ರಾಜನಾಥ್ ಸಿಂಗ್‌ ಪ್ರಯಾಣಕ್ಕೆ ರಸ್ತೆ ಬಂದ್; ನಾವು Gen Z.. ಇಂಧ ನಾನ್ಸೆನ್ಸ್‌ ಸಹಿಸಲ್ಲ: ಯುವತಿ ಆಕ್ರೋಶ

ಶ್ರೀನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹಾಗೂ ಸೇನಾ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಇತರ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಕ್ಕೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಲಡಾಖ್‌ನಲ್ಲಿ ನಡೆದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಚಿವರು ಹಾಗೂ ಸೇನಾ ಮುಖ್ಯಸ್ಥರ ಸಂಚಾರದ ಹಿನ್ನೆಲೆಯಲ್ಲಿ ಜೋಜಿಲಾ-ಗುಮ್ರಿ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಯುವತಿ, ತಾನು ಪ್ರವಾಸಕ್ಕೆ ಬಂದಿದ್ದು, ಈ ರೀತಿಯ ನಿರ್ಬಂಧಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಾವು Gen Z, ಇಂತಹ ಅಸಂಬದ್ಧತೆಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿರುವುದು ಕೇಳಿಬರುತ್ತದೆ.

Gen Z We Are Gen Z We Won t Tolerate This Tourist s Ladakh Outburst Sparks Backlash

ರಸ್ತೆ ಬಂದ್‌ ಮಾಡಿರುವುದನ್ನು ಪ್ರಶ್ನಿಸಿದ ಆಕೆ, "ನಾವು ಇಂತಹ ನಾನ್‌ಸೆನ್ಸ್‌ಗಳನ್ನು ಸಹಿಸುವುದಿಲ್ಲ. ನಾವು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದೇವೆ" ಎಂದು ಹೇಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಘಟನೆ ಲಡಾಖ್‌ನ ಕಾರ್ಗಿಲ್ ಸಮೀಪದ ಮಿನಿಮಾರ್ಗ್ ಚೆಕ್‌ಪಾಯಿಂಟ್‌ ಬಳಿ ನಡೆದಿದೆ ಎಂದು ವರದಿಯಾಗಿದೆ. ಸಚಿವರು ಮತ್ತು ಸೇನಾ ಮುಖ್ಯಸ್ಥರ ಸಂಚಾರದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಟ್ರಾಫಿಕ್ ನಿರ್ಬಂಧದಿಂದ ಪ್ರವಾಸಿಗರು ಹಲವು ಗಂಟೆಗಳ ಕಾಲ ಕಾಯಬೇಕಾಯಿತು ಎನ್ನಲಾಗಿದ್ದು, ಈ ವೇಳೆ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ವೈರಲ್ ವಿಡಿಯೋದಲ್ಲಿ "ನಾವು Gen Z, ಇಂತಹ ಅಸಂಬದ್ಧತೆಯನ್ನು ಸಹಿಸುವುದಿಲ್ಲ" ಎಂದು ಅವರು ಹೇಳಿರುವುದು ಕೇಳಿಬರುತ್ತದೆ. ಅಲ್ಲದೆ, ಪ್ರವಾಸಿಗರು ತಮ್ಮ ಸ್ವಂತ ಹಣದಿಂದ ಪ್ರವಾಸಕ್ಕೆ ಬಂದಿದ್ದಾರೆ ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿರುವುದಾಗಿ ವರದಿಯಾಗಿದೆ.

ಈ ಹೇಳಿಕೆಗಳಿಗೆ ಮಾಜಿ ಸೇನಾ ಅಧಿಕಾರಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸೇನಾ ಅಧಿಕಾರಿ ಕೆ.ಜೆ.ಎಸ್. ಧಿಲ್ಲೋನ್, ಲಡಾಖ್‌ನಂತಹ ಸೂಕ್ಷ್ಮ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಲು ಸಾಧ್ಯವಾಗುತ್ತಿರುವುದೇ ಸೈನಿಕರು ಹಗಲು-ರಾತ್ರಿ ಗಡಿಯನ್ನು ಕಾಯುತ್ತಿರುವುದರಿಂದ ಎಂದು ಹೇಳಿದ್ದಾರೆ. ಸೈನಿಕರ ತ್ಯಾಗವನ್ನು ಗೌರವಿಸುವಂತೆ ಸೂಚಿಸಿರುವ ಅವರು, "ಹಕ್ಕುಗಳ ಬಗ್ಗೆ ಪ್ರಶ್ನಿಸುವ ಮೊದಲು ಕಾನೂನು ಪಾಲಿಸುವ ಉತ್ತಮ ನಾಗರಿಕರಾಗಲು ಕಲಿಯಿರಿ" ಎಂದು ಕಿಡಿಕಾರಿದ್ದಾರೆ.

ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಕೂಡ ಘಟನೆಗೆ ಪ್ರತಿಕ್ರಿಯಿಸಿದ್ದು, ಮಹಿಳೆಯ ವರ್ತನೆಯಿಂದ 'Gen Z' ಪೀಳಿಗೆಗೆ ನಕಾರಾತ್ಮಕ ಚಿತ್ರಣ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಭದ್ರತಾ ತಪಾಸಣೆಗಳು ಪ್ರವಾಸಿಗರಿಗಷ್ಟೇ ಅಲ್ಲ, ಸ್ಥಳೀಯರಿಗೂ ಅನಿವಾರ್ಯವಾಗಿದ್ದು, ಇಂತಹ ಕ್ರಮಗಳನ್ನು ಯಾವುದೇ ಸರ್ಕಾರ ಅಥವಾ ಭದ್ರತಾ ಪಡೆಗಳು ಅನಗತ್ಯವಾಗಿ ಕೈಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಸತೀಶ್ ದುಆ ಅವರು ಕೂಡ ಸೈನಿಕರ ವೇತನ ತೆರಿಗೆದಾರರ ಹಣದಿಂದ ಬರುತ್ತದೆ ಎಂಬ ಹೇಳಿಕೆಯನ್ನು ಟೀಕಿಸಿದ್ದಾರೆ. ಸೇನಾ ಸಿಬ್ಬಂದಿಯೂ ತೆರಿಗೆ ಪಾವತಿಸುತ್ತಾರೆ ಮತ್ತು ಲಡಾಖ್ ಗಡಿ ಪ್ರದೇಶವಾಗಿರುವುದರಿಂದ ಇಲ್ಲಿ ಭದ್ರತಾ ಸೂಕ್ಷ್ಮತೆಗಳು ಇವೆ ಎಂದು ಅವರು ಹೇಳಿದ್ದಾರೆ. ಇನ್ನೂ ಯುವತಿಯ ಆಕ್ರೋಶದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಘಟನೆಯ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+