ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ರೂಪಾಂತರ ಪರೀಕ್ಷೆ

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಬ್ರಿಟನ್‌ನಿಂದ ಇತ್ತೀಚೆಗೆ ಭಾರತಕ್ಕೆ ಬಂದ ಆರು ಮಂದಿಯಲ್ಲಿ ರೂಪಾಂತರ ವೈರಸ್ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಂಶವಾಹಿ ಪರೀಕ್ಷೆ ಮಾದರಿ ನಡೆಸಲು ಭಾರತ ನಿರ್ಧರಿಸಿದೆ. ಡಿಸೆಂಬರ್ 9 ರಿಂದ 22ರವರೆಗೆ ವಿದೇಶಗಳಿಂದ ಬಂದು ಕಳೆದ 14 ದಿನಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದ ಮತ್ತು ಅಂತಹ ಲಕ್ಷಣಗಳುಳ್ಳ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ರೂಪಾಂತರ ವೈರಸ್ ಇದೆಯೇ ಎಂಬ ಪರೀಕ್ಷೆ ನಡೆಸಲಾಗುತ್ತದೆ.

ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರ ವೈರಸ್ ದೀರ್ಘಾವಧಿಯಲ್ಲಿ ಅದರಾಚೆಗೂ ಹರಡಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ಬೇರೆ ದೇಶಗಳಿಗೂ ವ್ಯಾಪಿಸಿದ್ದು, ಅಲ್ಲಿಂದ ಭಾರತಕ್ಕೆ ಬರುವವರಲ್ಲಿ ಕೂಡ ರೂಪಾಂತರ ವೈರಸ್ ಕಾಣಿಸುವ ಸಾಧ್ಯತೆ ಇದೆ ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೋವಿಡ್ ಸಾವುಗಳಲ್ಲಿ ಶೇ 70ರಷ್ಟು ಪುರುಷರು: ಆರೋಗ್ಯ ಸಚಿವಾಲಯಕೋವಿಡ್ ಸಾವುಗಳಲ್ಲಿ ಶೇ 70ರಷ್ಟು ಪುರುಷರು: ಆರೋಗ್ಯ ಸಚಿವಾಲಯ

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರ ವೈರಸ್ ಶೇ 70ರಷ್ಟು ಹೆಚ್ಚು ಸಾಂಕ್ರಾಮಿಕ ಎಂದು ಹೇಳಲಾಗಿದೆ. ಇದು ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಪುರಗಳಲ್ಲಿ ವರದಿಯಾಗಿದೆ.

Govt To Conduct Genome Sequencing For All International Passengers To Test Mutant Coronavirus

'ವೈರಸ್ ಅನ್ನು ಆರಂಭದಲ್ಲಿಯೇ ಹತ್ತಿಕ್ಕುವುದು ಸುಲಭ. ಆದರೆ ಹರಡುವಿಕೆ ತೀವ್ರವಾಗಿ ವ್ಯಾಪಿಸಿದ ಬಳಿಕ ಅದನ್ನು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟಕರ' ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ಹೇಳಿದ್ದಾರೆ. ಈ ಹೊಸ ರೂಪಾಂತರ ವೈರಸ್ ಹೆಚ್ಚು ಅಪಾಯಕಾರಿ ಮತ್ತು ಸಾವುಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಇನ್ನೂ ಪುರಾವೆಗಳು ಸಿಕ್ಕಿಲ್ಲ. ಅಲ್ಲದೆ, ಹಾಲಿ ಇರುವ ಲಸಿಕೆಗಳಿಂದ ನಿಯಂತ್ರಣಕ್ಕೆ ಬರಲಾರದು ಎಂದೂ ಹೇಳಿಲ್ಲ. ಆದರೆ ವೇಗವಾಗಿ ಹರಡುವ ಕಾರಣ ಅದು ಒಂದೇ ಸಮನೆ ಹೆಚ್ಚು ಜನರನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬ ಆತಂಕ ಉಂಟಾಗಿದೆ.

ಪ್ರಸ್ತುತ ರೂಪಾಂತರ ವೈರಸ್ ಮಾದರಿಗಳನ್ನು ಐಎನ್ಎಸ್‌ಎಸಿಒಜಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಭಾರತದಲ್ಲಿ ವಿಭಿನ್ನ ರೂಪಾಂತರಿ ತಳಿಗಳನ್ನು ಪತ್ತೆಹಚ್ಚಲು ಈ ವಂಶವಾಹಿ ನಿಗಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ಹತ್ತು ಪ್ರಯೋಗಾಲಯಗಳಲ್ಲಿ ಮಾತ್ರ ವಂಶವಾಹಿ ಪರೀಕ್ಷೆ ನಡೆಯುತ್ತಿವೆ.

ಬ್ರಿಟನ್‌ನಿಂದ ಬಂದವರಲ್ಲಿ ಸೋಂಕು; ವಿಮಾನಗಳ ನಿರ್ಬಂಧ ವಿಸ್ತರಣೆ ಸಾಧ್ಯತೆಬ್ರಿಟನ್‌ನಿಂದ ಬಂದವರಲ್ಲಿ ಸೋಂಕು; ವಿಮಾನಗಳ ನಿರ್ಬಂಧ ವಿಸ್ತರಣೆ ಸಾಧ್ಯತೆ

ಇನ್‌ಸ್ಟೆಂ ಬೆಂಗಳೂರು, ನಿಮ್ಹಾನ್ಸ್ ಬೆಂಗಳೂರು, ಸಿಸಿಎಸ್ ಪುಣೆ, ಎನ್‌ಐಬಿಎಂಜಿ ಕೋಲ್ಕತಾ, ಐಎಲ್ಎಸ್ ಭುವನೇಶ್ವರ್, ಎನ್‌ಐವಿ ಪುಣೆ, ಸಿಸಿಎಂಬಿ ಹೈದರಾಬಾದ್, ಸಿಡಿಎಫ್‌ಡಿ ಹೈದರಾಬಾದ್, ಐಜಿಐಬಿ ದೆಹಲಿ ಮತ್ತು ಎನ್‌ಸಿಡಿಸಿ ದೆಹಲಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನವೆಂಬರ್ 23ರ ಬಳಿಕ ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾದ ಶೇ 5ರಷ್ಟು ಜನರಿಗೆ ವಂಶವಾಹಿ ಪ್ರಕ್ರಿಯೆ ಪರೀಕ್ಷೆ ನಡೆಸಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.

English summary
Government is planning to conduct Genome sequencing for all international passengers to test mutant coronavirus in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X