ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಷನ್ 150: ಗುಜರಾತ್ ನಲ್ಲಿ ಬಿಜೆಪಿಗೆ ಕಾಂಗ್ರೆಸ್ ದಾಖಲೆ ಮುರಿಯುವ ತವಕ

By Sachhidananda Acharya
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 10: ಗುಜರಾತ್ ನಲ್ಲಿ ಸತತ 22 ವರ್ಷಗಳ ಕಾಲ ಆಡಳಿತ ನಡೆಸಿ ಇದೀಗ ಮತ್ತೆ ಅಧಿಕಾರಕ್ಕೆ ಬರಲು ಭಾರತೀಯ ಜನತಾ ಪಕ್ಷ ತವಕಿಸುತ್ತಿದೆ. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ನ ದಾಖಲೆಯನ್ನು ಪುಡಿಗಟ್ಟಲು ಅದು ಹವಣಿಸುತ್ತಿದೆ.

ಪಾಕಿಸ್ತಾನ ರಾಯಭಾರಿ ಜತೆ ಅಯ್ಯರ್ ಸೀಕ್ರೇಟ್ ಮೀಟಿಂಗ್: ಮೋದಿ ಆರೋಪಪಾಕಿಸ್ತಾನ ರಾಯಭಾರಿ ಜತೆ ಅಯ್ಯರ್ ಸೀಕ್ರೇಟ್ ಮೀಟಿಂಗ್: ಮೋದಿ ಆರೋಪ

ಗುಜರಾತ್ ನಲ್ಲಿ ನಡೆದ ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದ ದಾಖಲೆ ಕಾಂಗ್ರೆಸ್ ಹೆಸರಿನಲ್ಲಿದೆ. ಕಾಂಗ್ರೆಸ್ 1985ರ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 149 ಸ್ಥಾನಗಳನ್ನು ಗೆದ್ದಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿದೆ.

Gujarat Assembly polls: BJP eyes to break Congress's record of maximum seats won

ಈ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಬಿಜೆಪಿ ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ಮಿಷನ್ 150 ಸೂತ್ರವನ್ನು ತೇಲಿ ಬಿಟ್ಟಿದೆ. ಒಂದೊಮ್ಮೆ ಬಿಜೆಪಿ 150 ಸೀಟು ಗೆದ್ದಿದ್ದೇ ಆದಲ್ಲಿ 32 ವರ್ಷಗಳ ಹಿಂದೆ ಕಾಂಗ್ರೆಸ್ ಸ್ಥಾಪಿಸಿದ್ದ ದಾಖಲೆ ಮಣ್ಣು ಪಾಲಾಗಲಿದೆ.

ಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ

ಗುಜರಾತ್ ಪ್ರಧಾನಿಯಾಗಿರುವ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತವರು ನೆಲವಾಗಿದ್ದು ಬಿಜೆಪಿ ಈ ಹಿನ್ನಲೆಯನ್ನು ಇಟ್ಟುಕೊಂಡು 150 ಸ್ಥಾನಗಳನ್ನು ಗೆಲ್ಲಬಹುದು ಎಂಬ ಉಮೇದಿಯಲ್ಲಿದೆ.

ಕಾಂಗ್ರೆಸ್ಸಿಗರ ಸುಳ್ಳು ಆಣೆಯನ್ನು ನಂಬಬೇಡಿ: ಮೋದಿ ಮನವಿಕಾಂಗ್ರೆಸ್ಸಿಗರ ಸುಳ್ಳು ಆಣೆಯನ್ನು ನಂಬಬೇಡಿ: ಮೋದಿ ಮನವಿ

ಸದ್ಯ ಶನಿವಾರ ಗುಜರಾತಿನಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು ಡಿಸೆಂಬರ್ 14ರ ಗುರುವಾರ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು, ಅಂದು ಬಿಜೆಪಿ ಕಾಂಗ್ರೆಸ್ ರೆಕಾರ್ಡ್ ಮುರಿಯುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

English summary
If the BJP manages to win 150 seats in the Gujarat assembly elections it would be a record. Actually, it was the Congress which holds the record of winning the maximum seats in any Assembly elections in the state. In 1985, the Congress won 149 seats in the Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X