ಗುಜರಾತ್ ಚುನಾವಣೆ: ಈ ಚುನಾವಣೆ ಬಿಜೆಪಿ ಮತ್ತು ಎಎಪಿ ನಡುವಿನ ಸ್ಪರ್ಧೆಯೇ?
ಅಹಮದಾಬಾದ್, ನ.07: ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಎಲ್ಲರ ಚಿತ್ತ ಗುಜರಾತ್ ಚುನಾವಣೆಯತ್ತ ಇದೆ. ಹೇಗಾದರೂ ಈ ಬಾರಿ ಗುಜರಾತ್‌ನಲ್ಲಿ ಆಡಳಿತ ಹಿಡಿಯಬೇಕು ಎಂದು ಹರಸಾಹಸ ಮಾಡುತ್ತಿರುವ ಆಪ್ ಭಾರಿ ಉತ್ಸಾಹದಲ್ಲಿ ಪ್ರಚಾರ ಮಾಡುತ್ತಿದೆ.
ಬಿಜೆಪಿ ಕೂಡ ಗುಜರಾತ್ ತನ್ನ ಕೈಯಿಂದ ಬಿಡಿಸಿಕೊಳ್ಳಬಾರದೆಂದು ಪ್ರಯತ್ನಿಸುತ್ತಿದೆ. ಆದರೆ, ಮೌನವಾಗಿರುವುದು ಮಾತ್ರ ಕಾಂಗ್ರೆಸ್. ಅಭ್ಯರ್ಥಿಗಳ ಪಟ್ಟಿಯನ್ನೇನೋ ಬಿಡುಗಡೆ ಮಾಡಿದೆ. ಆದರೆ, ಚುನಾವಣೆಯಲ್ಲಿ ಪಾಲ್ಗೊಳ್ಳುವ ಉತ್ಸಾಹವಂತೂ ಕಾಣಿಸುತ್ತಿಲ್ಲ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, 40 ವರ್ಷದ ಇಸುದನ್ ಗಧ್ವಿಯನ್ನು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದರೊಂದಿಗೆ, ಗುಜರಾತ್ ವಿಧಾನಸಭಾ ಚುನಾವಣಾ ಕಣ ಇದೀಗ ರೋಚಕ ಸ್ಪರ್ಧೆಯಾಗಿದೆ.
2017 ರ ಚುನಾವಣೆಯಲ್ಲಿ 182 ಅಸೆಂಬ್ಲಿ ಸ್ಥಾನಗಳಲ್ಲಿ ಕೇವಲ 29 ರಲ್ಲಿ ಸ್ಪರ್ಧಿಸಿ ಎಲ್ಲಾ ಠೇವಣಿಗಳನ್ನು ಕಳೆದುಕೊಂಡಿದ್ದ ಎಎಪಿ ಗುಜರಾತ್ ಸ್ಪರ್ಧೆಗೆ ಭಾರೀ ವಿಶ್ವಾಸದಲ್ಲೇ ಧುಮುಕಿದೆ. ಚುನಾವಣಾ ದಿನಾಂಕಗಳು ಹೊರಬೀಳುವ ಮೊದಲೇ 100 ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆಕರ್ಷಕ ಚುನಾವಣಾ ಭರವಸೆಗಳನ್ನು ಪ್ರಕಟಿಸಿದೆ. ಅವುಗಳ ಅನುಷ್ಠಾನಕ್ಕೆ ಒಂದು ಯೋಜನೆ ರೂಪಿಸಿದೆ. ಅದರ ಪ್ರಚಾರದ ತಂತ್ರವು ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು ಆತಂಕಕ್ಕೆ ನೂಕಿದೆ.

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಲ್ಲವೇ ಆಸಕ್ತಿ?
ಗುಜರಾತ್‌ನಲ್ಲಿ ತೃತೀಯ ಶಕ್ತಿಗೆ ಜಾಗವಿಲ್ಲ ಎಂದು ಗುಜರಾತ್‌ನ ಬಹುತೇಕ ರಾಜಕೀಯ ಅನುಭವಿಗಳು ಮತ್ತು ವಿಶ್ಲೇಷಕರು ಸ್ಪಷ್ಟಪಡಿಸುತ್ತಾರೆ. ಆದರೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್ ಆಸಕ್ತಿ ಕಳೆದುಕೊಂಡ ಹಾಗೆ ಕಾಣಿಸುತ್ತಿದೆ. ಅಂತಿಮವಾಗಿ ಎಎಪಿ ಮತ್ತು ಬಿಜೆಪಿ ನಡುವಿನ ಸ್ಪರ್ಧೆ ಎಂಬಂತಾಗಿದೆ.
ತನಿಖಾ ಸಂಸ್ಥೆಗಳ ಆರೋಪಗಳು, ತನ್ನ ಪಕ್ಷದ ನಾಯಕರ ಬಂಧನ, ದಾಳಿಗಳ ಹೊರತಾಗಿಯೂ ಆಪ್ ಗುಜರಾತ್‌ನಲ್ಲಿ ಅವಿರತ ಪ್ರಚಾರವನ್ನು ನಡೆಸುತ್ತಿದೆ. ಎಎಪಿ ಗುಜರಾತ್‌ನಲ್ಲಿ ಮೂರನೇ ಪಕ್ಷವಲ್ಲ, ಆದರೆ ವಿರೋಧ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಅಭ್ಯರ್ಥಿ ಗಧ್ವಿ ಹೇಳಿದ್ದಾರೆ.

2024 ರ ವೇಳೆಗೆ ಆಪ್ ದೊಡ್ಡ ಶಕ್ತಿಯಾಗುವ ಮುನ್ಸೂಚನೆ
ಆಮ್ ಆದ್ಮಿ ಪಾರ್ಟಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ. 2022 ರಲ್ಲಿ ಈ ಪಕ್ಷ ದೊಡ್ಡ ಶಕ್ತಿಯಾಗದಿದ್ದರೂ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗಳು ನಿಗದಿ ಮತ್ತು ಬಿಜೆಪಿ ಮೂರನೇ ಅವಧಿಗೆ ಆಡಳಿತ ಹಿಡಿಯಲು ಪ್ರಯತ್ನಿಸುವ 2024 ರ ವೇಳೆಗೆ ದೊಡ್ಡ ಶಕ್ತಿಯಾಗಬಹುದು ಎನ್ನಲಾಗಿದೆ.
ಒಂದರ್ಥದಲ್ಲಿ, 2022 ರ ವಿಧಾನಸಭಾ ಚುನಾವಣೆಯು ಗುಜರಾತ್‌ನ ಚುನಾವಣಾ ಇತಿಹಾಸದಲ್ಲಿ ಒಂದು ಪ್ರಮುಖ ಘಟವಾಗಬಹುದು. 15 ವರ್ಷಗಳಲ್ಲಿ ಬಿಜೆಪಿ ಮೂರನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ. ಇತ್ತ ಆಪ್ ಅನ್ನು ತಡೆಯಲು ಸಾಧ್ಯವೇ ಇಲ್ಲದಂತಾಗಿದೆ.
"ನಾವು ಎಎಪಿಯನ್ನು ಕಡಿಮೆ ಅಂದಾಜು ಮಾಡಬಾರದು" ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಎರಡರಲ್ಲೂ ಹಿರಿಯ ಅನುಭವಿಗಳು ಹೇಳುತ್ತಾರೆ. ಎರಡು ಪಕ್ಷಗಳ ಹೊರತಾಗಿಯೂ, ಜನರು ಎಎಪಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದು, ಅದನ್ನು ಕಾಂಗ್ರೆಸ್‌ಗಿಂತ ಹೆಚ್ಚು ಆಕ್ರಮಣಕಾರಿ ಎಂದು ಭಾವಿಸುತ್ತಿದ್ದಾರೆ ಎನ್ನಲಾಗಿದೆ.

10 ವರ್ಷಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ
1980 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಸ್ಥಾಪನಾ ವರ್ಷದಲ್ಲಿ ಪಕ್ಷವು 182 ರಲ್ಲಿ 127 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಆದರೆ, ಕೇವಲ ಒಂಬತ್ತು ಸ್ಥಾನಗಳನ್ನು ಮಾತ್ರ ಗೆದ್ದಿತು. ಆದರೆ, ಮಾಧವಸಿನ್ಹಾ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ 141 ಸ್ಥಾನಗಳನ್ನು ಗೆದ್ದಿತು. ಜನತಾ ಪಕ್ಷ (ಜೆಎನ್‌ಪಿ) 21 ಸ್ಥಾನಗಳನ್ನು ಗೆದ್ದಿತ್ತು. 10 ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಅಂದಿನಿಂದ ಬಿಜೆಪಿಗೆ ಹಿಂತಿರುಗಿ ನೋಡಲೇ ಇಲ್ಲ. ಆ ಚುನಾವಣೆಯ ನಂತರ ಗುಜರಾತ್‌ನಲ್ಲಿ ಹತ್ತು ವರ್ಷಗಳ ನಂತರ ಆಡಳಿತದ ಚುಕ್ಕಾಣಿ ಹಿಡಿದಿದೆ.
ಕ್ಷತ್ರಿಯ-ಹರಿಜನ-ಆದಿವಾಸಿ-ಮುಸ್ಲಿಂ ಮತಗಳ ಕ್ರೋಡೀಕರಣದ KHAM ಸೂತ್ರಕ್ಕೆ ತನ್ನ ಗೆಲುವಿನ ಸರಮಾಲೆಯನ್ನು ನೀಡಿದ್ದ ಕಾಂಗ್ರೆಸ್, 1985 ರಲ್ಲಿ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು. 1990 ರ ಸಾರ್ವತ್ರಿಕ ಚುನಾವಣೆಗಳು ಹಿಂದುತ್ವದ ಮೇಲೆ ಸವಾರಿ ಮಾಡಿದ ಬಿಜೆಪಿಗೆ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರುವಂತೆ ಮಾಡಿತು. ಜೆಎನ್‌ಪಿ ಶೂನ್ಯ ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ಜನತಾ ದಳ 70 ಗೆದ್ದು, ಬಿಜೆಪಿಯ 67 ಶಾಸಕರ ಬೆಂಬಲದೊಂದಿಗೆ ಚಿಮನ್‌ಭಾಯ್ ಪಟೇಲ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು.

ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಹೆಚ್ಚುತ್ತಿದ್ದೆ ಸಿಟ್ಟು!
ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಕ್ಷೀಣಿಸುತ್ತಿದೆ. 2014 ರಿಂದ ಕಾಂಗ್ರೆಸ್ ಗುಜರಾತ್‌ನಲ್ಲಿ ಯಾವುದೇ ಲೋಕಸಭಾ ಸ್ಥಾನಗಳನ್ನು ಹೊಂದಿಲ್ಲ. ಬಿಜೆಪಿಯ ಸ್ಥಾನಗಳು ಕೂಡ 2002 ರಿಂದ ಸ್ಥಿರವಾಗಿ ಕುಸಿಯುತ್ತಿವೆ. ಬಿಜೆಪಿ 127 ಸ್ಥಾನಗಳನ್ನು ಗೆದ್ದಿರುವುದೇ ಇದುವರೆಗಿನ ಅತ್ಯಧಿಕವಾಗಿದೆ. 2007ರಲ್ಲಿ ಪಕ್ಷ 117 ಸ್ಥಾನಗಳನ್ನು ಗೆದ್ದಿತ್ತು, 2012ರಲ್ಲಿ 115 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2017ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ಬಿಜೆಪಿ 150 ಪ್ಲಸ್ ಸೀಟುಗಳನ್ನು ಗುರಿಯಾಗಿಟ್ಟುಕೊಂಡಿತ್ತು, ಆದರೆ, ಕೇವಲ 99 ಸ್ಥಾನಗಳನ್ನು ಪಡೆದು ಕಾಂಗ್ರೆಸ್ 77 ಸ್ಥಾನಗಳನ್ನು ಪಡೆಯಿತು. ಇದು ಬಿಜೆಪಿ ಮೇಲಿನ ಬಿಜೆಪಿಯ ಮೇಲಿನ ಸಿಟ್ಟನ್ನು ಸೂಚಿಸುತ್ತದೆ.
ಕನಿಷ್ಠ 35 ಸ್ಥಾನಗಳಲ್ಲಿ ಬಿಜೆಪಿ 5,000 ಅಥವಾ ಅದಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ಹೇಗೆ ಬೇಕಾದರೂ ತೀರ್ಪನ್ನು ಬದಲಿಸಬಹುದು.

ಪಾಟಿದಾರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಬಿಜೆಪಿ
ವಿಜಯ್ ರೂಪಾನಿ ಸರ್ಕಾರವನ್ನು ಭೂಪೇಂದ್ರ ಪಟೇಲ್ ಸರ್ಕಾರವನ್ನಾಗಿಸಿದ ಬಿಜೆಪಿ ನಡೆ ವಿರುದ್ಧ ಪಾಟೊದಾರ ಸಮುದಾಯ ಭಾರೀ ಆಕ್ರೋಶವ ಹೊರಹಾಕಿದೆ. ಹೀಗಾಗಿ ಪಾಟಿದಾರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ 144 ಕ್ಷೇತ್ರಗಳಲ್ಲಿ ಯಾತ್ರೆಯನ್ನು ಮಾಡಿ, ಗುಂಪುಗಾರಿಕೆಯನ್ನು ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ 11 ದಿನಗಳ ಪ್ರಚಾರವನ್ನು ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಮೋದಿಯವರ ರಾಜ್ಯಕ್ಕೆ ಎರಡು ಬಾರಿ - ಮೂರು ದಿನಗಳವರೆಗೆ ಪ್ರವಾಸ ಕೈಗೊಂಡಿದ್ದಾರೆ. ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಭೂಪೇಂದ್ರ ಪಟೇಲ್ ಸರ್ಕಾರ ಯೋಜನೆಯ ಘೋಷಣೆಗಳ ಸರಮಾಲೆಯನ್ನೇ ಮಾಡಿದೆ.
ಇವುಗಳ ಜೊತೆಗೆಯೇ ಬಿಜೆಪಿಗೆ ಭಾರೀ ಪೆಟ್ಟು ನೀಡಿದ್ದು, ಮೋದಿ ಗುಜರಾತಿನಲ್ಲಿದ್ದಾಗ ಸಂಭವಿಸಿದ ಮೋರ್ಬಿ ತೂಗು ಸೇತುವೆ ದುರಂತ. ಜನರ ಕೋಪವನ್ನು ತಣಿಸಲು ರಾಜ್ಯ ಸರ್ಕಾರವು 48 ಗಂಟೆಗಳ ಒಳಗೆ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಪರಿಹಾರವನ್ನು ನೀಡಿತು.
ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ 22 ಒಬಿಸಿ ಉಪಗುಂಪುಗಳ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಒಬಿಸಿಗಳು ಗುಜರಾತ್‌ನ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಇನ್ನು, ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರು ಒಬಿಸಿಗಳ ಒಂದು ಉಪಗುಂಪಿನಿಂದ ಬಂದಿದ್ದಾರೆ.
ಆದರೂ, ಗುಂಪುಗಾರಿಕೆ ಮತ್ತು ಅಸಮಾಧಾನವು ಬಿಜೆಪಿಯಂತಹ ಪ್ರಬಲ ಪಕ್ಷವೂ ಸಹ ಎದುರಿಸಬೇಕಾದ ಸಮಸ್ಯೆಯಾಗಿದೆ. ಭಾನುವಾರ, ಬಿಜೆಪಿಯ ಹಳೆಯ ಸದಸ್ಯರಲ್ಲಿ ಒಬ್ಬರು ಮತ್ತು ಎರಡು ಬಾರಿ ಸಚಿವರಾಗಿದ್ದ ಜಯನಾರಾಯಣ ವ್ಯಾಸ್ ಅವರು ಟಿಕೆಟ್ ಸಿಗದ ಕಾರಣ ರಾಜೀನಾಮೆ ನೀಡಿ, ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದ್ದಾರೆ.












Click it and Unblock the Notifications