ಹಾರ್ದಿಕ್ ಪಟೇಲ್ ಮೇಲೆ ಮತ್ತೊಂದು ಎಫ್ಐಆರ್
ಅಹಮದಾಬಾದ್, ಡಿಸೆಂಬರ್ 20: ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಸಂಚಾಲಕ ಹಾರ್ದಿಕ್ ಪಟೇಲ್ ಮೇಲೆ ನಗರ ಪೊಲೀಸರು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ಅನುಮತಿ ಪಡೆಯದೆ ಡಿಸೆಂಬರ್ 11ರಂದು 2,000ಕ್ಕೂ ಹೆಚ್ಚು ಬೈಕ್ ಹಾಗೂ ಇತರ ವಾಹನಗಳೊಂದಿಗೆ ಅಹಮದಾಬಾದ್ ನ ರಸ್ತೆಗೆ ನುಗ್ಗಿದ್ದ ಹಾರ್ದಿಕ್ ಪಟೇಲ್ ಮತ್ತು ಬೆಂಬಲಿಗರು ಬೃಹತ್ ರೋಡ್ ಶೋ ನಡೆಸಿದ್ದರು.
ಈ ರೋಡ್ ಶೋಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಮತ್ತು 50 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

"ಪೊಲೀಸರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಹಾರ್ದಿಕ್ ಪಟೇಲ್ ಮತ್ತು ಬೆಂಬಲಿಗರ ಮೇಲೆ ಕೇಸು ದಾಖಲಿಸಲಾಗಿದೆ," ಎಂದು ಬೋಪಾಲ್ ಪೊಲೀಸ್ ಇನ್ಸ್ ಪೆಕ್ಟರ್ ಐಎಚ್ ಗೋಹಿಲ್ ಹೇಳಿದ್ದಾರೆ.
ಎರಡನೇ ಹಂತದ ಮತದಾನ (ಡಿಸೆಂಬರ್ 14)ಕ್ಕೂ ಮೂರು ದಿನಗಳ ಹಿಂದೆ ಈ ರೋಡ್ ಶೋ ನಡೆದಿತ್ತು. ಅಹಮದಾಬಾದ್ ಹೊರವಲಯ ಬೋಪಾಲ್ ನಿಂದ ಆರಂಭವಾದ ಈ ರೋಡ್ ಶೋ 15 ಕಿಲೋಮೀಟರ್ ಕ್ರಮಿಸಿ ನಿಕೋಲ್ ನಲ್ಲಿ ಅಂತ್ಯವಾಗಿತ್ತು.
ಇದಾದ ಬಳಿಕ ಪೊಲೀಸ್ ಕಮಿಷನರ್ ಎ.ಕೆ ಸಿಂಗ್ ಹಾರ್ದಿಕ್ ಪಟೇಲ್ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದರು.












Click it and Unblock the Notifications