ಪರಮಾಣು ಅಸ್ತ್ರಗಳ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ: ಪರೋಕ್ಷವಾಗಿ ರಷ್ಯಾಗೆ ಎಚ್ಚರಿಸಿದ ಜಿ20 ರಾಷ್ಟ್ರಗಳು
ನವದೆಹಲಿ, ಸೆಪ್ಟೆಂಬರ್ 09: ಪರಮಾಣು ಅಸ್ತ್ರಗಳ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ ಎಂದು ಜಿ 20 ರಾಷ್ಟ್ರಗಳು ಎಚ್ಚರಿಕೆ ನೀಡಿವೆ. ಈ ಮೂಲಕ ರಷ್ಯಾ ಹಾಗೂ ಚೀನಾ ದೇಶಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಹಾಗೂ ಮಾಸ್ಕೋ ಹಾಕುತ್ತಿರುವ ಬೆದರಿಕೆಗಳನ್ನು ಉಲ್ಲೇಖಿಸದೇ ಜಿ20 ಸಭೆಯಲ್ಲಿ ಪರೋಕ್ಷವಾಗಿ ಹೇಳಿಕೆಗಳನ್ನು ದಾಖಲಿಸಲಾಯಿತು.

ಉಕ್ರೇನ್‌ನಲ್ಲಿ ಸಮಗ್ರ ಶಾಂತಿ ಹಾಗೂ ನ್ಯಾಯಯುತ ಘನತೆಯನ್ನು ಸ್ಥಾಪಿಸಬೇಕೆಂದು ಜಿ20 ನಾಯಕರು ಪ್ರತಿಪಾದಿಸಿದ್ದಾರೆ.
ಕಳೆದ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಶೃಂಗಸಭೆಯ ನಂತರ ಈ ಜಿ20 ಘೋಷಣೆಯು ಹೆಚ್ಚು ಸ್ಪಷ್ಟವಾಗಿದೆ. ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಜಿ20 ದೇಶಗಳು ಪ್ರಬಲವಾಗಿ ಖಂಡಿಸಿವೆ.
ಜಿ20 ನವದೆಹಲಿ ನಾಯಕರ ಘೋಷಣೆಯು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಒಂದು ಪ್ರಮುಖ ಏರಿಕೆಯಾಗಿ ಕಂಡುಬಂದಿದೆ, ಇದು ಉಕ್ರೇನ್ ಮತ್ತು ಯುದ್ಧದಲ್ಲಿ ರಷ್ಯಾದ ಪಾತ್ರವನ್ನು ಉಲ್ಲೇಖಿಸುವಾಗ ಬಲವಾದ ಭಾಷೆಯನ್ನು ಒತ್ತಾಯಿಸುತ್ತದೆ ಎಂದು ವರದಿಯಾಗಿದೆ.
ಉಕ್ರೇನ್‌ನಲ್ಲಿ ರಷ್ಯಾ ದೇಶವು ಆಕ್ರಮಣ ಮಾಡುತ್ತಿದೆ. ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಅವರು ಜಾಗತಿಕ ನಾಯಕರ ಬೆದರಿಕೆಗೂ ಮಣಿಯುತ್ತಿಲ್ಲ. ಜಿ20 ಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ದೇಶದ ಅಧ್ಯಕ್ಷ ಜಿನ್‌ಪಿಂಗ್ ಅವರು ಗೈರಾಗಿದ್ದಾರೆ. ಇದು ಜಿ20 ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜಾಗತಿಕ ಆಹಾರ ಮತ್ತು ಇಂಧನ ಭದ್ರತೆ, ಸ್ಥೂಲ-ಹಣಕಾಸು ಸ್ಥಿರತೆ, ಹಣದುಬ್ಬರ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಜಿ20 ದೇಶಗಳು ಚರ್ಚೆ ನಡೆಸಿವೆ. ಉಕ್ರೇನ್‌ನಲ್ಲಿ ಇದರ ಪರಿಣಾಮಗಳನ್ನು ನಾಯಕರು ಎತ್ತಿ ತೋರಿಸಿದರು.
ಈ ವರ್ಷದ ಜಿ 20 ಸಭೆಯ ಸಾರಥ್ಯವನ್ನು ಭಾರತ ವಹಿಸಿಕೊಂಡಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ.












Click it and Unblock the Notifications