8th Pay Commission: 2ರಿಂದ 7ನೇ ವೇತನ ಆಯೋಗದಡಿ ನೌಕರರ ವೇತನ ಹೆಚ್ಚಳವೆಷ್ಟು? ಈಗಿನ ನಿರೀಕ್ಷೆಗಳೇನು?
ನವದೆಹಲಿ, ಫೆಬ್ರವರಿ 04: ದೇಶದಲ್ಲಿ ಹೊಸ ವೇತನ ಆಯೋಗ, ಮೂಲ ವೇತನ ಹೆಚ್ಚಳ, ಜನವರಿ 2025 ತುಟ್ಟಿಭತ್ಯೆ ಏರಿಕೆ ಕುರಿತು ಭಾರೀ ನಿರೀಕ್ಷೆಗಳು ಇವೆ. ಕೇಂದ್ರ ಸರ್ಕಾರ ಇತ್ತೀಚೆಗೆ 8ನೇ ವೇತನ ಆಯೋಗದ ಜಾರಿ ಮೂಲಕ ನೌಕರರ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ. ಸರ್ಕಾರಿ ನೌಕರರ ಆರ್ಥಿಕ ಹಿತದೃಷ್ಟಿಯಿಂದ 8ನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರವೇ ಅಧಿಕೃತಪಡಿಸಿದೆ. ಇದೀಗ 2ರಿಂದ 7ನೇ ವೇತನ ಆಯೋಗದವರೆಗೆ ನೌಕರರು ಎಷ್ಟು ವೇತನ ಹೆಚ್ಚಳ ಪಡೆದಿದ್ದಾರೆ? ಮತ್ತು 8ನೇ ವೇತನ ಆಯೋಗದ ನಿರೀಕ್ಷೇಗಳ ವಿವರ ಇಲ್ಲಿದೆ.
ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಹು ನಿರೀಕ್ಷಿತ 8ನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪಿಸಿದರು. ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ 8ನೇ ಸಿಪಿಸಿ ರಚನೆಗೆ ಒಪ್ಪಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ ಕೆಲವೇ ವಾರಗಳಲ್ಲಿ ದ್ರೌಪದಿ ಮುರ್ಮು ವಿವರಿಸಿದ್ದಾರೆ. ಹೊಸ ವೇತನ ಆಯೋಗವು ನೌಕರರ ವೇತನದಲ್ಲಿ ಮಹತ್ವದ ಬದಲಾವಣೆ, ಗಣನೀಯ ಹೆಚ್ಚಳಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ಜಾರಿಗೆ ಕಾಯುತ್ತಿದ್ದಾರೆ. ಮೂಲ ವೇತನ ಎಷ್ಟು ಹೆಚ್ಚಾಗಲಿದೆ ಎಂಬುದರ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಮೂಲ ವೇತನ, ಇನ್ನಿತರ ಭತ್ಯೆ ಹೆಚ್ಚಳಕ್ಕೆ ಫಿಟ್‌ಮೆಂಟ್ ಅಂಶ ಪ್ರಮುಖವಾಗಿರುತ್ತದೆ. ಉದಾಹರಣೆಗೆ 7ನೇ ವೇತನ ಆಯೋಗದಡಿ 2.57 ಫಿಟ್‌ಮೆಂಟ್ ಅಂಶಕ್ಕೆ ಶಿಫಾರಸು ಮಾಡಲಾಗಿತ್ತು.
ಈಗಾಗಲೇ ನೌಕರರ ಕನಿಷ್ಠ ವೇತನ 7000 ರೂ.ನಿಂದ 18,000ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚಿಸಲಾಗಿದೆ. ಇದೀಗ ಫೀಟ್ ಅಂಶ ಹೆಚ್ಚಿಸಿದರೆ ಈ ಕನಿಷ್ಠ ವೇತನ ಗಣನೀಯವಾಗಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ವೇತನ ಆಯೋಗ ಜಾತಿಗೆ ನೌಕರರ ಆಗ್ರಹಿಸಿದ್ದಾರೆ.

7ನೇ ವೇತನ ಆಯೋಗದ ದಾಖಲೆಯಡಿ ಕನಿಷ್ಠ ವೇತನವು ಕೇವಲ ಶೇ. 14.3 ರಷ್ಟಿತ್ತು. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರು ಶೇ. 54 ರಷ್ಟು ವೇತನ ಹೆಚ್ಚಳವನ್ನು 6ನೇ ವೇತನ ಆಯೋಗದ ಪಡೆದುಕೊಂಡಿದ್ದಾರೆ. ಇತ್ತೀಚಿನ ದಾಖಲೆಗಳು ನೀಡಿರುವ ಮಾಹಿತಿ ಪ್ರಕಾರ, 2ನೇ ವೇತನ ಆಯೋಗದಿಂದ 7ನೇ ವೇತನ ಆಯೋಗದವರೆಗೆ ನೌಕರರು ಎಷ್ಟು ಹೆಚ್ಚಳ ಪಡೆದರು ಎಂಬ ಮಾಹಿತಿ ಇಲ್ಲಿದೆ.
ವೇತನ ಆಯೋಗದ ಸಂಬಳ ಹೆಚ್ಚಳ, ವಿವರ
2ನೇ ವೇತನ ಆಯೋಗ - ಶೇಕಡಾ 14.2
3ನೇ ವೇತನ ಆಯೋಗ - ಶೇಕಡಾ 20.6%
4ನೇ ವೇತನ ಆಯೋಗ - 27.6 ಶೇಕಡಾ
5ನೇ ವೇತನ ಆಯೋಗ - ಶೇಕಡಾ 31
6ನೇ ವೇತನ ಆಯೋಗ - 54 ಶೇಕಡಾ
7ನೇ ವೇತನ ಆಯೋಗ - ಶೇಕಡಾ 14.3
8ನೇ ವೇತನ ಆಯೋಗ: ಶೇ.25-30 ಹೆಚ್ಚಳ, ಫಿಟ್‌ಮೆಂಟ್ 2.85
8ನೇ ವೇತನ ಆಯೋಗ ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರಿ ನೌಕರರು ವೇತನವು ಶೇಕಡಾ 25 ರಿಂದ 30 ರಷ್ಟು ಏರಿಕೆ ಆಗಲಿದೆ. ಇನ್ನೂ ಫಿಟ್‌ಮೆಂಟ್ ಅಂಶಗವು 2.6 ಮತ್ತು 2.85 ರ ನಡುವಿನ ಫಿಟ್‌ಮೆಂಟ್ ಅಂಶ ಹೆಚ್ಚಳ ಪರಿಗಣಿಸುವ ಸಾಧ್ಯತೆ ಇದೆ. ಮೂಲವೇತನದೊಂದಿಗೆ ಕನಿಷ್ಠ ವೇತನ 40,000 ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರದಂತಹ ಇತರ ಭತ್ಯೆಗಳು ಎಂಟನೇ ವೇತನ ಆಯೋಗದಡಿ ಅಧಿಕ ಪ್ರಮಾಣದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಹಾಲಿ ವೇತನ ಆಯೋಗದ ಅವಧಿ ಮುಂದಿನ ಹನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನಿಯಮದಂತೆ ಹತ್ತು ವರ್ಷಕ್ಕೆ ಒಮ್ಮೆ ಹೊಸ ವೇತನ ಆಯೋಗ ಜಾರಿಗೆ ತರಬೇಕು. ಅದರಂತೆ 2026ರಲ್ಲಿ 8ನೇ ವೇತನ ಆಯೋಗ ಜಾರಿ ಬರಲಿದ್ದು, ವೇತನ, ಭತ್ಯೆ ಹೆಚ್ಚಳದ ಮೇಲೆ ನೌಕರರ ಗಮನ ಕೇಂದ್ರಿಕೃತವಾಗಿದೆ.












Click it and Unblock the Notifications