ಜೈಲಿನಲ್ಲೇ ಗ್ಯಾಂಗ್ ಸ್ಟರ್ ಮುನ್ನಾ ಬಜರಂಗಿಯ ಬರ್ಬರ ಹತ್ಯೆ
ಲಕ್ನೋ, ಜುಲೈ 09: ಉತ್ತರ ಪ್ರದೇಶದ ಬಾಘ್ಪತ್ ಜಿಲ್ಲಾ ಕಾರಾಗ್ರಹದಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಕಾ ಮುನ್ನಾ ಬಜರಂಗಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಇಂದು ಬೆಳಿಗ್ಗೆ(ಜು.09) ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಿಗೆ ಪ್ರಕರಣವೊಂದರಲ್ಲಿ ಝಾನ್ಸಿ ಜೈಲಿನಲ್ಲಿದ್ದ ಜರಂಗಿಯನ್ನು ಬಾಘ್ಪತ್ ನ್ಯಾಯಾಲಯಕ್ಕೆ ಒಪ್ಪಿಸುವ ಸಲುವಾಗಿ ಜು.07 ರಂದು ಝಾನ್ಸಿಯಿಂದ ಕರೆತರಲಾಗಿತ್ತು.
ಜೈಲಿನ ಆವರಣದಲ್ಲೇ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕೆಲವು ದಿನಗಳ ಹಿಂದಷ್ಟೇ ಬಜರಂಗಿಯ ಪತ್ನಿ ಸೀಮಾ ಸಿಂಗ್, ತಮ್ಮ ಪತಿಯ ಪ್ರಾಣಕ್ಕೆ ಅಪಾಯವಿದೆ, ಅವರಿಗೆ ರಕ್ಷಣೆ ನೀಡುವಂತೆ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಬಜರಂಗಿಯನ್ನು ಹತ್ಯೆ ಮಾಡಲಾಗಿದೆ.
ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. 'ಜೈಲಿನ ಆವರಣದಲ್ಲೇ ಇಂಥ ಘಟನೆ ನಡೆಯುತ್ತದೆ ಎಂದರೆ ಇದು ನಿಜಕ್ಕೂ ಆತಂಕಕಾರಿ. ಈ ಕುರಿತು ಆಳವಾದ ತನಿಖೆ ನಡೆಯಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications