Gautam Adani: ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದ ಗೌತಮ್ ಅದಾನಿ
ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಅವರ ಕುಟುಂಬದವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು, ಪವಿತ್ರ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದಾನಿ ಕುಟುಂಬವು ಸನಾತನ ಮೌಲ್ಯಗಳಲ್ಲಿ ನಂಬಿಕೆ ಇರಿಸಿದ್ದು. ಮಹಾ ಕುಂಭಮೇಳದ ಸೇವೆಯಲ್ಲೂ ತೊಡಗಿದೆ. ಅದಾನಿ ಕುಟುಂಬವು ಪವಿತ್ರ ಗಂಗಾನದಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದೆ. ಇಲ್ಲಿನ ಪವಿತ್ರ ನದಿಗಳಾದ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಸಲ್ಲಿಸಿದೆ. ಅದಾನಿ ಅವರು ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದಲೂ ವಿಶೇಷ ಸೇವೆ ಹಾಗೂ ಪೂಜೆಗಳಲ್ಲಿ ಭಾಗವಹಿಸುತ್ತಿದ್ದಾರೆ. 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳವು ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಈ ಮಹಾ ಕುಂಭಮೇಳದಲ್ಲಿ ಕೋಟ್ಯಾಂತರ ಜನ ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ.
ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ಅದಾನಿ ಅವರು, ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಅನುಭವ ಅದ್ಭುತವಾಗಿದೆ. ಇಲ್ಲಿ ಕೋಟ್ಯಾಂತರ ಜನ ಭಾಗವಹಿಸಿದರೂ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ನಾನು ಭಾರತದ ಎಲ್ಲಾರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿರುವ ಈ ಕುಂಭಮೇಳದ ನಿರ್ವಹಣೆ ವಿಷಯವು ಮ್ಯಾನೇಜ್ಮೆಂಟ್ ಸಂಸ್ಥೆಗಳಿಗೆ ಸಂಶೋಧನೆಗೆ ಯೋಗ್ಯವಾದ ವಿಷಯವಾಗಿದೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ಗಂಗಾ ಮಾತೆಯ ಆಶೀರ್ವಾದಕ್ಕಿಂತ ದೊಡ್ಡದು ಯಾವುದು ಸಹ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸನಾತನ ಮೌಲ್ಯಗಳ ಬಗ್ಗೆ ಅದಾನಿ ಕುಟುಂಬಕ್ಕೆ ಅಪಾರ ಗೌರವ
ಸನಾತನ ಮೌಲ್ಯಗಳ ಬಗ್ಗೆ ಅದಾನಿ ಕುಟುಂಬವು ವಿಶೇಷ ಗೌರವವನ್ನು ಹೊಂದಿದೆ. ಅದಾನಿ ಅವರು ಹಾಗೂ ಅವರ ಕುಟುಂಬದವರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿರುವುದು ಹಾಗೂ ಮಹಾ ಕುಂಭಮೇಳಕ್ಕೆ ಅವರು ಕೊಡುಗೆ ನೀಡಿರುವುದೇ ಸನಾತನ ಸಂಪ್ರದಾಯಗಳ ಬಗ್ಗೆ ಅವರು ಹೊಂದಿರುವ ವಿಶೇಷ ಗೌರವವನ್ನು ಸೂಚಿಸುತ್ತದೆ. ಮಹಾಕುಂಭ ಮೇಳವು ಆಧ್ಯಾತ್ಮಿಕತೆ ಹಾಗೂ ಸಂಸ್ಕೃತಿಯ ಮಹಾ ಸಂಗಮವಾಗಿದೆ. ಅದಾನಿ ಅವರು ಭಕ್ತಿಯ ರೂಪದಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ.
#MahaKumbh2025 | Prayagraj, Uttar Pradesh: Adani Group Chairman, Gautam Adani along with his family offers prayers at Triveni Sangam, Prayagraj pic.twitter.com/SMzXmwxM0R
— ANI (@ANI) January 21, 2025
ಆಧ್ಯಾತ್ಮಿಕ ನಾಯಕರಾದ ಶ್ರೀ ಗುರುಪ್ರಸಾದ್ ಸ್ವಾಮೀಜಿ ಅವರು ಮಾತನಾಡಿ, ಗೌತಮ್ ಅದಾನಿ ಅವರ ವಿನಯ ಹಾಗೂ ನಿಸ್ವಾರ್ಥ ಕೊಡುಗೆಗಳನ್ನು ಶ್ಲಾಘಿಸಿದರು. ಅದಾನಿ ಗ್ರೂಪ್ ಕಂಪನಿಯ ಜವಾಬ್ದಾರಿ ಹಾಗೂ ಸಾಮಾಜಿಕ ಸೇವೆ ವಿಶೇಷವಾಗಿದೆ. ಇದಕ್ಕೆ ಮಹಾಕುಂಭ ಮೇಳಕ್ಕೆ ಅವರು ನೀಡಿರುವ ಕೊಡುಗೆಯೇ ಸಾಕ್ಷಿ. ಗೌತಮ್ ಅದಾನಿ ಅವರ ನಮ್ರತೆ ಇದರಲ್ಲಿ ಎದ್ದು ಕಾಣಿಸುತ್ತದೆ. ಹಿಂದೂ ಸಮಾರಂಭಗಳಿಗೆ ಅವರನ್ನು ಕರೆಯಲಿ ಎಂದು ಅವರು ಎಂದೂ ಕಾಯುವುದಿಲ್ಲ. ಅವರೇ ಸೇವೆ ಮಾಡುವುದಕ್ಕೆ ಮುಂದೆ ಬರುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
#MahaKumbh2025 | Prayagraj, Uttar Pradesh: Adani Group Chairman, Gautam Adani along with his family performs 'aarti' at Triveni Sangam, Prayagraj pic.twitter.com/tuwQlac4sU
— ANI (@ANI) January 21, 2025
ಗೌತಮ್ ಅದಾನಿ ಹಾಗೂ ಅವರ ಕುಟುಂಬದ ಸದಸ್ಯರು ಪ್ರಯಾಗರಾಜ್‌ಗೆ ಭೇಟಿ ನೀಡಿರುವುದು ವಿಶೇಷವಾಗಿದೆ. ಭಕ್ತರಿಗೆ ಸೇವೆ ಸಲ್ಲಿಸುವಲ್ಲಿ ಅವರ ಕುಟುಂಬದವರು ಭಾಗವಹಿಸುತ್ತಿರುವುದು ಸನಾತನ ಮೌಲ್ಯಗಳಿಗೆ ಅವರು ಕೊಡುತ್ತಿರುವ ಗೌರವ ಹಾಗೂ ಭಕ್ತಿಯನ್ನು ತೋರಿಸುತ್ತದೆ. ಅದಾನಿ ಗ್ರೂಪ್‌ಗೆ ಸೇವೆ ಎನ್ನುವುದು ಕೇವಲ ಒಂದು ಅಭ್ಯಾಸವಲ್ಲ. ಅದೊಂದು ನಮ್ರತೆ, ನಂಬಿಕೆ ಹಾಗೂ ನಿಸ್ವಾರ್ಥ ಸೇವೆ ಆಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications