ಬಿಹಾರದಲ್ಲಿ ಶಾಲಾ ಬಾಲಕಿ ಮೇಲೆ 7 ತಿಂಗಳು 18 ಮಂದಿಯಿಂದ ಅತ್ಯಾಚಾರ

ಛಪ್ರಾ ಪ್ರದೇಶದ ಬಳಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದಲ್ಲಿ ಪ್ರಾಂಶುಪಾಲ, ಶಿಕ್ಷಕ ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಬಿಹಾರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನನ್ನ ತಂದೆ ಜೈಲಿಗೆ ಹೋದ ಮೇಲೆ ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಹಾಗೂ ಹದಿನೈದು ವಿದ್ಯಾರ್ಥಿಗಳು ಏಳು ತಿಂಗಳಿಂದ ಅತ್ಯಾಚಾರ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

ಛಪ್ರಾ ಪರ್ಸ್ ಗಢ್ ನ ಎಕ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಬಾಲಕಿ ದೂರಿನಲ್ಲಿ ತಿಳಿಸಿರುವ ಪ್ರಕಾರ, 2017ರ ಡಿಸೆಂಬರ್ ನಲ್ಲಿ ಬಾಲಕಿಯ ತಂದೆ ಜೈಲು ಸೇರಿದ್ದು, ಆ ನಂತರ ದೀಪೇಶ್ವರ್ ಜ್ಞಾನ ನಿಕೇತನದ ಪ್ರಾಂಶುಪಾಲ, ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

Girl allegedly raped by 15 students, 2 teachers and principal for 7 months

ಸಂತ್ರಸ್ತೆಯ ಹೇಳಿಕೆ ಆಧಾರದಲ್ಲಿ ಒಟ್ಟಾರೆ ಇಬ್ಬರು ಶಿಕ್ಷಕರು (ಪ್ರಾಂಶುಪಾಲರು ಒಳಗೊಂಡಂತೆ) ಮತ್ತು ಹದಿನೈದು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿಂದ ಬಿಡುಗಡೆಯಾದ ಮೇಲೆ ಇಡೀ ಪ್ರಕರಣದ ಬಗ್ಗೆ ಬಾಲಕಿ ತನ್ನ ತಂದೆಗೆ ಹೇಳಿಕೊಂಡಿದ್ದಾಳೆ.

ಇನ್ನು ಬಾಲಕಿ ಕುಟುಂಬದವರು ಆರೋಪಿಸಿರುವ ಪ್ರಕಾರ, ಮೊದಲಿಗೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+