ಪ್ರಥಮ ಧ್ವಜಾರೋಹಣ ಸಂಭ್ರಮಕ್ಕಾಗಿ ನೇತಾಜಿ 75 ಹೊಸ ನಾಣ್ಯ
ನವದೆಹಲಿ, ನವೆಂಬರ್ 14: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ಪ್ರಥಮ ಬಾರಿಗೆ ತ್ರಿವರ್ಣಧ್ವಜಾರೋಹಣ ಮಾಡಿದ ಸವಿನೆನಪಿಗೆ 75 ವರ್ಷ ಸಂದಿದೆ.
ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಧ್ವಜಕ್ಕೆ ವಂದಿಸುತ್ತಿರುವ ದೃಶ್ಯ ಇರುವ 75 ರು ಮೌಲ್ಯದ ನಾಣ್ಯವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲು ಮುಂದಾಗಿದೆ. ಹಣಕಾಸು ಸಚಿವಾಲಯ ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಜಾರಿ ಮಾಡಿದೆ. ದೇವನಾಗರಿ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲೂ 'ಪ್ರಥಮ ಧ್ವಜಾರೋಹಣ' ಎಂದು ನಮೂದಿಸಲಾಗುವುದು.
35 ಗ್ರಾಂನ ಈ ನಾಣ್ಯದಲ್ಲಿ ಶೇಕಡಾ 50 ರಷ್ಟು ಬೆಳ್ಳಿ, ಶೇಕಡಾ 40 ರಷ್ಟು ತಾಮ್ರ ಹಾಗೂ ಶೇಕಡಾ 5-5 ರಷ್ಟು ನಿಕಲ್ ಮತ್ತು ಝಿಂಕ್ ಇರಲಿದೆ. ಜೈಲಿನಲ್ಲಿ ಭಾರತದ ಧ್ವಜ ಹಾರಿಸಿ ಸೆಲ್ಯೂಟ್ ಮಾಡ್ತಿರುವ ಸುಭಾಷ್ ಚಂದ್ರ ಬೋಸ್ ಚಿತ್ರವಿರಲಿದೆ.

ಡಿಸೆಂಬರ್ 30, 1943ರಂದು ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ)ಯ ಬೋಸ್ ಮೊದಲ ಬಾರಿಗೆ ಪೋರ್ಟ್ ಬ್ಲೇರ್ ನ ಜೈಲಿನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಭಾರತದ ಸ್ವಾತಂತ್ಯದ ಘೋಷಣೆ ಮಾಡಿದ್ದರು.
ಅಕ್ಟೋಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ರಾಷ್ಟ್ರೀಯ ಧ್ವಜ ಹಾರಿಸಿ, ಅಜಾದ್ ಹಿಂದ್ ಸರ್ಕಾರದ 75 ವಾರ್ಷಿಕೋತ್ಸವವನ್ನು ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications