ರಾತ್ರಿ ವೇಳೆ ಕಿರಣ್ ಬೇಡಿಯಿಂದ ಮಹಿಳಾ ಸುರಕ್ಷತೆಯ ರಿಯಾಲಿಟಿ ಚೆಕ್

ಪುದುಚೆರಿ, ಆಗಸ್ಟ್ 21: ಪುದುಚೆರಿ ಲೆಫ್ಟಿನೆಂಟ್ ಗವರ್ನರ್, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ರಾತ್ರಿ ಹೊತ್ತು ಸ್ಕೂಟರ್ ಹತ್ತಿ ನಗರ ಸುತ್ತಾಡಿ ಮಹಿಳೆಯರಿಗೆ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಚೆಕ್ ಮಾಡಿದ್ದಾರೆ.

ಅವರ ಕಾಳಜಿ ಚೆನ್ನಾಗಿದೆ. ಆದರೆ ಹೆಲ್ಮೆಟ್ ಹಾಕದೆ ಅವರು ನಗರ ಪ್ರದಕ್ಷಿಣೆ ಹಾಕಿದ್ದು ಅವರೇ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರ ಜತೆ ತಲೆ ಮೇಲೆ ದುಪ್ಪಟ್ಟಾ ಹೊದ್ದುಕೊಂಡು ಕಿರಣ್ ಬೇಡಿ ಸ್ಕೂಟಿಯಲ್ಲಿ ನಗರ ಸುತ್ತಾಡಿದ್ದಾರೆ.

"Good job Kiran Bedi on surprise check, but where is the helmet"

ಕಿರಣ್ ಬೇಡಿ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಕಿರಣ್ ಬೇಡಿಯಾಗಲಿ, ಗಾಡಿ ಓಡಿಸುತ್ತಿದ್ದ ಮತ್ತೋರ್ವ ಮಹಿಳೆಯಾಗಲೀ ಹೆಲ್ಮೆಟ್ ಹಾಕದೇ ಇದ್ದುದ್ದನ್ನು ನೆಟಿಜನ್ ಗಳು ಪ್ರಶ್ನಿಸಿದ್ದಾರೆ.

ತಮ್ಮ ನೈಟ್ ರೈಡ್ ನಂತರ ವಿಡಿಯೋ ಅಪ್ಲೋಡ್ ಮಾಡಿರುವ ಕಿರಣ್ ಬೇಡಿ, "ತಕ್ಕಮಟ್ಟಿಗೆ ಪುದುಚೆರಿ ಮಹಿಳೆಯರಿಗೆ ರಾತ್ರಿ ಹೊತ್ತು ಸುರಕ್ಷಿತವಾಗಿದೆ. ಆದರೆ ಇನ್ನೂ ಹೆಚ್ಚು ಸುರಕ್ಷಿತಗೊಳಿಸಬಹುದು," ಎಂದಿದ್ದಾರೆ.

ಇನ್ನು "ಹೆಲ್ಮೆಟ್ ಹಾಕದೇ ಇದ್ದುದ್ದು ನಮ್ಮದೇ ಆಯ್ಕೆ. ಬೇಕೆಂದೇ ಹೆಲ್ಮೆಟ್ ಹಾಕಿರಲಿಲ್ಲ. ರಾತ್ರಿ ಹೊತ್ತು ಮಹಿಳೆಯರು ಸ್ಕೂಟಿ ಓಡಿಸುವುದನ್ನು ಜನರು ಹೇಗೆ ನೋಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಲ್ಮೆಟ್ ಹಾಕಿರಲಿಲ್ಲ," ಎಂದು ಕಿರಣ್ ಬೇಡಿ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+