ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಗುಜರಾತ್ ನಲ್ಲಿ ರಾಹುಲ್ ಗೆ 'ಮೋದಿ' ಘೋಷಣೆಯ ಮುಜುಗರ

By Sachhidananda Acharya
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 10: ದೇವಸ್ಥಾನದಿಂದ ಹೊರ ಬಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರು ಹತ್ತುತ್ತಿದ್ದಾರೆ.. ಸುತ್ತೆಲ್ಲಾ ನೆರೆದ ಜನ.. ಹೆಚ್ಚಿನವರ ಬಾಯಲ್ಲಿ 'ಮೋದಿ' 'ಮೋದಿ' ಘೋಷಣೆ.. ಈ ದೃಶ್ಯ ಕಂಡಿದ್ದು ಗುಜರಾತಿನ ರಾಂಛೋಡ್ಜಿ ದೇವಾಲಯದ ಮುಂದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲಮನ್ನಾ: ರಾಹುಲ್ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲಮನ್ನಾ: ರಾಹುಲ್

ಎರಡನೇ ಹಂತದ ಚುನಾವಣೆ ನಡೆಯಲಿರುವ ಗುಜರಾತ್ ನ ದಾಕೋರ್ ನಲ್ಲಿ ಇಂದು ರಾಹುಲ್ ಗಾಂಧಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಲು ಬಂದಿದ್ದರು. ಈ ವೇಳೆ ಅವರು ಇಲ್ಲಿನ ಖೇಡಾದಲ್ಲಿರುವ ಶ್ರೀ ರಾಂಛೋಡ್ಜಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ

Gujarat: Crowd shouts 'Modi Modi' as Rahul Gandhi exits Ranchhodji Temple

ನಂತರ ದೇವಸ್ಥಾನದಿಂದ ಹೊರಗೆ ಬರುವಾಗ ನೆರೆದಿದ್ದ ಜನರು 'ಮೋದಿ' 'ಮೋದಿ' ಎಂದು ಘೋಷಣೆ ಕೂಗಿ ಕಾಂಗ್ರೆಸ್ ಉಪಾಧ್ಯಕ್ಷರನ್ನು ಮುಜುಗರಕ್ಕೀಡು ಮಾಡಿದರು.

ನಂತರ ಖೇಡಾದ ಡಾಕೋರ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ಮೋದಿಜಿ ಭಾರತದಲ್ಲಿರುವ ಎಲ್ಲಾ ಕಳ್ಳರ ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡಿದ್ದಾರೆ," ಎಂದು ರಾಹುಲ್ ದೂರಿದರು.

ಇದೇ ವೇಳೆ ನೀವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕೆಟ್ಟ ಶಬ್ದ ಬಳಸಬೇಡಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು. "ಅವರು ಪ್ರಧಾನಿ ಹುದ್ದೆಯಲ್ಲಿದ್ದಾರೆ. ನೀವು ಕಾಂಗ್ರೆಸಿಗರಾಗಿದ್ದರೆ ಪ್ರಧಾನಿಯವರನ್ನು ಪ್ರೀತಿಯಿಂದ ಮಾತನಾಡಿಸಿ," ಎಂದು ರಾಹುಲ್ ಕರೆ ನೀಡಿದರು.

English summary
Gujarat Assembly Elections 2017:hours ago Crowd shouts 'Modi Modi' as Rahul Gandhi exits Shree Ranchhodji Temple in Kheda's Dakor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X