Gold: ಚಿನ್ನದ ಕ್ರೇಜ್‌ಗೆ ಭಾರತಕ್ಕೆ ಭಾರೀ ಬೆಲೆ: 72 ಬಿಲಿಯನ್ ಡಾಲರ್ ಆಮದು ಆತಂಕ: ಗೋಪಾಲಕೃಷ್ಣ ಕುಂಟಿನಿ ಬರಹ

Gold: ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ವಿಶ್ವಕ್ಕೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ತಂದೊಡ್ಡಿದೆ. ಇದರಿಂದ ಭಾರತವೂ ಸಹ ಹೊರತಾಗಿಲ್ಲ. ಭಾರತದ ಮೇಲೆಯೂ ಇರಾನ್ - ಅಮೆರಿಕ, ಇಸ್ರೇಲ್ ಯುದ್ಧದ ಪರಿಣಾಮ ಬೀರಿದೆ. ಈ ದೇಶಗಳ ನಡುವೆ ಯಾರೂ ಸುದೀರ್ಘ ಅವಧಿಯ ಯುದ್ಧ ನಡೆಯಲಿದೆ ಎಂದು ಅಂದಾಜಿಸಿರಲಿಲ್ಲ. ಈಗ ನಡೆಯುತ್ತಿರುವ ಯುದ್ಧವು ವಿಶ್ವದ ಆರ್ಥಿಕತೆಯ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರರ ಮೋದಿ ಅವರು ಭಾರತೀಯರು ಮುಂದಿನ ಒಂದು ವರ್ಷದ ಅವಧಿಗೆ ಹೂಡಿಕೆಯ ಮೇಲಿನ ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಹವ್ಯಾಸಿ ಬಹರಗಾರ ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ.

ಒಂದು ಡಾಲರ್ ಇಂದು 95.54 ರೂಪಾಯಿ. ಒಂದು ಬಿಲಿಯನ್ ಡಾಲರ್ ಅಂದರೆ 9,554 ಕೋಟಿ ರೂಪಾಯಿ. ಭಾರತ ಕಳೆದ ವರ್ಷ 72 ಬಿಲಿಯನ್ ಡಾಲರ್ ಕೊಟ್ಟು ವಿದೇಶಗಳಿಂದ ಚಿನ್ನ ಆಮದು ಮಾಡಿಕೊಂಡಿದೆ.(2024-25 ಕ್ಕಿಂತ ಶೇಕಡಾ 24 ಹೆಚ್ಚು) ಇಷ್ಟೊಂದು ಏಕೆ ಆಮದು ಮಾಡಿಕೊಳ್ಳಬೇಕಾಯಿತು? ಏಕೆಂದರೆ ಜನರ ಬೇಡಿಕೆ ಪೂರೈಸಲು. ಭಾರತದಲ್ಲಿ ಈಗೀಗ ಜನರು ಸಿಕ್ಕಾಪಟ್ಟೆ ಚಿನ್ನ ಖರೀದಿಸುತ್ತಿದ್ದಾರೆ. ಚಿನ್ನ ಈಗ ಅಗತ್ಯದ ಆಭರಣವಾಗಿಯಷ್ಟೇ ಉಳಿದಿಲ್ಲ. ಅದು ಭಾರೀ ಹೂಡಿಕೆಯ ಮತ್ತೊಂದು ಕ್ಷೇತ್ರ.

Gold

72 ಬಿಲಿಯನ್ ಡಾಲರ್ ಅಂದರೆ ಎಷ್ಟಾಯಿತು? 68,79,19,97,52,000 ರೂಪಾಯಿ! ಅಂದರೆ ನಮ್ಮ ವಿದೇಶಿ ವಿನಿಮಯದ ಶೇಕಡಾ 16 ಇದುವೇ ಆಯಿತು.

ಭಾರತದ ವಿದೇಶಿ ವಿನಿಮಯ ಸಂಗ್ರಹ ಪದೇಪದೇ ಅತ್ತಿತ್ತ ಆಗುತ್ತಲೇ ಇದೆ. ಇರಾನ್ ಯುದ್ಧದ ಕಾರಣದಿಂದ ಆಗುತ್ತಿರುವ ಆಯಿಲ್ ಕ್ರೈಸಿಸ್ ಭಾರೀ ಹೊಡೆತ ಬೇರೆ ಕೊಟ್ಟಿದೆ. ಫೆಬ್ರವರಿಯಲ್ಲಿ 728 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಇಡುಗಂಟು ಎಪ್ರಿಲ್ ಗೆ 691 ಬಿಲಿಯನ್ ಡಾಲರ್ ಗೆ ಬಂದಿದೆ.

IMF ಮುನ್ಸೂಚನೆಯಂತೆ ಭಾರತದ ಚಾಲ್ತಿ ಖಾತೆ ಕೊರತೆ (CAD) 2026 ರಲ್ಲಿ 84.5 ಬಿಲಿಯನ್ ಡಾಲರ್ ಆಗಬಹುದು. ಅಂದರೆ GDP ಯ ಸುಮಾರು 2 ಪ್ರತಿಶತಕ್ಕೆ ಹೆಚ್ಚಾಗಬಹುದು. The CAD is widening, which indicates that more money is leaving the country than entering it.

And gold is a big reason for that. ಆದ್ದರಿಂದ ಪ್ರಧಾನಿ ಹೇಳಿದ್ದು 'ಇನ್ನು ಒಂದು ವರ್ಷದ ಮಟ್ಟಿಗೆ ಯಾರೂ ಚಿನ್ನ ಖರೀದಿಸಬೇಡಿ' ಎಂದು.

1967 ರಲ್ಲಿ ಇಂದಿರಾಗಾಂಧಿ ಕೂಡಾ ಹೀಗೇ ಚಿನ್ನ ಖರೀದಿಸಬೇಡಿ ಎಂದು ಜನತೆಯನ್ನು ಕೇಳಿಕೊಂಡಿದ್ದರು.

ಬರಹ: ಗೋಪಾಲಕೃಷ್ಣ ಕುಂಟಿನಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+