Government Employees: ಹಳೆ ಪಿಂಚಣಿ ಯೋಜನೆ ಮರುಜಾರಿ ಬಗ್ಗೆ ಸರ್ಕಾರದ ನಿರ್ಧಾರ ಪ್ರಕಟ: ಸಂಪೂರ್ಣ ವಿವರ ಇಲ್ಲಿದೆ
ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆ. ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಅಂದಿನಿಂದಲೂ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ಒತ್ತಾಯಿಸುತ್ತಲೇ ಬಂದಿದ್ದಾರೆ.
ಹಳೆಯ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಪಿಂಚಣಿ ನೀಡುವ ನಿರ್ದಿಷ್ಟ ಯೋಜನೆಯಾಗಿದ್ದು, ಹಳೆ ಪಿಂಚಣಿ ಯೋಜನೆ(OPS) ಅಡಿಯಲ್ಲಿ, ನಿವೃತ್ತರಿಗೆ ಕೊನೆಯ ವೇತನದ 50% ಗೆ ಸಮಾನವಾದ ಪಿಂಚಣಿಯನ್ನು ಪಾವತಿಸಲಾಗುತ್ತಿತ್ತು. ಇದರ ಜೊತೆಗೆ ತುಟ್ಟಿ ಭತ್ಯೆಯಂಥಹ ಹೆಚ್ಚುವರಿ ಪ್ರಯೋಜನ ಕೂಡಾ ಸಿಗುತ್ತಿತ್ತು. ಪ್ರಸ್ತುತ ಕೆಲಸ ಮಾಡುತ್ತಿರುವ ನೌಕರರು ಯಾವುದೇ ಕೊಡುಗೆಗಳನ್ನು ಹೊಂದಿರಲಿಲ್ಲ. ಏಕೆಂದರೆ ಪಿಂಚಣಿಗಳನ್ನು ಸರ್ಕಾರಿ ಆದಾಯದಿಂದ ಪಾವತಿಸಲಾಗುತ್ತಿತ್ತು.

ಜನವರಿ 1, 2004 ರಿಂದ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಲಾಯಿತು. ಜನವರಿ 1, 2004 ರಿಂದ ಜಾರಿಗೆ ಬರುವಂತೆ ಎಲ್ಲಾ ಹೊಸ ಉದ್ಯೋಗಿಗಳಿಗೆ OPS ಅನ್ನು ರದ್ದುಗೊಳಿಸಲಾಯಿತು. ಇದೀಗ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯನ್ನ ಮರು ಜಾರಿಗೊಳಿಸಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ. ಕಳೆದ ಎಂಟು ತಿಂಗಳಿನಿಂದ ಉದ್ಯೋಗಿಗಳ ಸಂಘಗಳು ಮತ್ತು ನಿವೃತ್ತರ ಗುಂಪುಗಳು OPS ಮರುಸ್ಥಾಪನೆಗಾಗಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಲೇ ಬಂದಿವೆ. ಆದರೆ ಕೇಂದ್ರ ಸರ್ಕಾರಿ ನೌಕರರೊಂದಿಗೆ NPS ಅಡಿಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ದೀಪಾವಳಿಗೂ ಮುನ್ನ ಡಿಎ ಹೆಚ್ಚಳ!
ಕೇಂದ್ರ ನೌಕರರ ಜೀವನದಲ್ಲಿ ಈ ಬಾರಿ ಹಬ್ಬದ ಹೊಳಪು ಹೆಚ್ಚಾಗಲಿದೆ. ದೀಪಾವಳಿಗೂ ಮುನ್ನ, ಸರ್ಕಾರವು ಜುಲೈ-ಡಿಸೆಂಬರ್ 2025 ರ ಡಿಎ ಹೆಚ್ಚಳವನ್ನು ಘೋಷಿಸುತ್ತದೆ. ಪ್ರಸ್ತುತ, ಕೇಂದ್ರ ನೌಕರರ ಡಿಎ 55% ರಷ್ಟಿದೆ.ಜನವರಿಯಿಂದ ಏಪ್ರಿಲ್ ವರೆಗಿನ AICPI ದತ್ತಾಂಶದ ಆಧಾರದ ಮೇಲೆ, ಇದು 58% ತಲುಪಿದೆ. ಇನ್ನೂ 8ನೇ ವೇತನ ಆಯೋಗದ ಉಲ್ಲೇಖ ನಿಯಮಗಳನ್ನು 2025 ರ ದೀಪಾವಳಿಗೆ ಮೊದಲು ಅಂತಿಮಗೊಳಿಸಲಾಗುತ್ತದೆ. ಇದಕ್ಕೆ ಒಂದು ಸಮಿತಿಯನ್ನು ಕೂಡಾ ರಚಿಸಬಹುದು.
8ನೇ ವೇತನ ಆಯೋಗದ ಅತಿದೊಡ್ಡ ಸಮಸ್ಯೆ ಫಿಟ್‌ಮೆಂಟ್ ಅಂಶವಾಗಿದ್ದು, ಇದನ್ನು 1.92 ರಲ್ಲಿಯೇ ಇಡಬಹುದು. ಅಂದರೆ ಮೂಲ ವೇತನ ಬಹುತೇಕ ದ್ವಿಗುಣಗೊಳ್ಳುತ್ತದೆ. ಇದು ನೌಕರರಿಗೆ ವೇತನ ಹೆಚ್ಚಳವನ್ನು ನೀಡುವುದಲ್ಲದೆ, ಅವರ ಪಿಂಚಣಿ ಮತ್ತು ಇತರ ಭತ್ಯೆಗಳ ಮೇಲೂ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications