is being celebrated from September 11 to 19 this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more