ರೆಡ್ಡಿ ಬೇಲ್ ಗಾಗಿ ಡೀಲ್: ಯಾದಗಿರಿ ರಾವ್ ಗೆ ಜಾಮೀನು

ಈ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ, ಜಡ್ಜ್ ಪಟ್ಟಾಭಿರಾಮರಾವ್ ಸೇರಿದಂತೆ 6 ಜನರಿಗೆ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಮುಂದಿನ ಆರು ವಾರದೊಳಗೆ ತನಿಖಾ ವರದಿ ಸಲ್ಲಿಸಬೇಕು. ಒಂದು ವರ್ಷದೊಳಗೆ ಪ್ರಕರಣ ಇತ್ಯರ್ಥಗೊಳಿಸಬೇಕು ಎಂದು ಎಸಿಬಿ ತಂಡಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಕೊಡಲು ಜಡ್ಜ್ ಪಟ್ಟಾಭಿರಾಮರಾವ್ ಜೊತೆ ಉದ್ಯಮಿ ಯಾದಗಿರಿ ರಾವ್ ಡೀಲ್ ಮಾಡಿದ್ದರು. ಈ ಡೀಲ್ ಕುದುರಿಸುವಂತೆ ಜನಾರ್ದನ ರೆಡ್ಡಿ ಅವರ ಸೋದರ ಸೋಮಶೇಖರ ರೆಡ್ಡಿ ಅವರೇ ಯಾದಗಿರಿಯನ್ನು ಕೋರಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.[ಮನೆ ಕಳೆದುಕೊಂಡ ಗಾಲಿ ರೆಡ್ಡಿ]
ಜಾಮೀನಿಗಾಗಿ ಲಂಚ ಪ್ರಕರಣದ ಪ್ರಮುಖ ರುವಾರಿ ಸೋಮಶೇಖರ್ ರೆಡ್ಡಿ ಎಂದು ಯಾದಗಿರಿ ತಪ್ಪೊಪ್ಪಿಗೆ ನೀಡಿದ್ದ. ಸೋಮಶೇಖರ್ ಅವರ 9.5 ಕೋಟಿ ರು ಡೀಲ್ ಹಣದ ಕೃಪೆಯಿಂದ ನಾನು ಮಾರುತಿ ಸ್ವಿಫ್ಟ್ ಕಾರು, ನಚಾರಾ ಪ್ರದೇಶದಲ್ಲಿ ದೊಡ್ಡ ಬಂಗಲೆ ಖರೀದಿಸಿದೆ ಎಂದಿದ್ದ
ನಂತರ ಜನಾರ್ದನ ರೆಡ್ಡಿ ಜಾಮೀನಿಗೆ ರೂ. 20 ಕೋಟಿಗೆ ಒಪ್ಪಂದವಾಗಿತ್ತು ಎಂಬ ಸತ್ಯವನ್ನು ಅವರ ಸೋದರ ಸೋಮಶೇಖರ ರೆಡ್ಡಿ ಅವರೇ ಬಾಯ್ಬಿಟ್ಟಿದ್ದರು. ರಿಯಲ್‌ಎಸ್ಟೇಟ್ ಉದ್ಯಮಿ ಯಾದಗಿರಿರಾವ್ ಅವರ ಮೂಲಕ ಪರಿಚತರಾದ ನ್ಯಾಯಾಧೀಶ ಟಿ.ವಿ. ಚಲಪತಿರಾವ್ ಅವರು ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರ ಮೇಲೆ ಪ್ರಭಾವ ಬೀರಿ ಜಾಮೀನು ಕೊಡಿಸುವ ಡೀಲ್ ಆಗಿತ್ತು.
ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾಮೀನು ಕೊಡಿಸಿದ್ದಾಗಿ ಯಾದಗಿರಿರಾವ್ ಹೇಳಿದ್ದನ್ನು ನಂಬಿಕೊಂಡು ಪಟ್ಟಾಭಿರಾಮರಾವ್‌ಗೆ ರೂ. 5 ಕೋಟಿ, ಚಲಪತಿರಾವ್‌ಗೆ ರೂ. 5 ಕೋಟಿ, ರೂ. ತಮಗೆ 5 ಕೋಟಿ, ನ್ಯಾಯಾಲಯದ ಖರ್ಚಿಗೆ ರೂ. 5 ಕೋಟಿ ಹಣ ಕೊಡಲು ಒಪ್ಪಂದ ಮಾಡಿಕೊಂಡಿದ್ದೆವು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದರು.
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕಾಲದೂಡುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ವಕೀಲರೊಬ್ಬರು ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಿದ್ದು ಈಗ ಚರ್ಚಾಸ್ಪದ ವಿಷಯವಾಗಿತ್ತು. [ವಿವರ ಇಲ್ಲಿ ಓದಿ]












Click it and Unblock the Notifications