ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ

ಲಕ್ನೋ, ನವೆಂಬರ್ 19: ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಛತ್ತೀಸ್ ಗಢದಲ್ಲಿ ಮತದಾರರನ್ನು ಸೆಳೆಯುವ ಭರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಗೆ ಮುಜುಗರ ಉಂಟುಮಾಡಿದ್ದಾರೆ.

ಆಂಜನೇಯ ದೇವರು ಪ್ರಮುಖ ಬುಡಕಟ್ಟು ಸಮುದಾಯಕ್ಕೆ ಸೇರಿದವನು. ನವೆಂಬರ್ 20ರಂದು ಹನುಮಾನ್ ದಿನ ಎಂದು ಪರಿಗಣಿಸಿ ಜನರು ಬೃಹತ್ ಸಂಖ್ಯೆಯಲ್ಲಿ ಹೊರಬಂದು ಮತಚಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

'ಹನುಮಾನ್ ಅತಿ ದೊಡ್ಡ ಆದಿವಾಸಿ, ವನವಾಸಿಯಾಗಿದ್ದ' ಎಂದು ಛತ್ತಿಸ್‌ಗಢದ ಭಟ್ಗಾಂವ್‌ದಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಹೇಳಿದರು.

hanuman most prominent tribal: yogi adityanath in chhattisgarh

ಶ್ರೀರಾಮನು ವನವಾಸದ ವೇಳೆ ರಾಕ್ಷಸರ ಕ್ರೌರ್ಯವನ್ನು ಅಡಗಿಸಲು ಇಲ್ಲಿನ ಬುಡಕಟ್ಟು ಸಮುದಾಯದವರಿಗೆ ನೆರವಾಗಿದ್ದ. ತ್ರೇತಾಯುಗದಲ್ಲಿ ಶ್ರೀರಾಮ ಮಾಡಿದ್ದಂತೆ, ರಾಜ್ಯದಲ್ಲಿ ಬಿಜೆಪಿ ರಾಮರಾಜ್ಯ ಸೃಷ್ಟಿಸುವ ಗುರಿ ಹೊಂದಿದೆ ಎಂದರು.

ರಾಕ್ಷಸೀಯ ಶಕ್ತಿಗಳು ಛತ್ತೀಸ್ ಗಢವನ್ನು ಹಾಳುಮಾಡಲು ಪ್ರಯತ್ನಿಸುತ್ತಲೇ ಇವೆ. ಕಾಂಗ್ರೆಸ್ ರಾಜ್ಯವನ್ನು ಭೂಗಳ್ಳರಿಗೆ ಒಪ್ಪಿಸಿದೆ. ಅಲ್ಲದೆ ಧಾರ್ಮಿಕ ಮತಾಂತರಕ್ಕೆ ನೆರವು ನೀಡುತ್ತಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+