Lalit Modi-Vijay Mallya: ದೇಶದಿಂದ ಪರಾರಿಯಾದ ಇಬ್ಬರು ಒಂದೇ ಕಡೆ: ವಿಜಯ್ ಮಲ್ಯ ಮಗನ ಮದುವೆಯಲ್ಲಿ ಲಲಿತ್ ಮೋದಿ!
ನವದೆಹಲಿ, ಜೂನ್.24: ದೇಶದಿಂದ ಪರಾರಿಯಾಗಿರುವ ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥ ಲಲಿತ್ ಮೋದಿ ಮತ್ತೆ ದರ್ಶನ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಯುಕೆಯಲ್ಲಿ ನಡೆದ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ಅವರ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ವಿಜಯ್ ಮಲ್ಯ ಅವರ ಐಷಾರಾಮಿ ಎಸ್ಟೇಟ್‌ನಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಎರಡು ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲು ಕ್ರಿಶ್ಚಿಯನ್ ಮಾದರಿಯಲ್ಲಿ ಮದುವೆಯಾಗಿ ಬಳಿಕ ಸಾಂಪ್ರದಾಯಿಕ ಹಿಂದೂ ಮಾದರಿಯಲ್ಲಿ ವಿವಾಹ ಸಮಾರಂಭ ನಡೆಸಿದ್ದಾರೆ.

ಸಾಲಗಾರ ಮತ್ತು ತೆರಿಗೆ ವಂಚಕ ಒಂದೇ ಕಡೆ!
ವರ ಸಿದ್ಧಾರ್ಥ ಮಲ್ಯ ತಂದೆ ವಿಜಯ್ ಮಲ್ಯ ಅವರು 900 ಕೋಟಿಗೂ ಅಧಿಕ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಭಾರತ ಬಿಟ್ಟು ಪರಾರಿಯಾಗಿದ್ದಾರೆ. ಇತ್ತ ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥ ಲಲಿತ್ ಮೋದಿ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಇತರ ಪ್ರಕರಣಗಳ ಆರೋಪ ಹೊತ್ತು ದೇಶ ಬಿಟ್ಟು ಪರಾರಿಯಾಗಿದ್ದಾರೆ.
ಐಪಿಎಲ್ 2010 ರ ನಂತರ ಲಲಿತ್ ಮೋದಿ ಅವರನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ವ್ಯವಹಾರಗಳಲ್ಲಿ ದುರುಪಯೋಗ ಮತ್ತು ಹಣಕಾಸಿನ ಅಕ್ರಮಗಳ ಆರೋಪ ಅವರ ಮೇಲಿದೆ. ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವ ಕ್ರೀಡಾ ಸಮೂಹದ (ಡಬ್ಲ್ಯುಎಸ್‌ಜಿ) ಅಧಿಕಾರಿಗಳೊಂದಿಗೆ ಶಾಮೀಲಾಗಿ 753 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರೋಪಿಸಿದೆ.

ದೇಶಕ್ಕೆ ಮೋಸ ಮಾಡಿ ಅದ್ಧೂರಿಯಾಗಿ ಮಗನ ಮದುವೆ ಮಾಡಿದ ಮಲ್ಯ!
ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಮದುವೆ ಎರಡು ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನಡೆದಿದೆ. ದಂಪತಿಯ ವಿವಾಹದಲ್ಲಿ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು, ಕ್ರಿಶ್ಚಿಯನ್ ಮತ್ತು ಹಿಂದೂ ವಿವಾಹ ಸಮಾರಂಭಗಳನ್ನು ನಡೆಸಲಾಗಿದೆ. ಮಧು ಜಾಸ್ಮಿನ್ ಕ್ರಿಶ್ಚಿಯನ್ ಮದುವೆಗೆ ಬಿಳಿ ಗೌನ್ ಮತ್ತು ಹಿಂದೂ ವಿವಾಹಕ್ಕಾಗಿ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.
Liquor tycoon’s son Sidharth Mallya gets married with fanfare today in London pic.twitter.com/tkgSiOCsGG
— Harsh Goenka (@hvgoenka) June 23, 2024
ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಎರಡು ಅಧಿಕೃತ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅವರಿಗೆ "ಮಿಸ್ಟರ್ ಅಂಡ್ ಮಿಸೆಸ್ ಮಪೆಟ್" ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ವಿಜಯ್ ಮಲ್ಯ ಅವರು ತಮ್ಮ ಮಗನನ್ನು ಚುಂಬಿಸುತ್ತಿರುವುದು ಮತ್ತು ಲೈವ್ ಮ್ಯೂಸಿಕ್‌ಗೆ ನೃತ್ಯ ಮಾಡುವುದನ್ನು ನೋಡಬಹುದು.












Click it and Unblock the Notifications