ಸಿಆರ್‌ಪಿಎಫ್ ಮೇಲೆ ಉಗ್ರರ ದಾಳಿ, ಓರ್ವನ ಸಾವು, ಐವರಿಗೆ ಗಾಯ

ಪ್ರತ್ಯೇಕತಾವಾದಿಗಳು ಚುನಾವಣೆಯನ್ನು ನಿಷೇಧಿಸಬೇಕೆಂದು ಕರೆ ನೀಡಿದ್ದಾರೆ. ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದರು. ಗಾಯಗೊಂಡ 6 ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀನಗರ, ಏಪ್ರಿಲ್ 03 : ಶ್ರೀನಗರದ ಪಂತ ಚೌಕ್ ನಲ್ಲಿ ಸೋಮವಾರ ಉಗ್ರರು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು, ಐವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.

ಚನಾನಿ-ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿಗಳನ್ನುದ್ದೇಶಿಸಿ, ನಿಮಗೆ ಟೂರಿಸಂ ಬೇಕೋ ಟೆರ್ರರಿಸಂ ಬೇಕೋ ಎಂದು ಕೇಳಿದ ಮರುದಿನವೇ ಉಗ್ರರು ಜಮ್ಮುವಿನಲ್ಲಿ ದಾಳಿ ನಡೆಸಿದ್ದಾರೆ. [ಟೂರಿಸಂ ಬೇಕಾ, ಟೆರರಿಸಂ ಬೇಕಾ?: ಕಾಶ್ಮೀರಿಗಳಿಗೆ ಮೋದಿ ಪ್ರಶ್ನೆ]

Gunmen attack CRPF convoy in Srinagar, CRPF personnel injured

ಚುನಾವಣಾ ಕರ್ತವ್ಯ ನಿರ್ವಹಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಆಗ ಇದ್ದಕ್ಕಿದ್ದಂತೆ ಪೊಲೀಸ್ ವಾಹನದ ಮೇಲೆ ಉಗ್ರರು ಗುಂಡಿನ ಮಳೆ ಸುರಿಸಿದ್ದಾರೆ. ಈ ದಾಳಿಯಲ್ಲಿ ಐದು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಾಳುವಾಗಿದ್ದ ಒಬ್ಬ ಪೊಲೀಸ್ ಸಿಬ್ಬಂದಿ ಸಾವಿಗೀಡಾದರು.

ಗುಂಡಿನ ಮಳೆ ಸುರಿಸಿ ಪರಾರಿಯಾಗಿರುವ ಉಗ್ರರನ್ನು ಭಾರತೀಯ ಸೈನಿಕರು ಹುಡುಕಾಡುತ್ತಿದ್ದಾರೆ. ಈ ಘಟನೆಯಲ್ಲಿ ಓರ್ವ ಮಹಿಳೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. [ಕಾಶ್ಮೀರದ ಉಗ್ರರು, ಯುವಕರಿಗೆ ಪಾಕ್ ಕಡೆಯಿಂದ ನೇರ ಸೂಚನೆ!]

ಪ್ರತ್ಯೇಕತಾವಾದಿಗಳು ಚುನಾವಣೆಯನ್ನು ನಿಷೇಧಿಸಬೇಕೆಂದು ಕರೆ ನೀಡಿದ್ದಾರೆ. ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದರು. ಗಾಯಗೊಂಡ 6 ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಆರ್‌ಪಿಎಫ್ ವಕ್ತಾರ ಬಿ ಚೌಧರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+