ಮೆಹ್ಸಾನಾ ಪ್ರವೇಶಿಸಲು ಹಾರ್ದಿಕ್ ಪಟೇಲ್‌ಗೆ ಸಿಕ್ತು ಅನುಮತಿ

ನವದೆಹಲಿ, ನವೆಂಬರ್ 12: ವಿರಾಮಗಾಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ (ಪಿಎಎಎಸ್) ಮಾಜಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಮೆಹ್ಸಾನಾ ಜಿಲ್ಲೆಗೆ ಪ್ರವೇಶಿಸಲು ಗುಜರಾತ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಈ ಹಿಂದೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಿದರೆ ಯಾವುದೇ ಅಭ್ಯಂತರವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಹಾರ್ದಿಕ್ ವಿರಾಮಗಮ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಜನಾದೇಶ ಪಡೆದರು.

ಹಾರ್ದಿಕ್ ಪಟೇಲ್ ಅರ್ಜಿಯ ಕುರತು ರಾಜ್ಯ ಸರ್ಕಾರದಿಂದ ಬದಲಾಗಿರುವ ನಿಲುವನ್ನು ಆಲಿಸಿದ ನ್ಯಾಯಮೂರ್ತಿ ಎಸ್ ಎಚ್ ವೋರಾ, ನಿಮ್ಮ ಸರ್ಕಾರದ ನಿಲುವು ಎಂದಾದರೂ ಖಚಿತವಾಗಿದೆಯೇ?," ಎಂದು ಟೀಕಿಸಿದರು.

 ನಿಲುವು ಬದಲಿಸಿದ್ದು ಏಕೆ ಬಿಜೆಪಿ ಸರ್ಕಾರ?

ನಿಲುವು ಬದಲಿಸಿದ್ದು ಏಕೆ ಬಿಜೆಪಿ ಸರ್ಕಾರ?

ಗುಜರಾತ್ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿಯು ಹಾರ್ದಿಕ್ ಪಟೇಲ್ ಕುರಿತಾಗಿ ತನ್ನ ನಿಲುವನ್ನು ಹೇಗೆ ಬದಲಿಸಿಕೊಂಡಿತು ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಈ ಕುರಿತು ಪ್ರಶ್ನೆ ಮಾಡುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಕುಳಿತವರ ಮುಖದಲ್ಲಿ ನಗು ಮೂಡಿಸಿತು. ಈ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನವಾದ ಡಿಸೆಂಬರ್ 8ರಂದು ಸರ್ಕಾರಕ್ಕೆ ಏನಾಗಬೇಕೆಂಬುದು ನಿರ್ಧಾರವಾಗಲಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.

 ಮೆಹ್ಸಾನಾ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ

ಮೆಹ್ಸಾನಾ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ

ಕಳೆದ 2018ರಲ್ಲಿ ಹಾರ್ದಿಕ್ ಪಟೇಲ್ ರಿಗೆ ನೀಡಿದ್ದ ಷರತ್ತುಬದ್ಧ ಜಾಮೀನಿನಲ್ಲಿ ಮೆಹ್ಸಾನಾ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ ವಿಸ್ನಗರ ನ್ಯಾಯಾಲಯವು ಈ ಷರತ್ತಿನ ಮೇಲೆ ಅವರಿಗೆ ಜಾಮೀನು ನೀಡಿತ್ತು, ಇದರಲ್ಲಿ ಅವರು ತಪ್ಪಿತಸ್ಥರು ಎಂದು ಹೇಳಿತ್ತು. ಅಲ್ಲದೇ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣವು 2015 ರಲ್ಲಿ ಪಾಟಿದಾರ್ ಯುವಕರ ಮೆರವಣಿಗೆಯಲ್ಲಿ ಪ್ರಸ್ತುತ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಕಚೇರಿಯ ಮೇಲೆ ದಾಳಿಗೆ ಸಂಬಂಧಿಸಿತ್ತು. ಪಾಟಿದಾರ್ ಸಮುದಾಯಕ್ಕೆ ಒಬಿಸಿ ಮೀಸಲಾತಿಗಾಗಿ ಒತ್ತಾಯಿಸಿದ ಹಾರ್ದಿಕ್ ಪಟೇಲ್, ಅವರ ನಾಯಕರಾಗಿ ಹೊರಹೊಮ್ಮಿದ್ದರು. ಆದರೆ 2018ರಲ್ಲಿ ಶಿಕ್ಷೆಗೊಳಗಾದ ಹಾರ್ದಿಕ್ ಪಟೇಲ್, ಈ ಶಿಕ್ಷೆಯಿಂದಾಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಿಕೊಂಡರು.

 ಹಾರ್ದಿಕ್ ಪಟೇಲ್ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ

ಹಾರ್ದಿಕ್ ಪಟೇಲ್ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ

2022ರ ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಹಾರ್ದಿಕ್ ಪಟೇಲ್ ಶಿಕ್ಷೆಗೆ ತಡೆ ನೀಡುವ ಮೂಲಕ ಚುನಾವಣೆಗೆ ಸ್ಪರ್ಧಿಸಲು ದಾರಿ ಮಾಡಿಕೊಟ್ಟಿತು. ಬಿಜೆಪಿ ಸೇರುವುದಕ್ಕಾಗಿ ಹಾರ್ದಿಕ್ ಪಟೇಲ್, ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಿದರು. ಇತ್ತೀಚೆಗೆ ಅವರ ತವರು ಪಟ್ಟಣವಾದ ವಿರಾಮ್‌ಗಮ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. 2018 ರಿಂದ ಹಾರ್ದಿಕ್ ಮೆಹ್ಸಾನಾ ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರು. ಶಿಕ್ಷೆಯನ್ನು ಪ್ರಶ್ನಿಸುವ ಸಂದರ್ಭದಲ್ಲಿ, ಅವರು ಈ ಷರತ್ತನ್ನು ಶಾಶ್ವತವಾಗಿ ಅಳಿಸಲು ಹೈಕೋರ್ಟ್‌ಗೆ ವಿನಂತಿಸಿದರು. ಈ ಅರ್ಜಿ ಬಾಕಿ ಉಳಿದಿದ್ದು, 2023ರ ಜನವರಿಯಲ್ಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.

 ನವೆಂಬರ್ ತಿಂಗಳ ಆರಂಭದಲ್ಲಿ ಮತ್ತೊಂದು ಅರ್ಜಿ

ನವೆಂಬರ್ ತಿಂಗಳ ಆರಂಭದಲ್ಲಿ ಮತ್ತೊಂದು ಅರ್ಜಿ

ಈ ತಿಂಗಳ ಆರಂಭದಲ್ಲಿ ವಕೀಲ ರಫೀಕ್ ಲೋಖಂಡ್ವಾಲಾ ಮೂಲಕ ಹಾರ್ದಿಕ್ ಪಟೇಲ್ ಮತ್ತೊಂದು ಅರ್ಜಿಯನ್ನು ಸಲ್ಲಿಸಿದರು. ನವೆಂಬರ್ 7, 2023ರವರೆಗೆ ಒಂದು ವರ್ಷದ ಅವಧಿಸಿಗೆ ವಿಧಿಸಿದ ಷರತ್ತುಗಳನ್ನು ಅಮಾನತುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಹಿಂದೆ ಮೆಹ್ಸಾನಾ ಪ್ರವೇಶಿಸಲು ಅನುಮತಿಗಾಗಿ ಹಾರ್ದಿಕ್ ಸಲ್ಲಿಸಿದ ಅರ್ಜಿಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ ರಾಜ್ಯ ಸರ್ಕಾರವು ತನ್ನ ನಿಲುವು ಬದಲಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+