ಟೆಲಿಕಾಂ ಕಂಪನಿಗಳಿಗೆ TRAI ಕ್ಲಾಸ್: ಬಳಕೆದಾರ ಸ್ನೇಹಿ ಯೋಜನೆ, STV ಬಿಡಲು ಖಡಕ್ ಸೂಚನೆ
ಬೆಂಗಳೂರು, ಜನವರಿ 07: ಟೆಲಿಕಾಂ ಕಂಪನಿಗಳು ಹಾಗೂ ಗ್ರಾಹಕರ ಹಿತಾಸಕ್ತಿ ಸಮತೋಲನವಾಗಿ ಕಾಪಾಡುವ 'ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ' (TRAI) ವಿವಿಧ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಕೂಲಕರ ಪ್ಲಾನ್‌ಗಳನ್ನು ಎಸ್‌ಟಿವಿ ವೋಚರ್ ಸೇರಿದಂತೆ ಇನ್ನಿತರ ಆಫರ್ ನೀಡುವಂತೆ ಸೂಚನೆ ನೀಡಿದೆ. ಈ ಮೂಲಕ ದುಬಾರಿ ರಿಚಾರ್ಜ್ ಪೈಪೋಟಿಗೆ ಬಿದ್ದ ಟೆಲಿಕಾಂ ಕಂಪನಿಗಳಿಗೆ ಗ್ರಾಹಕರ ಬೇಡಿಕೆಗೆ ಆದ್ಯತೆ ನೀಡುವಂತೆ ಖಡಕ್ ಸಲಹೆ ನೀಡಿದೆ.
ಖಾಸಗಿ ಹಾಗೂ ಕೇಂದ್ರ ಸರ್ಕಾರಿ ವ್ಯಾಪ್ತಿಯ ಟೆಲಿಕಾಂ ಸಂಸ್ಥೆಗಳಾದ BSNL, Jio, Airtel ಮತ್ತು VI ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್ ರಿಚಾರ್ಜ್ ಪ್ಲಾನ್ ನೀಡಬೇಕು. ಜೊತೆಗೆ ಧ್ವನಿ ಕರೆ ಮತ್ತು ಎಸ್‌ಎಂಎಸ್‌ಗೆ ಪ್ರತ್ಯೇಕ ವಿಶೇಷ ಸುಂಕದ ವೋಚರ್‌ಗಳನ್ನು (ಎಸ್‌ಟಿವಿ) ಪರಿಚಯಿಸುವಂತೆ ನಿರ್ದೇಶಿಸಿದೆ ಎಂದು 'ಪಿಟಿಐ' ವರದಿ ಮಾಡಿದೆ.

TRAI ತನ್ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದೆ. ಟೆಲಿಕಾಂ ಕಂಪನಿಗಳು 4ಜಿ, 5ಜಿ ಸೇವೆ ನೀಡುವ ಭರದಲ್ಲಿ 2G ಬಳಕೆದಾರರನ್ನು ಮರೆಯುವಂತೆಇಲ್ಲ. ಅವರಿಗೂ ಬೇಕಾದ ಸೇವೆ ಪೂರೈಸಬೇಕು. 2ಜಿ ನೆಟ್‌ವರ್ಕ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ತಿಳಿಸಿದೆ.
ಟೆಲಿಕಾಂ ಹಾಗೂ ಗ್ರಾಹಕರಿಗೆ ಕುರಿತಾದ ಒಂದಷ್ಟು ವಿಚಾರಗಳನ್ನು TRAI ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಅವರು ಇತ್ತೀಚೆಗೆ ಪಿಟಿಐ ಸಂದರ್ಶನ ವೇಳೆ ತಿಳಿಸಿದ್ದಾರೆ. ಡೇಟಾ ಬಳಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಬೇಕು. ಯಾವುದನ್ನು ಬಲವಂತವಾಗಿ ಬಳಕೆದಾರರ ಮೇಲೆ ಹೇರಬಾರದು, ಅವರಿಗೆ ಆಯ್ಕೆ ನೀಡಬೇಕು ಎಂದರು.
ಟೆಲಿಕಾಂ ಉದ್ಯಮದ ಹಿತಾಸಕ್ತಿ ಹೊತೆಗೆ ಗ್ರಾಹಕರ ಹಿತಾಸಕ್ತಿ ಎರಡು ಪ್ರಾಧಿಕಾರಕ್ಕೆ ಮುಖ್ಯವಾಗಿರುತ್ತದೆ. ಗ್ರಾಹಕರ ಬೇಡಿಕೆಗೆ ಅಗತ್ಯಕ್ಕೆ ತಕ್ಕಂತೆ ಸೇವೆ, ಪ್ಲಾನ್ ಯೋಜನೆ ಬಿಡಬೇಕಿದೆ. ಅದರಲ್ಲಿ ಇಷ್ಟವಿರುವ, ಅಗತ್ಯ ಯೋಜನೆಗಳನ್ನು ಜನರು ಆಯ್ಕೆ ಮಾಡಿಕೊಂಡು ಬಳಕೆ ಮಾಡುತ್ತಾರೆ. ಹೀಗಾಗಿ ಅವರಿಗೆ ಆಯ್ಕೆಗಳನ್ನು ಒದಗಿಸಬೇಕು.
ಪ್ರಾಧಿಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ಟೆಲಿಕಾಂ ಸಂಸ್ಥೆಗಳಾದ ಬಿಎಸ್‌ಎನ್‌ಎಲ್, ವಿಐ, ಏರ್‌ಟೆಲ್, ಜಿಯೋ ಕಂಪನಿಗಳು ಕಾಲ್ ಮತ್ತು ಎಸ್‌ಎಂಎಸ್‌ಗಾಗಿ ವಿಶೇಷ ಸುಂಕದ ವೋಚರ್ (ಎಸ್‌ಟಿವಿ) ನೀಡಬೇಕು. ಈ ವೋಚರ್‌ಗಳು 90 ದಿನಗಳ ವರೆಗೆ ಇಲ್ಲಿವೇ 365 ದಿನಗಳವರೆಗೆ ಅವಧಿ ಹೊಂದಿರಬೇಕು. ರೀಚಾರ್ಜ್ ವೋಚರ್‌ನಲ್ಲಿ ಕಲರ್ ಕೋಡಿಂಗ್ ತೆಗೆಯುವಂತೆ ತಿಳಿಸಿದೆ.
ಹೆಚ್ಚುತ್ತಿರುವ ಡೇಟಾ ಪ್ಲಾನ್ ಯೋಜನೆಗಳು, ಎಲ್ಲ ವಿಧದ ಬಳಕೆದಾರರಿಗೆ ಆಗುತ್ತಿರುವ ಸಮಸ್ಯೆಗಳಿಗೆ TRAI ಮಾರ್ಗಸೂಚಿಗಳು ಪರಿಹಾರ ನೀಡಲಿದೆ. ಗ್ರಾಹಕರಿಗೆ ಕೈಗೆಟುಕುವ ಧ್ವನಿ ಮತ್ತು ಕರೆ ಇತರ ರೀಚಾರ್ಜ್ ಆಯ್ಕೆಗಳಿಗೆ ಅವಕಾಶ ದೊರೆಯಲಿದೆ.












Click it and Unblock the Notifications