Gujarat Exit Polls Results 2022 : ಗುಜರಾತ್‌ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ 2022, ಇಲ್ಲಿದೆ ಗೆಲ್ಲುವವರ ಪಟ್ಟಿ

ನವದೆಹಲಿ, ಡಿಸೆಂಬರ್‌ 5: ಗುಜರಾತ್ ವಿಧಾನಸಭಾ ಚುನಾವಣೆ 2022 ರ ಎರಡನೇ ಹಂತದ ಚುನಾವಣೆ ಮುಗಿದಿದೆ. ಇದರೊಂದಿಗೆ ಎಲ್ಲ ಹಂತದ ಚುನಾವಣೆ ಮುಗಿದಂತಾಗಿದೆ. ಗುಜರಾತ್‌ಗೆ ಮೊದಲ ಹಂತದ ಚುನಾವಣೆಯು ಡಿಸೆಂಬರ್‌ 1 ರಂದು ನಡೆದಿತ್ತು. ಈಗ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ.

ಗುಜರಾತ್‌ನಲ್ಲಿ ಆಡಳಿತರೂಢ ಬಿಜೆಪಿ ಈ ಬಾರಿ ಗೆಲುವಿನ ಭಾವುಟ ಹಾರಿಸಲು ನೋಡುತ್ತಿದ್ದು, ಕಾಂಗ್ರೆಸ್‌ ಹಾಗೂ ಎಎಪಿ ಕೂಡ ಪ್ರಮುಖ ಸ್ಪರ್ಧೆ ಒಡ್ಡಿವೆ. ಈಗ ಎರಡನೇ ಹಂತದ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ ಡಿಸೆಂಬರ್‌ 1ರಂದು 83 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆದಿತ್ತು. ಗುಜರಾತ್‌ನಲ್ಲಿ ಎರಡನೇ ಮತ್ತು ಅಂತಿಮ ಹಂತದ ಮತದಾನ ಇಂದು ಮುಕ್ತಾಯಗೊಂಡಿದೆ.

ಇದರೊಂದಿಗೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಮುಕ್ತಾಯಗೊಂಡಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶದ ಭವಿಷ್ಯ ನುಡಿಯುವ ಎಕ್ಸಿಟ್ ಪೋಲ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷದ ಪ್ರವೇಶದೊಂದಿಗೆ ಚುನಾವಣಾ ಕದನ ಇನ್ನಷ್ಟು ತೀವ್ರಗೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಪಂಜಾಬ್ ರಾಜ್ಯ ಚುನಾವಣೆಯಲ್ಲಿ ತನ್ನ ಯಶಸ್ಸಿನಿಂದ ಉತ್ತೇಜನಗೊಂಡ ಗುಜರಾತ್‌ನತ್ತ ತನ್ನ ಗಮನವನ್ನು ಹರಿಸಿದೆ. ಎಎಪಿ ಗುಜರಾತ್‌ನ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.

Gujarat Exit Polls Results 2022 Released; Check Who will win in Gujarat

ಡಿಸೆಂಬರ್ 1 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಗುಜರಾತ್ ನಲ್ಲಿ ಒಟ್ಟಾರೆ ಶೇ.63.14ರಷ್ಟು ಮತದಾನವಾಗಿತ್ತು. ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳ 19 ಜಿಲ್ಲೆಗಳಲ್ಲಿ ಹರಡಿರುವ 89 ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ನಡೆದಿತ್ತು. ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಲ್ಲಿ 89 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟಾರೆ ಶೇ.63.31ರಷ್ಟು ಮತದಾನವಾಗಿತ್ತು.

2017ರಲ್ಲಿ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದ್ದಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಆಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

Gujarat Exit Polls Results 2022 Released; Check Who will win in Gujarat

ನ್ಯೂಸ್‌ ಎಕ್ಸ್‌ನಿಂದ ಚುನಾವಣೋತ್ತರ ಸಮೀಕ್ಷೆ ಬಿಡುಗಡೆಯಾಗಿದ್ದು, ಇದರಲ್ಲಿ ಬಿಜೆಪಿಗೆ ಒಟ್ಟಾರೆ 182 ವಿಧಾನಸಭಾ ಸ್ಥಾನಗಳಲ್ಲಿ 117ರಿಂದ 140 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ತಿಳಿಸಿದೆ. ಇದೇ ಕಾಂಗ್ರೆಸ್‌ಗೆ 34ರಿಂದ 51 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಅಲ್ಲದೆ ಆಮ್ ಆದ್ಮಿ ಪಕ್ಷಕ್ಕೆ 6ರಿಂದ 13 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ನ್ಯೂಸ್‌ ಎಕ್ಸ್‌ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+