Gujarat Elections 2022: ರವೀಂದ್ರ ಜಡೇಜಾ ಸಹೋದರಿಯಿಂದ ಕಾಂಗ್ರೆಸ್‌ ಪರ ಪ್ರಚಾರ

ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಕುಟುಂಬ ರಾಜಕಾರಣ ಚರ್ಚೆಯಲ್ಲಿದೆ. ಅವರ ಪತ್ನಿ ರಿವಾಬಾ ಬಿಜೆಪಿಗೆ ಸೇರಿದರೆ, ಅವರ ಸಹೋದರಿ ನೈನಾ ಜಡೇಜಾ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಅದೇನೆಂದರೆ, ಜಡೇಜಾ ಕುಟುಂಬವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ರಾಜಕೀಯದ ಒಂದು ಭಾಗವಾಗಿದೆ. ಈ ರಾಜಕೀಯದಿಂದಾಗಿ, ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯೊಂದಿಗೆ ಅವರ ಪತ್ನಿ ರಿವಾಬಾ ಜಡೇಜಾ ಮತ್ತು ಅವರ ಸಹೋದರಿ ನೈನಾ ಜಡೇಜಾ ಮುಖಾಮುಖಿಯಾಗಿದ್ದಾರೆ. ರಿವಾಬಾ ಅವರನ್ನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರಮಾಡಿಕೊಂಡರು. ಹೀಗಾಗಿ ಗುಜರಾತ್ ಚುನಾವಣೆ ಪ್ರಚಾರ ರಂಗೇರುತ್ತಿದೆ. ಇದರ ನಡುವೆ ರವೀಂದ್ರ ಜಡೇಜಾ ಪತ್ನಿಯ ಪರವೋ ಸಹೋದರಿ ಪರವೋ ಎಂಬ ಪ್ರಶ್ನೆ ಎದುರಾಗಿದೆ.

ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಶಾ ಅವರನ್ನು ಜಡೇಜಾ ಅವರ ಪತ್ನಿ ಇಂದು ಭೇಟಿಯಾದರು. ಬಿಜೆಪಿ ಟಿಕೆಟ್‌ನಲ್ಲಿ ರಿವಾಬಾ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಗುಜರಾತ್‌ನ ಜಾಮ್‌ನಗರ ಉತ್ತರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗಾಗಿ ಪ್ರಚಾರ ಮಾಡುತ್ತಿದ್ದಾರೆ.

ಜಾಮ್‌ನಗರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ

ಜಾಮ್‌ನಗರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ

ಆದರೆ ರವೀಂದ್ರ ಅವರು ಪತ್ನಿಯೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣಾ ಪೂರ್ವ ಸುದ್ದಿಗೋಷ್ಠಿಯಲ್ಲಿ ರವೀಂದ್ರ ಜಡೇಜಾ ತಮ್ಮ ಪತ್ನಿಗೆ ಬೆಂಬಲ ಸೂಚಿಸಿದ್ದರು. ಆದರೆ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ ಮಾತನಾಡಿ 'ನನ್ನ ಅತ್ತಿಗೆ ಬಿಜೆಪಿಯಿಂದ ಟಿಕೆಟ್ ಪಡೆದಂತೆ, ನಾನು ಕೂಡ ಜಾಮ್‌ನಗರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ, ಆದರೆ ಪಕ್ಷವು ನಿರಾಕರಿಸಿತು' ಎಂದು ಹೇಳಿದ್ದಾರೆ.

ವೈಯಕ್ತಿಕ ಅಲ್ಲ ರಾಜಕೀಯ

ವೈಯಕ್ತಿಕ ಅಲ್ಲ ರಾಜಕೀಯ

ನೈನಾ ಜಡೇಜಾ ಮಾತನಾಡಿ, 'ಕಾಂಗ್ರೆಸ್ ನಾಯಕತ್ವದಲ್ಲಿರುವ ಹಿರಿಯ ನಾಯಕರು ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರು ಟಿಕೆಟ್ ಕೊಟ್ಟಿದ್ದರೆ ನನ್ನ ಮತ್ತು ಅತ್ತಿಗೆ ನಡುವೆಯೇ ಸ್ಪರ್ಧೆ ಏರ್ಪಡುತ್ತಿತ್ತು' ಎಂದಿದ್ದಾರೆ. "ನಾನು ರವೀಂದ್ರ ಜಡೇಜಾ ಅಥವಾ ಅವರ ಹೆಂಡತಿಯನ್ನು ಭೇಟಿಯಾದಾಗ, ನಾನು ರಾಜಕೀಯದ ಬಗ್ಗೆ ಚರ್ಚಿಸುವುದಿಲ್ಲ" ಎಂದು ನೈನಾ ಹೇಳಿದರು.

ಭಾರತ ಪ್ರಜಾಪ್ರಭುತ್ವ ದೇಶ ಮತ್ತು ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ರಿವಾಬಾ ಅವರೊಂದಿಗಿನ ನೈನಾ ಅವರ ಹೋರಾಟವು ವೈಯಕ್ತಿಕವಲ್ಲ. ಆದರೆ ಸೈದ್ಧಾಂತಿಕ. 2019 ರಿಂದ ನಾವು ನಮ್ಮ ಪಕ್ಷಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ ಅದು ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ನಾವು ಬಿಡಲಿಲ್ಲ. ಅವರು ತಮ್ಮ ಹೋರಾಟದಲ್ಲಿ ಹೋರಾಡುತ್ತಿದ್ದಾರೆ ಮತ್ತು ನಾನು ನನ್ನ ವಿರುದ್ಧ ಪಕ್ಷದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನೈನಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಸೊಸೆ

ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಸೊಸೆ

ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ 2019ರಲ್ಲಿ ಬಿಜೆಪಿ ಸೇರಿದ್ದರು. ರಿವಾಬಾ ಅವರು ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸೊಸೆಯೂ ಹೌದು. ನವೆಂಬರ್ 10 ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜಾಮ್‌ನಗರದಿಂದ ಹಾಲಿ ಬಿಜೆಪಿ ಅಭ್ಯರ್ಥಿಯನ್ನು ರಿವಾಬಾ ಬದಲಿಸಿದ್ದಾರೆ. ಇದೇ ಮೊದಲ ಬಾರಿಗೆ ರಿವಾಬಾ ಗುಜರಾತ್‌ನಿಂದ ಸ್ಪರ್ಧಿಸಲಿದ್ದಾರೆ. 2018 ರಲ್ಲಿ ಬಿಜೆಪಿಗೆ ಸೇರುವ ಮೊದಲು, ರಿವಾಬಾ ಅವರನ್ನು ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಪ್ರಬಲ ನಾಯಕರಿಂದ ತಳಮಟ್ಟದ ಪ್ರಚಾರ

ಪ್ರಬಲ ನಾಯಕರಿಂದ ತಳಮಟ್ಟದ ಪ್ರಚಾರ

ಗುಜರಾತ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಧಾನಿ ಸೇರಿದಂತೆ ಅನೇಕ ದೊಡ್ಡ ನಾಯಕರು ಪ್ರಚಾರ ಮಾಡುತ್ತಾರೆ. ಮುಂಬರುವ ಗುಜರಾತ್ ಚುನಾವಣೆಗೆ ಸಂಬಂಧಿಸಿದಂತೆ ಜೋರಾದ ರ್‍ಯಾಲಿಗಳ ಮತ್ತೆ ಶುರುವಾಗಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದ ಮೂರನೇ ದಿನ ಮೂರು ರ್‍ಯಾಲಿಗಳನ್ನು ನಡೆಸಲಿದ್ದಾರೆ. ಮತ್ತೊಂದೆಡೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಕೂಡ ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ರ್‍ಯಾಲಿಗಳನ್ನು ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+