Tirumala August Ticket Release: ತಿರುಪತಿ ತಿರುಮಲ ಆಗಸ್ಟ್ ದರ್ಶನ ಟಿಕೆಟ್ ಬಿಡುಗಡೆ- ರಜೆ ಮುಗಿದ ಮೇಲೂ ಭೇಟಿ ನೀಡಿ...
ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ತಿರುಪತಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಶುಭ ಸುದ್ದಿಯೊಂದನ್ನು ನೀಡಿದೆ.
ಹೌದು... ತಿರುಮಲ ಶ್ರೀವಾರಿ ಭಕ್ತರಿಗೆ ಪ್ರಮುಖವಾದ ಸೂಚನೆಯೊಂದನ್ನು ಟಿಟಿಡಿ ನೀಡಿದೆ. ಆಗಸ್ಟ್ ತಿಂಗಳಿಗೆ ಸಂಬಂಧಿಸಿದಂತೆ 300 ರೂಪಾಯಿ ಕೋಟಾದ ವಸತಿ ಕೊಠಡಿಗಳು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಟಿಕೆಟ್ ಬಿಡುಗಡೆ ದಿನಾಂಕವನ್ನು ಟಿಟಿಡಿ ಘೋಷಣೆ ಮಾಡಿದೆ.

ನೀವೇನಾದರೂ ಆಗಸ್ಟ್ ತಿಂಗಳಲ್ಲಿ ತಿರುಪತಿಗೆ ಹೋಗಲು ಬಯಸಿದ್ದರೆ ದರ್ಶನ ಟಿಕೆಟ್ ಅಲ್ಲದೆ ನೀವು ಹೋಗುವ ದಿನಾಂಕದಂದೇ ಕೊಠಡಿಗಳನ್ನು ಕಾಯ್ದಿರಿಸಬಹುದು. ಅಂದಹಾಗೆ ಗುರುವಾರ (ಮೇ 23 ರಂದು) ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಣೆ ಟೋಕನ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ. ಅದೇ ದಿನ (ಮೇ 23) ಮಧ್ಯಾಹ್ನ 3 ಗಂಟೆಗೆ ವಯೋವೃದ್ಧರು, ಅಂಗವಿಕಲರು, ದೀರ್ಘ ಕಾಲಿಕ ರೋಗಿಗಳಿಗಾಗಿ ಉಚಿತ ಪ್ರತ್ಯೇಕ ದರ್ಶನ ಟೋಕನ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಜೊತೆಗೆ ಈ ತಿಂಗಳ 24ರಂದು (ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ 300 ರೂಪಾಯಿಯ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಅಲ್ಲದೆ ಅದೇ ದಿನ (ಮೇ 24 ರಂದು) ಮಧ್ಯಾಹ್ನ 3 ಗಂಟೆಗೆ ತಿರುಪತಿಲದಲ್ಲಿ ವಸತಿ ಕೊಠಡಿಗಳ ಬುಕ್ಕಿಂಗ್ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ಇದರೊಂದಿಗೆ ತಿರುಪತಿ ಶ್ರೀವಾರಿ ಸೇವಾ ಕೋಟಾವನ್ನು ಮೇ 27 (ಸೋಮವಾರ) ರಂದು ಬೆಳಿಗ್ಗೆ 11 ಗಂಟೆಗೆ, ಮಧ್ಯಾಹ್ನ 12 ಗಂಟೆಗಳಿಗೆ ನವನೀತ ಸೇವೆ, ಮಧ್ಯಾಹ್ನ 1 ಗಂಟೆ ಪರಕಾಮಣಿ ಸೇವಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಟಿಟಿಡಿ ಬಿಡುಗಡೆ ಮಾಡಲಿದೆ. ಭಕ್ತರು ಈ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.
ತಿರುಮಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು
ಮಂಗಳವಾರ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲ ತಲುಪಿದ್ದಾರೆ. ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ರೇವಂತ್ ರೆಡ್ಡಿ ತಿರುಪತಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ನಂತರ ರಸ್ತೆ ಮಾರ್ಗವಾಗಿ ತಿರುಮಲ ತಲುಪಿದರು.ಶ್ರೀ ಪದ್ಮಾವತಿ ನಗರದಲ್ಲಿರುವ ರಚನಾ ಅತಿಥಿ ಗೃಹಕ್ಕೆ ಆಗಮಿಸಿದ ರೇವಂತ್ ರೆಡ್ಡಿ ಅವರನ್ನು ಟಿಟಿಡಿ ಈವೋ ಎವಿ ಧರ್ಮಾ ರೆಡ್ಡಿ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ರಾತ್ರಿ ತಿರುಮಲದಲ್ಲಿರುವ ರಚನಾ ಅತಿಥಿಗೃಹದಲ್ಲಿ ತಂಗಿದ್ದರು.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬುಧವಾರ ಬೆಳಗ್ಗೆ ವಿಐಪಿ ವಿರಾಮದ ವೇಳೆ ಕುಟುಂಬ ಸದಸ್ಯರೊಂದಿಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ವೈಕುಂಠಂ ಸರತಿ ಸಂಕೀರ್ಣದ ಮೂಲಕ ದೇವಾಲಯವನ್ನು ಪ್ರವೇಶಿಸಿದಾಗ ದೇಗುಲದ ಅಧಿಕಾರಿಗಳು ಹಾಗೂ ಅರ್ಚಕರು ದೇವಸ್ಥಾನದ ಮುಖ್ಯದ್ವಾರದಲ್ಲಿ ರೇವಂತ್ ರೆಡ್ಡಿ ಅವರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ತಿರುಮಲ ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆಂದು ತಿರುಮಲಕ್ಕೆ ಬಂದ ಸಿಎಂ ರೇವಂತ್ ರೆಡ್ಡಿ ಶ್ರೀವಾರಿ ದೇವಸ್ಥಾನದ ಮುಂದೆ ತಮ್ಮ ನಿರ್ಧಾರ ಪ್ರಕಟಿಸಿದರು. ತಿರುಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ತಿರುಮಲದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.












Click it and Unblock the Notifications