ಕರ್ನಾಟಕ ಸಂಗೀತದ ದಂತಕತೆ ಸುಬ್ಬುಲಕ್ಷ್ಮಿಗೆ ಟ್ವಿಟ್ಟಿಗರ ನಮನ

Posted By:
Subscribe to Oneindia Kannada

"ಕೌಸಲ್ಯ ಸುಪ್ರಜಾ ರಾಮಾ ಪೂರ್ವ ಸಂಧ್ಯಾ ಪ್ರವರ್ತತೆ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ..." ಎಂದು ಟೇಪ್ ರೆಕಾರ್ಡರ್ ನಲ್ಲಿ ಮಧುರ ಗಾನಮೊಳಗುತ್ತಿದ್ದರೆ, ಬೆಳಗಿಗೆ ಅದೇನೋ ಆಹ್ಲಾದದ ಮೆರಗು. ಏಳಲೋ, ಬೇಡವೋ ಎಂದು ಮುದುರಿ ಮಲಗಿದವರಲ್ಲೂ ಹೊಸ ಹುರುಪು ತುಂಬುವ ಬೆರಗು!

ಭಾರತ ರತ್ನ ಎಂ ಎಸ್ ಸುಬ್ಬಲಕ್ಷ್ಮಿ(16.09.1916- 11.12.2004) ಎಂದೊಡನೆ ಥಟ್ಟಂತ ನೆನಪಾಗುವುದು ಅವರೇ ಹಾಡಿದ ಈ ಸುಪ್ರಭಾತ. ಕರ್ನಾಟಕ ಸಂಗೀತದ ದಂತಕತೆ ಎಂದೇ ಕರೆಯಲ್ಪಡುವ, ಗಾನ ಕೋಗಿಲೆ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಜನ್ಮದಿನ ಇಂದು(ಸೆ.16).

ಸಂಗೀತ ಸಾಮ್ರಾಜ್ಞಿ ಸುಬ್ಬಲಕ್ಷ್ಮಿ

ಆಗಿನ ಮದ್ರಾಸ್ ಪ್ರಾಂತ್ಯದ ಮದುರೈನಲ್ಲಿ ಸೆಪ್ಟೆಂಬರ್ 16, 1916 ರಂದು ವೀಣಾ ವಾದಕಿ ಶಣ್ಮುಖವಡಿಯರ್ ಅಮ್ಮಾಳ್ ಮತ್ತು ಸುಬ್ರಹ್ಮಣ್ಯ ಅಯ್ಯರ್ ಅವರ ಪುತ್ರಿಯಾಗಿ ಜನಿಸಿದರು ಸುಬ್ಬುಲಕ್ಷ್ಮಿ. ಚಿಕ್ಕಂದಿನಿಂದಲೂ ಸಂಗೀತದ ಕುರಿತು ಅಪಾರ ಆಸಕ್ತಿ ಹೊಂದಿದ್ದ ಸುಬ್ಬುಲಕ್ಷ್ಮಿ, ಕರ್ನಾಟಕ ಸಂಗೀತ ಕ್ಷೇತ್ರದ ಘನತೆಯನ್ನು ವಿಶ್ವಮಟ್ಟದಲ್ಲಿ ಉತ್ತುಂಗಕ್ಕೇರಿಸಿದ ಹೆಗ್ಗಳಿಕೆಗೆ ಅರ್ಹರು.

ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಮಾತ್ರವಲ್ಲದೆ ಏಷ್ಯಾದ ನೊಬೆಲ್ ಪ್ರಶಸ್ತಿ ಎಂದೇ ಕರೆಯಲ್ಪಡುವ ಮ್ಯಾಗ್ಸೆಸ್ಸೇ ಗೌರವಕ್ಕೂ ಪಾತ್ರರಾಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಗಾಯಕಿ ಎಂಬ ಕೀರ್ತಿಗೆ ಪಾತ್ರರಾದರು.

ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ?

ಅವರ ಜನ್ಮದಿನದಂದು, ಸುಬ್ಬುಲಕ್ಷ್ಮಿ ಅವರ ಹಲವು ಅಭುಮಾನಿಗಳು, ಗಣ್ಯರು ಅವರನ್ನು ಸ್ಮರಿಸಿದ್ದಾರೆ. ಎಂ ಎಸ್ ಅವರ ಬಗೆಗೆ ಅಭಿಮಾನಿಗಳ ಟ್ವೀಟ್ ನಿಮಗಾಗಿ ಇಲ್ಲಿದೆ.

ಧ್ವನಿಯಲ್ಲಿ ದೈವಿಕ ಶಕ್ತಿ

ಎಂ ಎಸ್ ಸುಬ್ಬಲಕ್ಷ್ಮಿ ಅವರಿಗೆ ಪ್ರಣಾಮಗಳು. ಅವರ ಧ್ವನಿಯಲ್ಲಿ ಒಂದು ಥರದ ದೈವಿಕ ಶಕ್ತಿಯಿದೆ. ಅದು ಸೃಷ್ಟಿಕರ್ತನೊಂದಿಗೆ ಬೆಸೆಯುವಂತೆ ಮಾಡುತ್ತದೆ ಎಂದು ಡಾ.ಪ್ರಶಾಂತ್ ನಾಯರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅವರ ಧ್ವನಿ ಇನ್ನೂ ಜೀವಂತ

ಇತಿಹಾಸದಲ್ಲಿ ಈ ದಿನ ಸುಬ್ಬುಲಕ್ಷ್ಮಿ ಎಂಬ ದಂತಕತೆ ಜನಿಸಿದರು. 101 ವರ್ಷದ ನಂತರವೂ ಅವರ ಧ್ವನಿ ಇಂದಿಗೂ ಜೀವಂತವಾಗಿದೆ. ಅವರ ಧ್ವನಿ ನಮ್ಮ ಹೃದಯದಲ್ಲಿ ಸದಾ ಪ್ರತಿಧ್ವನಿಸುತ್ತಲೇ ಇರುತ್ತದೆ ಎಂದು ಅಶ್ವಿನಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬೆಳಗ್ಗಿನ ಅಲಾರ್ಮ್

ದಕ್ಷಿಣ ಭಾರತದಲ್ಲಿ ಆಕೆಯ ಸುಪ್ರಭಾತವೇ ಬೆಳಗ್ಗಿನ ಅಲಾರ್ಮ್. ಆಕೆಯದು ಚಿನ್ನದಂಥ ವ್ಯಕ್ತಿತ್ವ ಎಂದು ಕೃಷ್ಣ ಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ದಿನದ ಮೊದಲ ಧ್ವನಿ

ಇಂದಿಗೂ ಭಾರತದ ಹಲವು ಕಡೆಗಳಲ್ಲಿ ದಿನದ ಆರಂಭದಲ್ಲಿ ಮೊದಲು ಕೇಳುವ ಧ್ವನಿ ಎಂ.ಎಸ್.ಸುಬ್ಬುಲಕ್ಷ್ಮಿಯವರದು. ಅವರ ಧ್ವನಿ ಇಲ್ಲದೆ ದಿನ ಸಂಪೂರ್ಣವಾಗುವುದಿಲ್ಲ ಎಂದು ಟ್ವಿಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the legends of Carnatic music, M S Subbulakshmi was born on 1916 September 1916. Today is her 101st birthday. Here are few twitter statements on her.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ