Tirupati Laddu: ಶ್ರೀವಾರಿ ಭಕ್ತರಿಗೆ ಸಿಹಿಸುದ್ದಿ- ಇನ್ಮುಂದೆ ತಿರುಪತಿ ಲಡ್ಡು ಟೀಸ್ಟಿ ಟೀಸ್ಟಿ....
ಶ್ರೀವಾರಿ ಭಕ್ತರಿಗೆ ಇನ್ಮುಂದೆ ತಿರುಪತಿ ಲಡ್ಡು ಎಂದಿಗಿಂತ ರುಚಿಯಾಗಿ ಸಿಗಲಿದೆ. ತಿರುಪತಿ ಲಡ್ಡು ವಿಚಾರದಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು.. ಕಳೆದ ದಿನ ಟಿಟಿಡಿ ಇಒ ಜಯ್ ಶ್ಯಾಮಲಾ ರಾವ್ ಶ್ರೀವಾರಿ ಲಡ್ಡು ಪ್ರಸಾದವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿ ಹಾಗೂ ಬಾಣಸಿಗರಿಗೆ ಪ್ರಮುಖ ಸೂಚನೆಗಳನ್ನು ನೀಡಿದರು. ನೂತನವಾಗಿ ನೇಮಕಗೊಂಡ ಇಒ ಜಯ್ ಶ್ಯಾಮಲಾ ಅವರು ಇನ್ಮುಂದೆ ಲಡ್ಡು ಪ್ರಸಾದವನ್ನು ರುಚಿಯಾಗಿ ಹಾಗೂ ಗುಣಮಟ್ಟದ ಪದಾರ್ಥಗಳನ್ನು ಬಳಕೆ ಮಾಡಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ.

ಜೊತೆಗೆ ಗುಣಮಟ್ಟದ ತುಪ್ಪ, ಬೇಳೆ ಮತ್ತು ಏಲಕ್ಕಿ ಬಳಸಿ ಹೆಚ್ಚು ರುಚಿಕರವಾದ ಲಡ್ಡುಗಳನ್ನು ತಯಾರಿಸಿ ಎಂದು ಜಯ್ ಶ್ಯಾಮಲಾ ರಾವ್ ಬಾಣಸಿಗರಿಗೆ ಸೂಚನೆ ನೀಡಿದ್ದಾರೆ. ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಶುಕ್ರವಾರ ಜಯ್ ಶ್ಯಾಮಲಾ ಅವರು ಜೆಇಒ ವೀರಬ್ರಹ್ಮ ಮತ್ತು ಸಿವಿಎಸ್‌ಒ ನರಸಿಂಹಕಿಶೋರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲಾಯಿತು. ಜೊತೆಗೆ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವನ್ನು ಪರಿಶೀಲಿಸುವಂತೆ ಖಡಕ್ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಲಡ್ಡು ತಯಾರಿಕೆಯ ಗುಣಮಟ್ಟದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಲಡ್ಡು ತಯಾರಿಕೆಯಲ್ಲಿ ಬಳಸುವ ಬೇಳೆ ಹಿಟ್ಟು, ತುಪ್ಪ, ಏಲಕ್ಕಿಗಳ ಗುಣಮಟ್ಟ ಸುಧಾರಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದ್ದವು. ಇದರಿಂದಾಗಿ ಇಒ ಲಡ್ಡು ತಯಾರಿಕೆಯ ಗುಣಮಟ್ಟವನ್ನು ಸುಧಾರಿಸುವಂತೆ ಬಾಣಸಿಗರಿಗೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಬಾಣಸಿಗರ ಸಮಸ್ಯೆಗಳನ್ನು ಆಲಿಸಲಾಯಿತು. ಕೆಲಸದ ಹೊರೆ ಹೆಚ್ಚಾಗುತ್ತಿದೆ ಎಂದು ಬಾಣಸಿಗರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಹೆಚ್ಚಿವರಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ಲಡ್ಡು ತಯಾರಿಕೆಗೆ ಬೇಕಾಗುವ ಪದಾರ್ಥಗಳನ್ನು ಟೆಂಡರ್ ಮೂಲಕ ಖರೀದಿಸಲಾಗುತ್ತಿದ್ದು, ಕಡಿಮೆ ಬೆಲೆಗೆ ನೀಡುವವರಿಂದ ಖರೀದಿಸಲಾಗುತ್ತಿದೆ. ಗುಣಮಟ್ಟ ಹೆಚ್ಚಿಸಲು ಹೆಚ್ಚುವರಿ ಹಣ ಖರ್ಚಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಇಒಗೆ ವಿವರಿಸಿದರು.
ಅಧಿಕಾರಿಗಳು ಮತ್ತು ಬಾಣಸಿಗರ ಸಲಹೆ-ಸೂಚನೆಗಳನ್ನು ಆಲಿಸಿದ ಇಒ ಅವರು ಉತ್ತಮ ಗುಣಮಟ್ಟದ ತುಪ್ಪ ಮತ್ತು ಇತರ ಪದಾರ್ಥಗಳನ್ನು ಬಳಸಿ ರುಚಿಕರವಾದ ಲಡ್ಡು ತಯಾರಿಸಿ ನಂತರ ರುಚಿ ಮತ್ತು ಗುಣಮಟ್ಟವನ್ನು ಪರಿಶೀಲಿಸುವಂತೆ ಹೇಳಿದರು. ಸಭೆಯಲ್ಲಿ ಶ್ರೀವಾರಿ ದೇವಸ್ಥಾನದ ಉಪ ಇಒ ಲೋಕನಾಥಂ, ಎಇಒ (ಪೋತು) ಶ್ರೀನಿವಾಸುಲು, ನಿವೃತ್ತ ಎಇಒಗಳಾದ ಶ್ರೀನಿವಾಸನ್, ವಸಂತ ರಾವ್ ಮತ್ತಿತರರು ಭಾಗವಹಿಸಿದ್ದರು.

ತಿರುಪತಿ ಲಡ್ಡು ತುಂಬಾ ವಿಶೇಷತೆಯನ್ನು ಹೊಂದಿದೆ. ತಿರುಮಲಕ್ಕೆ ಹೋಗಿ ಭಗವಂತನ ದರ್ಶನ ಪಡೆದವರೆಲ್ಲರೂ ಲಡ್ಡುವನ್ನು ಸ್ವೀಕರಿಸುತ್ತಾರೆ. ಲಡ್ಡುವನ್ನು ಸ್ವೀಕರಿಸಿ ಸ್ವಾಮಿಯ ದರ್ಶನದಿಂದ ಪುಣ್ಯ ಲಭಿಸಿತೆಂದು ಭಾವಿಸುತ್ತಾರೆ. ಅದಕ್ಕಾಗಿಯೇ ಭಕ್ತರು ತಿಮ್ಮಪ್ಪನ ದರ್ಶನದಷ್ಟೇ ಸಮಯವನ್ನು ಲಡ್ಡು ಖದೀಗೂ ಮೀಸಲಿಡುತ್ತಾರೆ. ಅಲ್ಲದೆ ತಿಮ್ಮಪ್ಪನ ಭಕ್ತರು ಇನ್ನುಮುಂದೆ ತುಂಬಾ ಸುಲಭವಾಗಿ ಲಡ್ಡು ಪಡೆಯಬಹುದು.
ಹೌದು... ಲಡ್ಡುಗಳನ್ನು ಪಡೆಯದೇ ತಿರುಪತಿಗೆ ಬರುವವರು ಯಾರೂ ಕೂಡ ಬರಿಗೈಯಲ್ಲಿ ಹಿಂದಿರುಗುವುದಿಲ್ಲ. ಎಷ್ಟೇ ಸಮಯವಾದರೂ ಲಡ್ಡುಗಳನ್ನು ಸರದಿ ಸಾಲಿನಲ್ಲಿ ನಿಂತು ಖರೀದಿ ಮಾಡುತ್ತಾರೆ. ಹೀಗೆ ತಿರುಪತಿ ಲಡ್ಡುಗೆ ಬೇಡಿಕೆ ಹೆಚ್ಚಾಗಿದ್ದು ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚು ಹೊತ್ತು ಭಕ್ತರು ಕಾಯುವ ಸ್ಥಿತಿ ಇದೆ. ಹೀಗಾಗಿ ತಿರುಮಲದಲ್ಲಿ 15 ಹೆಚ್ಚುವರಿ ಲಡ್ಡು ಕೌಂಟರ್ ಸ್ಥಾಪನೆಗೆ ಟಿಟಿಡಿ ನಿರ್ಧರಿಸಿದೆ.
ತಿರುಪತಿಗೆ ಬರುವ ಭಕ್ತರು ದರ್ಶನದ ನಂತರ ಲಡ್ಡೂ ಕೌಂಟರ್‌ಗಳಲ್ಲಿ ಹೆಚ್ಚಿನ ಸಮಯ ಕಾದು ಹೆಚ್ಚು ಲಡ್ಡೂಗಳನ್ನು ಖರೀದಿಸುತ್ತಾರೆ. ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸಲು ಹೆಚ್ಚು ಸಮಯ ಕಾಯಬೇಕು. ಇದನ್ನು ತಪ್ಪಿಸಲು ಟಿಟಿಡಿ ಹೆಚ್ಚಿನ ಲಡ್ಡು ಕೌಂಟರ್ ಸ್ಥಾಪನೆಗೆ ಮುಂದಾಗಿದೆ.












Click it and Unblock the Notifications