Get Updates
Get notified of breaking news, exclusive insights, and must-see stories!

ನವರಾತ್ರಿ ಮೇಳದಲ್ಲಿ ಇದ್ದಕ್ಕಿದ್ದಂತೆ ನಿಂತ ಜೈಂಟ್ ವೀಲ್: ಒಳಗಿದ್ದ 50 ಜನ ಕಂಗಾಲು!

ದೆಹಲಿ ಅಕ್ಟೋಬರ್ 19: ನವರಾತ್ರಿ ಮೇಳದಲ್ಲಿ 50 ಜನರಿದ್ದ ಜೈಂಟ್ ವೀಲ್ ಇದ್ದಕ್ಕಿದ್ದಂತೆ ನಿಂತುಹೋದ ಭಯಾನಕ ಘಟನೆ ದೆಹಲಿಯ ನರೇಲಾ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ. ಇದರಿಂದಾಗಿ ಅದರೊಳಗಿದ್ದ ಜನ ಆತಂಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ವರದಿಯಾಗಿದೆ.

ದೇಶದೆಲ್ಲೆಡೆ ನವರಾತ್ರಿ ಆಚರಣೆ ಈಗಾಗಲೆ ಆರಂಭವಾಗಿದೆ. ಅಕ್ಟೋಬರ್ 15 ರಿಂದ ಆರಂಭವಾದ ನವರಾತ್ರಿ ಆಚರಣೆ ಅಕ್ಟೋಬರ್ 23ರವರೆಗೆ ಇರಲಿದ್ದು ಅಕ್ಟೋಬರ್ 24ರಂದು ವಿಜಯದಶಮಿಯೊಂದಿಗೆ ಪೂರ್ಣಗೊಳ್ಳಲಿದೆ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

Giant Wheel suddenly stopped at Navnatri Mela: 50 people inside were devastated!

ಇದರ ಪ್ರಯುಕ್ತ ದೆಹಲಿಯ ನರೇಲಾ ಪ್ರದೇಶದಲ್ಲಿ ನವರಾತ್ರಿ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಬ್ರೇಕ್ ಡ್ಯಾನ್ಸ, ಬೋಟಿಂಗ್, ಜೈಂಟ್ ವೀಲ್ ಕೂಡ ಇದೆ. ಕಳೆದ ರಾತ್ರಿ ಕೆಲವು ತಾಂತ್ರಿಕ ದೋಷದಿಂದಾಗಿ ಜೈಂಟ್ ವೀಲ್ ನ ದೈತ್ಯ ಚಕ್ರ ಸವಾರಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ. ಇದರಿಂದಾಗಿ 50 ಜನರು ಇದರಲ್ಲಿ ಸಿಲುಕಿಕೊಂಡರು.

ಕಳೆದ ರಾತ್ರಿ 10:30ರ ಸುಮಾರಿಗೆ ಜೈಂಟ್ ವೀಲ್ ತಿರುಗುವುದನ್ನು ನಿಲ್ಲಿಸಿದೆ. ಕೆಳಗಿದ್ದ ಜನ ಸುಲಭವಾಗಿ ಇಳಿದು ಹೊರಬಂದರು. ಆದರೆ ಮೇಲಿನ ಪಂಜರದಲ್ಲಿದ್ದ ಜನರು ಸುಮಾರು ಅರ್ಧ ಗಂಟೆಗಳ ಕಾಲ ಅಲ್ಲಿಯೇ ಸಿಕ್ಕಿಹಾಕಿಕೊಂಡರು ಎಂದು ಹಲವಾರು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತಕ್ಷಣ ಪೊಲೀಸರಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತಾಂತ್ರಿಕ ಸಿಬ್ಬಂದಿಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಮಾಡಿದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಸ್ವಿಂಗ್‌ನ ಚಕ್ರ ಜನರಿರುವಾಗ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೊದಲು 20 ಜನರನ್ನು ರಕ್ಷಿಸಲಾಯಿತು. ಇವರಲ್ಲಿ ನಾಲ್ವರು ಪುರುಷರು, 12 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಇದ್ದರು. ಬಳಿಕ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಗುಜರಾತ್‌ನ ಸ್ಥಳೀಯ ಜಾತ್ರೆಯಲ್ಲಿ ಬಾಲಕಿಯ ಕೂದಲು ಫೆರ್ರಿಸ್ ಚಕ್ರದಲ್ಲಿ ಸಿಲುಕಿಕೊಂಡಿತ್ತು. ವೀಡಿಯೊವನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪುಟದ ಪ್ರಕಾರ, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸ್ಥಳೀಯ ಜಾತ್ರೆಯಲ್ಲಿ ದೇವಭೂಮಿ ದ್ವಾರಕಾ ಜಿಲ್ಲೆಯ ಖಂಬಾಲಿಯಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿತ್ತು.

ಹುಡುಗಿ ತನ್ನ ತಲೆಗೂದಲು ಬಿಟ್ಟುಕೊಂಡು ಜೈಂಟ್ ವೀಲ್ ನಲ್ಲಿ ಕುಳಿತಿದ್ದಳು. ಎರಡು ಬಾರಿ ತಿರುಗಿದ ನಂತರ ಅವಳ ಕೂದಲು ಚಕ್ರದ ಮಾಸ್ಟ್‌ಗಳಲ್ಲಿ ಸಿಕ್ಕಿಹಾಕಿಕೊಂಡಿತು. ನಂತರ ಆಕೆ ಕಿರುಚಾಡತೊಡಗಿದಳು. ಆಕೆಯ ಕೂಗು ಕೇಳಿದ ತಕ್ಷಣ ಸವಾರಿಯನ್ನು ನಿಲ್ಲಿಸಿ ಆಕೆಯನ್ನು ರಕ್ಷಿಸಲಾಯಿತು.

ಕಳೆದ ಜುಲೈನಲ್ಲಿ ಅಮೆರಿಕನ್ ಕ್ರಾಂಡನ್ ಪಾರ್ಕ್‌ನಲ್ಲಿ ನಡೆದ ಫಾರೆಸ್ಟ್ ಕೌಂಟಿ ಫೆಸ್ಟಿವಲ್‌ನಲ್ಲಿ ಜೈಂಟ್ ವೀಲ್‌ ನಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಜನರು ಹಲವಾರು ಗಂಟೆಗಳ ಕಾಲ ತಲೆಕೆಳಗಾಘಿ ಸಿಲುಕಿಕೊಂಡ ಘಟನೆ ನಡೆದಿತ್ತು. ಈ ಅಪಾಯಕಾರಿ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+