ಪೋರ್ನ್ ಪ್ರಿಯ ಭಾರತೀಯರು, ಭಲೇ ರಸಿಕರು ಕಣ್ರೀ !

ಬೆಂಗಳೂರು, ಅ.09: ಬೆಂಗಳೂರು ಸೇರಿದಂತೆ ಭಾರತದ ಆರು ನಗರಗಳು 'ಪೋರ್ನ್' ಪದವನ್ನು ಹೆಚ್ಚು ಬಾರಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಬಳಸಿ ಹುಡುಕಾಟ ನಡೆಸಿದ್ದಾರೆ ಎಂದು ಗೂಗಲ್ ಟ್ರೆಂಡ್ಸ್ ಮಾಹಿತಿ ನೀಡಿದೆ. ಪೋರ್ನ್ ಪ್ರಿಯ ಭಾರತೀಯರನ್ನು ಭಲೇ ರಸಿಕರು ಎಂದರೆ ಮನ್ಮಥ ಕೂಡಾ ಮೆಚ್ಚಿ ಹೌದೆನ್ನುತ್ತಾನೆ.

ಭಾರತದಲ್ಲಿ ಅಶ್ಲೀಲ ವೆಬ್ ತಾಣಗಳನ್ನು ನಿಷೇಧ ಮಾಡಬೇಕೇ? ಬೇಡವೇ? ಎಂಬ ಚರ್ಚೆ ಇನ್ನೂ ಮುಂದುವರೆದಿದೆ. ಪೋರ್ನ್ ಸೈಟ್ ಬ್ಯಾನ್ ಮಾಡಲು ಮುಂದಾದ ಮೋದಿ ಸರ್ಕಾರ ಕೊನೆಗೆ ಎರಡು ಹೆಜ್ಜೆ ಹಿಂದೆ ಇಡಬೇಕಾಯಿತು. ಈ ಸಂದರ್ಭದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಪದಗಳಲ್ಲಿ ಒಂದೆನಿಸಿರುವ 'ಪೋರ್ನ್' ಬಳಕೆ ಭಾರತದಲ್ಲಿ ಯಾವ ಮಟ್ಟದಲ್ಲಿ ಆಗುತ್ತಿದೆ ಎಂಬ ವಿಷಯ ಈಗ ಎಲ್ಲರ ಮುಂದಿದೆ. [ಮೇಕ್ ಇನ್ ಇಂಡಿಯಾ, ಶೇಕ್ ಇನ್ ಇಂಡಿಯಾ]

ಪೋರ್ನ್ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿರುವ ಇಂಟರ್ನೆಟ್ ಬಳಕೆದಾರರ ಪೈಕಿ ನವದೆಹಲಿ ಮುಂದಿದೆ. ನಂತರದ ಸ್ಥಾನದಲ್ಲಿ ಪುಣೆ, ಮುಂಬೈ, ಹೌರಾ, ಉನ್ನಾವೋ, ಕೌಲಾಲಂಪುರ ಹಾಗೂ ಬೆಂಗಳೂರು ಸ್ಥಾನ ಪಡೆದುಕೊಂಡಿದೆ.

Google Trends data: Porn Keyword Search Bengaluru among top Ten Cities

ಬಗೆ ಬಗೆ ಪೋರ್ನ್: 2008ರಿಂದ ಇತ್ತೀಚಿನ ತನಕ ಪುಣೆಯ ಪಡ್ಡೆಗಳು 'animal porn' ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದಂತೆ ಕಾಣುತ್ತದೆ. ಉಳಿದಂತೆ 'ರೇಪ್ ಪೋರ್ನ್' ಕೋಲ್ಕತ್ತಾ, ಹೌರಾ, ದೆಹಲಿ, ಅಹಮದಾಬಾದ್ ಹಾಗೂ ಪುಣೆಯಲ್ಲಿ ಹೆಚ್ಚು ಸರ್ಚ್ ಮಾಡಲ್ಪಟ್ಟಿದೆ. ಉತ್ತರಪ್ರದೇಶದ ಪುಟ್ಟ ಪಟ್ಟಣ ಉನ್ನವೋನ ಪ್ರಜೆಗಳು 'child sex' ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ. ['ರಿವೇಂಜ್ ಪೋರ್ನ್' ವಿರುದ್ಧ ಮೈಕ್ರೋಸಾಫ್ಟ್ ಸಮರ]

ಪೋರ್ನ್ ಬಗ್ಗೆ ಹೆಚ್ಚಿನ ಹುಡುಕಾಟದಲ್ಲಿ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಾಗೂ ನಂತರ ದೈಹಿಕ ಪ್ರಯೋಗಕ್ಕೆ ಮುಂದಾಗುವ ಕಾತುರ ಇದ್ದೇ ಇರುತ್ತದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲೈಂಗಿಕ ಹಾಗೂ ಅಂತರ್ಜಾಲ ಶಿಕ್ಷಣ ಕೊರತೆ ಇರುವುದರಿಂದ ಭಾರತದಲ್ಲಿ ಹೆಚ್ಚೆಚ್ಚು ಹುಡುಕಾಟ ನಡೆದಿರುವ ಸಾಧ್ಯತೆಯಿದೆ ಎಂದು ಕ್ರಿಪ್ಟೋಗ್ರಾಫಿ ತಜ್ಞ ಅಜಿತ್ ಹಟ್ಟಿ ಹೇಳಿದ್ದಾರೆ.

ಚೀನಾ, ರಷ್ಯಾ ಹಾಗೂ ಉತ್ತರ ಕೊರಿಯಾಗಳಲ್ಲಿ ಗೂಗಲ್ ಬಳಕೆ ಬಹುತೇಕ ಇಲ್ಲ ಎನ್ನಬಹುದು. ಇದ್ದರೂ ನಿರ್ಬಂಧಿತ ಬಳಕೆ ಮಾತ್ರ ಸಾಧ್ಯವಿದೆ. ಇತ್ತೀಚೆಗೆ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಸರ್ಚ್ ಇಂಜಿನ್ ನಲ್ಲಿ ಚೈಲ್ಡ್ ಸೆಕ್ಸ್, ಪೋರ್ನ್ ವಿಡಿಯೋಗೆ ನಿರ್ಬಂಧ ಹೇರಲು ಮುಂದಾಗಿದ್ದವು. ಅದರೆ, ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಯುಎಸ್, ಯುಕೆ ಮುಂತಾದ ದೇಶಗಳಲ್ಲಿ ಗೂಗಲ್ ಬದಲಿಗೆ ಬೇರೆಯದ್ದೆ ಆದ ಸರ್ಚ್ ಇಂಜಿನ್ ಬಳಸುವುದರಿಂದ ಈ ನಗರಗಳು ಕಾಣಿಸಿಕೊಂಡಿಲ್ಲ ಎಂದು ಅಜಿತ್ ಹಟ್ಟಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+