ಹಲ್ವಾ ಸಮಾರಂಭದಲ್ಲಿ ಪಾಲ್ಗೊಂಡ ಜೇಟ್ಲಿ, ಬಜೆಟ್ ಮುದ್ರಣ ಆರಂಭ
ನವದೆಹಲಿ, ಜನವರಿ 20: ಪ್ರತಿ ಶುಭಕಾರ್ಯ ಮಾಡುವಾಗ ಸಿಹಿ ಹಂಚಿಕೆಗೆ ಮಹತ್ವ ನೀಡುವಂತೆ ಬಜೆಟ್ ಗೂ ಮುನ್ನ 'ಹಲ್ವಾ ಸಮಾರಂಭ' ನಡೆಯುವುದು ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ಅದರಂತೆ ಇಂದು ಸಾಂಪ್ರದಾಯಿಕಾಗಿ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಹಲ್ವಾ ಸಮಾರಂಭ ನಡೆಯಿತು. ಹಲ್ವಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪಾಲ್ಗೊಂಡಿದ್ದರು.
ಬಜೆಟ್ ದಾಖಲೆಗಳ ಮುದ್ರಣ ಆರಂಭಿಸುವ ಮುನ್ನ ಹಲ್ವಾ ಸಮಾರಂಭ ನಡೆಯುತ್ತದೆ. ಹಾಗಾಗಿ ಹಲ್ವಾ ಸಮಾರಂಭ ನಡೆಯಿತೆಂದರೆ ಬಜೆಟ್ ಪ್ರತಿ ಮುದ್ರಣ ಆರಂಭವಾಯಿತು ಎಂದೇ ಅರ್ಥ. ಹೀಗಾಗಿ ಈ ಬಾರಿಯ ಬಜೆಟ್ ಮುದ್ರಣ ಆರಂಭವಾಗಿದೆ.

ಹಲ್ವಾ ಸಮಾರಂಭದ ನಂತರ ವಿತ್ತ ಸಚಿವಾಲಯದ ಸಿಬ್ಬಂದಿಗಳಿಗೆ ಮೊದಲಿಗೆ ಸಿಹಿ ಹಂಚಲಾಗುತ್ತದೆ. ಬಜೆಟ್ ಮಂಡನೆಯಾಗುವವರೆಗೆ ಬಜೆಟ್ ಪ್ರತಿ ಮುದ್ರಿಸುವವರು, ಬಜೆಟ್ ತಯಾರಿಸುವ ಸರ್ಕಾರಿ ಸಿಬ್ಬಂದಿಗಳ ಮೊಬೈಲ್, ಲ್ಯಾಂಡ್ ಫೋನ್ ಸ್ಥಗಿತಗೊಳಿಸಲಾಗಿರುತ್ತದೆ.

ಫೆಬ್ರವರಿ 1ರಂದು ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದು, ಇದು ನರೇಂದ್ರ ಮೋದಿ ಸರಕಾರದ ಕೊನೆಯ ಪೂರ್ಣ ಆಯವ್ಯಯವಾಗಿದೆ. ಮುಂದಿನ ವರ್ಷ ಮೋದಿ ಸರಕಾರ ಚುನಾವಣೆ ಎದುರಿಸಬೇಕಾಗಿರುವುದರಿಂದ ಬಜೆಟ್ ನಲ್ಲಿ ಭರಪೂರ ಕೊಡುಗೆಗಳನ್ನು ನೀಡಬಹುದು ಎಂದು ಜನರು ಕಾಯುತ್ತಿದ್ದಾರೆ.












Click it and Unblock the Notifications