ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೀತಾ ಗೋಪಿನಾಥ್ ಐಎಂಎಫ್ ನೂತನ ಮುಖ್ಯ ಆರ್ಥಿಕ ತಜ್ಞೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 01 : ಭಾರತೀಯ ಮೂಲದ ಗೀತಾ ಗೋಪಿನಾಥ್ ಅವರನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕ ಮಾಡಲಾಗಿದೆ.

ಪ್ರಸ್ತುತ ಐಎಂಎಫ್‌ ಆರ್ಥಿಕ ತಜ್ಞರಾಗಿರುವ ಮೌರಿ ಆಬ್‌ಸ್ಟ್‌ಫೆಲ್ಡ್‌ ಡಿಸೆಂಬರ್‌ನಲ್ಲಿ ನಿವೃತ್ತರಾಗಲಿದ್ದು, ನಂತರ ಗೀತಾ ಗೋಪಿನಾಥ್ ಅವರು ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್

Gita Gopinath is IMF s new chief economist

ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಪಕರಾಗಿದ್ದಾರೆ. ಅಂತರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ.

ಭಾರತದ ಶೇಷ್ಠತೆಯನ್ನು ಹಾಡಿ ಹೊಗಳಿದ ಉಜ್ಬೇಕಿಸ್ತಾನದ ಅಧ್ಯಕ್ಷಭಾರತದ ಶೇಷ್ಠತೆಯನ್ನು ಹಾಡಿ ಹೊಗಳಿದ ಉಜ್ಬೇಕಿಸ್ತಾನದ ಅಧ್ಯಕ್ಷ

ಭಾರತದಲ್ಲಿ ಜನಿಸಿದ ಗೀತಾ ಗೋಪಿನಾಥ್ ಅವರು ಸದ್ಯ ಅಮೆರಿಕದ ಪೌರತ್ವ ಹೊಂದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ 2001ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.

ಪಾಕ್ ನಲ್ಲಿ ಉಗ್ರರು ಹೆಚ್ಚಾಗುವುದಕ್ಕೂ, ಯೋಗಿ ಆದಿತ್ಯನಾಥ್ ಗೂ ಎಂಥಾ ಸಂಬಂಧ?ಪಾಕ್ ನಲ್ಲಿ ಉಗ್ರರು ಹೆಚ್ಚಾಗುವುದಕ್ಕೂ, ಯೋಗಿ ಆದಿತ್ಯನಾಥ್ ಗೂ ಎಂಥಾ ಸಂಬಂಧ?

ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್‌ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ. ಜಿ 20 ರಾಷ್ಟ್ರಗಳ ಶ್ರೇಷ್ಠ ವ್ಯಕ್ತಿಗಳ ಸಲಹಾ ತಂಡದ ಸದಸ್ಯರಾಗಿ ಭಾರತದ ಹಣಕಾಸು ಇಲಾಖೆ ಪರವಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಪಕರಾಗಿ ಸೇರುವುದಕ್ಕೂ ಮುನ್ನ ಅವರು ಷಿಕಾಗೊ ವಿಶ್ವವಿದ್ಯಾಲಯದ ಗ್ರಾಜ್ಯುಯೇಟ್ ಸ್ಕೂಲ್ ಆಫ್‌ ಬ್ಯುಸಿನೆಸ್‌ನಲ್ಲಿ ಸಹಾಯಕ ಪ್ರಾಧ್ಯಪಕರಾಗಿದ್ದರು.

ಭಾರತೀಯ ಮೂಲದ 2ನೇ ವ್ಯಕ್ತಿಯಾಗಿ ಗೀತಾ ಗೋಪಿನಾಥ್ ಅವರು ಅಂತರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞರಾಗಿ ಕೆಲಸ ಮಾಡಲಿದ್ದಾರೆ. ಆರ್‌ಬಿಐನ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮೊದಲು ಇದೇ ಹುದ್ದೆಯಲ್ಲಿದ್ದರು.

English summary
Indian origin Harvard University professor Gita Gopinath has been appointed chief economist of the International Monetary Fund (IMF). She will be the second Indian to hold the position after former RBI governor Raghuram Rajan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X