ಹಳೇ 500, 1,000 ನೋಟು ಇಟ್ಟುಕೊಂಡವರಿಗೆ ಆಶಾಕಿರಣ !
ಹಳೆ ನೋಟುಗಳನ್ನು ಕಾರಣಾಂತರಗಳಿಂದ ಜಮೆ ಮಾಡದವರಿಗೆ ಮತ್ತೊಂದು ಅವಕಾಶ ನೀಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರವನ್ನು ಕೇಳಿದ ಸುಪ್ರೀಂ ಕೋರ್ಟ್. ಕಳೆದ ವರ್ಷ ಸರ್ಕಾರ ಕೈಗೊಂಡಿದ್ದ ಅಪನಗದೀಕರಣದಿಂದ ನಿಷೇಧಕ್ಕೊಳಗಾಗಿದ್ದ 500 ಹಾಗೂ 1000 ರು. ನೋಟು
ನವದೆಹಲಿ, ಜುಲೈ 4: ಹಳೆಯ 500 ರು. ಹಾಗೂ 1000 ರು. ನೋಟುಗಳನ್ನು ಪ್ರಮುಖ ಕಾರಣಗಳಿಂದಾಗಿ ಜಮೆ ಮಾಡಲಾಗದವರಿಗೆ ಮತ್ತೊಂದು ಅವಕಾಶ ನೀಡಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಹಳೆಯ 500 ರು. ಹಾಗೂ 1000 ರು.ನೋಟುಗಳನ್ನು ನಿಷೇಧಿಸಿತ್ತು.

ಆ ಹಳೆಯ ನೋಟುಗಳನ್ನು ಬ್ಯಾಂಕಿಗೆ ತುಂಬಲು ಹಾಗೂ ಬದಲಾಯಿಸಿಕೊಳ್ಳಲು ನಿಗದಿತ ಗಡುವನ್ನೂ ನೀಡಿತ್ತು. ಆದರೆ, ಹಲವಾರು ಜನರು ಆ ನೋಟುಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆಂಬ ಮಾಹಿತಿ, ಗಡುವು ಮುಗಿದ ನಂತರವೂ ಲಭ್ಯವಾಗಿತ್ತು.
ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್, ನಿಷೇಧಿತ ನೋಟುಗಳನ್ನ ಸ್ವೀಕರಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಅರ್ಜಿಯೊಂದು ದಾಖಲಾಗಿತ್ತು.
ಮಂಗಳವಾರ ಆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹಳೆ ನೋಟು ಸ್ವೀಕೃತಿಗೆ ಮತ್ತೊಂದು ಅವಕಾಶ ನೀಡಬಲ್ಲಿರಾ ಎಂದು ಕೇಂದ್ರ ಸರ್ಕಾರವನ್ನು ಕೋರಿದೆ. ಅಲ್ಲದೆ, ಜುಲೈ 17ರೊಳಗೆ ಈ ಬಗ್ಗೆ ಉತ್ತರಿಸುವಂತೆ ಸೂಚನೆ ನೀಡಿದೆ.












Click it and Unblock the Notifications