
ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ವಿದೇಶಿ ಭೇಟಿಗಳ ವೆಚ್ಚವೆಷ್ಟು?
ನವದೆಹಲಿ, ಡಿ. 09: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ವೆಚ್ಚವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.
ಪ್ರಧಾನಿ ಮೋದಿಯವರು ವಿದೇಶಗಳಿಗೆ ಭೇಟಿ ನೀಡಿದ್ದು, ಭಾರತದ ಜೊತೆಗೆ ಇತರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಲು, ಭಾರತದ ದೃಷ್ಟಿಕೋನವನ್ನು ಅವರ ಮುಂದಿಡಲು ಮತ್ತು ಜಾಗತಿಕ ವಿಷಯಗಳ ಕುರಿತು ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಅನುವು ಮಾಡಿಕೊಟ್ಟಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಪ್ರಧಾನಿಯವರ ವಿದೇಶಿ ಭೇಟಿಗಳ ವೆಚ್ಚದ ವಿವರಗಳನ್ನು ಸಿಪಿಐ(ಎಂ) ಸಂಸದ ಎಳಮರಮ್ ಕರೀಂ ಪ್ರಶ್ನಿಸಿದ್ದಾರೆ.
ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ವೆಚ್ಚಗಳ ಬಗ್ಗೆ ರಾಜ್ಯಸಭೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, "ಪ್ರಧಾನಿಗಳ ವಿದೇಶ ಪ್ರವಾಸಗಳ ಉದ್ದೇಶವು ವಿದೇಶಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸುವುದು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದಾಗಿದೆ" ಎಂದಿದ್ದಾರೆ.
ಮುಂದುವರಿದು ಅಂತಹ ಭೇಟಿಗಳು ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುವ ಮತ್ತು ವಿದೇಶಾಂಗ ನೀತಿ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಪ್ರಮುಖ ಸಾಧನವಾಗಿದೆ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.
Gujarat and HP Election Results 2022: ದೇಶದ ಜನರ ಕುರಿತು ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿಯವರ ಈ ವಿದೇಶಿ ಭೇಟಿಗಳು, ವಿದೇಶಿ ಪಾಲುದಾರರಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಭಾರತದ ದೃಷ್ಟಿಕೋನಗಳ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿವೆ ಎಂದು ಸಚಿವ ಮುರಳೀಧರನ್ ಹೇಳಿದ್ದಾರೆ.

"ಈ ಭೇಟಿಗಳ ಸಮಯದಲ್ಲಿ ಭಾರತವು ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಿದೆ. ಭಾರತದ ದೃಷ್ಟಿಕೋನವನ್ನು ಜಗತ್ತಿನ ಮುಂದಿಡಲು ಮತ್ತು ಜಾಗತಿಕ ವಿಷಯಗಳಾದ ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ದೇಶೀಯ ಅಪರಾಧ, ಭಯೋತ್ಪಾದನೆ, ಸೈಬರ್-ಸುರಕ್ಷತೆ ಇತ್ಯಾದಿಗಳ ಬಗ್ಗೆ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಅನುವು ಮಾಡಿಕೊಟ್ಟಿದೆ" ಎಂದು ಮಾಹಿತಿ ನೀಡಿದ್ದಾರೆ.
*ಪ್ರಧಾನಿ ಮೋದಿಯವರ ವಿದೇಶಿ ಭೇಟಿಗಳ ಖರ್ಚು*
1. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಇತ್ತೀಚಿನ ಇಂಡೋನೇಷ್ಯಾ ಭೇಟಿಯ ವೆಚ್ಚ 32,09,760 ರೂಪಾಯಿಗಳು.
2. ಸೆಪ್ಟೆಂಬರ್ 26 ಮತ್ತು 28 ರ ನಡುವೆ ಪ್ರಧಾನಿಯವರ ಜಪಾನ್ ಭೇಟಿಗೆ 23,86,536 ರೂಪಾಯಿ ವೆಚ್ಚ
3. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರ ಯುರೋಪ್ ಭೇಟಿಯ ವೆಚ್ಚ 2,15,61,304 ರೂಪಾಯಿಗಳು.
4. 2019 ರ ಸೆಪ್ಟೆಂಬರ್ 21 ಮತ್ತು 28 ರ ನಡುವೆ ಪ್ರಧಾನಿಯವರ ಯುಎಸ್ ಭೇಟಿಗೆ 23,27,09,000 ರೂಪಾಯಿ ವೆಚ್ಚವಾಗಿದೆ.