ಕಾರ್ಗಿಲ್ ಅಲ್ಲ, ಅಮರನಾಥ ಯಾತ್ರಿಕರ ರಕ್ಷಣೆ ವೇಳೆ ಕೌರ್ ತಂದೆ ಹುತಾತ್ಮ!

ತಮ್ಮ ಎರಡು ಪೋಸ್ಟ್ ಗಳ ಮೂಲಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಭಾರತದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. ಆಕೆ ಕ್ಯಾಪ್ಟನ್ ಮಂದೀಪ್ ಸಿಂಗ್ ಪುತ್ರಿ.

ಬೆಂಗಳೂರು, ಫೆಬ್ರವರಿ 28: ತಮ್ಮ ಎರಡು ಪೋಸ್ಟ್ ಗಳ ಮೂಲಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಭಾರತದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. ಆಕೆ ಕ್ಯಾಪ್ಟನ್ ಮಂದೀಪ್ ಸಿಂಗ್ ಪುತ್ರಿ.

ಕ್ಯಾಪ್ಟನ್ ಮಂದೀಪ್ ಸಿಂಗ್ ಕಾರ್ಗಿಲ್ ಯುದ್ಧದಲ್ಲಿ ಸತ್ತಿದ್ದಲ್ಲ; ಬದಲಿಗೆ ಅಮರನಾಥ ಯಾತ್ರಿಕರಿಗೆ ರಕ್ಷಣೆ ನೀಡುವ ವೇಳೆ ಸಾವನ್ನಪ್ಪಿದರು ಎನ್ನುತ್ತವೆ ಮೂಲಗಳು.[ನಿಮ್ಮ ತಂದೆಯನ್ನು ಕೊಂದ ದೇಶ ಯಾವುದಮ್ಮಾ? ಕೌರ್ ಗೆ ಪ್ರತಾಪ್ ಪ್ರಶ್ನೆ]

ಕ್ಯಾಪ್ಟನ್ ಮಂದೀಪ್ ಸಿಂಗ್ ಓರ್ವ ದಕ್ಷ ಉತ್ಸಾಹಿ ಯುವ ಅಧಿಕಾರಿಯಾಗಿದ್ದರು ಎನ್ನುತ್ತಾರೆ ಅವರ ಸಹೋದ್ಯೋಗಿಗಳು. 4- ರಾಷ್ಟ್ರೀಯ ರೈಫಲ್ಸ್ ನಲ್ಲಿ ಮಂದೀಪ್ ಸಿಂಗ್ ಕ್ಯಾಪ್ಟನ್ ಆಗಿದ್ದರು.

Gurmehar's father was martyred while protecting the Amarnath Yatra

ಅದು 1999 ಆಗಸ್ಟ್ 6, ಉಗ್ರರ ಜತೆ ಕಾದಾಡುತ್ತಾ ಕ್ಯಾಪ್ಟನ್ ಮಂದೀಪ್ ಸಿಂಗ್ ಅಸುನೀಗಿದ ದಿನ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಚಾಕ್ ನುಟ್ನುಸಾ ಜಿಲ್ಲೆಯಲ್ಲಿ ಮಧ್ಯರಾತ್ರಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಪ್ರಾಣ ಕಳೆದುಕೊಳ್ಳಬೇಕಾಯಿತು.[ಕೌರ್ ಗೆ ಬೆದರಿಕೆ ಹಾಕಿದವರನ್ನು ಬಂಧಿಸಲು ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ]

ಕ್ಯಾಪ್ಟನ್ ಸಿಂಗ್ ತುಕಡಿಯನ್ನು ಮುನ್ನಡೆಸುತ್ತಿದ್ದರು. ರಾತ್ರಿ 1 ಗಂಟೆ 15 ನಿಮಿಷಕ್ಕೆ ನಡೆದ ಈ ದಾಳಿಯಲ್ಲಿ ಸಿಂಗ್ ಸೇರಿ ಒಟ್ಟು 7 ಜನ ಪ್ರಾಣ ಕಳೆದುಕೊಂಡರು. ಹೀಗಿದ್ದೂ ಉಗ್ರರನ್ನು ಹೊಡೆದುರುಳಿಸಿ ಯಾತ್ರಾರ್ಥಿಗಳನ್ನು ರಕ್ಷಿಸಲಾಗಿತ್ತು. ಗುಂಡೊಂದು ದೇಹ ಹೊಕ್ಕಿದ್ದರಿಂದ ತುಕಡಿ ಮುನ್ನಡೆಸುತ್ತಿದ್ದ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

'ನನ್ನ ತಂದೆಯನ್ನು ಕೊಂದಿದ್ದು ಯುದ್ಧ, ಪಾಕಿಸ್ತಾನವಲ್ಲ' ಹಾಗೂ 'ಎಬಿವಿಪಿಯ ಬಗ್ಗೆ ನನಗೆ ಭಯವಿಲ್ಲ' ಎನ್ನುವ ಪೋಸ್ಟ್ ಗಳನ್ನು ಹಾಕುವುದರ ಮೂಲಕ ಗುರ್ಮೆಹರ್ ಕೌರ್ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ. ಆಕೆಯ ಪೋಸ್ಟ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಸಂಘರ್ಷಕ್ಕೂ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+