ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯ್ದೆ ಉಲ್ಲಂಘಿಸಿದ ರಾಹುಲ್ ವಿರುದ್ಧ ಆಯೋಗದಿಂದ ತನಿಖೆ?

By Mahesh
|
Google Oneindia Kannada News

Recommended Video

ಗುಜರಾತ್ ಚುನಾವಣೆಗು ಮುನ್ನ ಕಾಯ್ದೆ ಉಲ್ಲಂಘಿಸಿದ್ರಾ ರಾಹುಲ್ ? | Oneindia Kannada

ಅಹಮದಾಬಾದ್, ಡಿಸೆಂಬರ್ 13: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮನೆ ಮನೆ ಪ್ರಚಾರದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ಸಿನ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿರುವ ದೂರು ಬಂದಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಲು ಮುಂದಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲಮನ್ನಾ: ರಾಹುಲ್ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲಮನ್ನಾ: ರಾಹುಲ್

ಚುನಾವಣಾ ಪ್ರಚಾರದ ವೇಳೆ ಜನಪ್ರತಿನಿಧಿ ಕಾಯ್ದೆಯ 126ನೇ ನಿಯಮವನ್ನು ರಾಹುಲ್ ಗಾಂಧಿ ಅವರು ಉಲ್ಲಂಘಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಲಾಗಿದೆ.

Gujarat elections 2017, EC to examine complaint against Rahul Gandhi

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾಧಿಕಾರಿ ಆಧಿಕಾರಿ ಬಿಬಿ ಸ್ವಾನ್ ಅವರು, ರಾಹುಲ್ ಗಾಂಧಿ ಅವರ ಸಂದರ್ಶನ ಸ್ಥಳೀಯ ವಾಹಿನಿಯೊಂದರಲ್ಲಿ ಪ್ರಸಾರವಾದ ಬಗ್ಗೆ ದೂರು ಬಂದಿದ್ದು, ಡಿವಿಡಿಗಳನ್ನು ಪಡೆದುಕೊಂಡು ಪರಿಶೀಲಿಸಲಾಗುತ್ತಿದೆ. ಜನಪ್ರತಿನಿಧಿ ಕಾಯ್ದೆ 126ರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಖಚಿತವಾದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಡಿ 23ಕ್ಕೆ ರಾಜ್ಯಕ್ಕೆ ರಾಹುಲ್ ಆಗಮನ, ಚುನಾವಣೆ ಪ್ರಚಾರ ಶುರುಡಿ 23ಕ್ಕೆ ರಾಜ್ಯಕ್ಕೆ ರಾಹುಲ್ ಆಗಮನ, ಚುನಾವಣೆ ಪ್ರಚಾರ ಶುರು

ಗುಜರಾತಿನಲ್ಲಿ ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಯಾವುದೇ ರೀತಿ ಸಂದರ್ಶನ ನೀಡುವುದಕ್ಕೆ ಅನುಮತಿ ಇಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಡಿಸೆಂಬರ್ 8ರಂದು 89 ವಿಧಾನಸಭಾ ಕ್ಷೇತ್ರಗಳಿಗೆ ಶೇ 66.75ರಷ್ಟು ಮತದಾನ ನಡೆದಿತ್ತು. 91 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರಬರಲಿದೆ.

English summary
The Election Commission (EC) is set to inquire a complaint against Congress President Rahul Gandhi for allegedly violating Rules 126 Representative People Act on the last day of Gujarat election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X