ಹಳೆಯ ಸಂಸತ್ ಭವನದಲ್ಲಿ ಮೋದಿ ಕೊನೆಯ ಭಾಷಣ: ನೆಹರು, ಇಂದಿರಾ ಗಾಂಧಿಯನ್ನು ಹೊಗಳಿದ ಪ್ರಧಾನಿ
ನವದೆಹಲಿ, ಸೆಪ್ಟೆಂಬರ್ 18: ಹಳೆ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಕೊನೆಯ ಭಾಷಣ ಮಾಡಿದರು. ಕಳೆದ 75 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದಿರುವ ಪ್ರಮುಖ ಘಟನೆಗಳನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಇದೇ ವೇಳೆ, ಮಾಜಿ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹಾಡಿ ಹೊಗಳಿದರು.
'ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ವಿದೇಶಿ ದೊರೆಗಳು ತೆಗೆದುಕೊಂಡಿದ್ದಾರೆ ಎಂಬುದು ನಿಜ. ಆದರೆ, ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿರ್ಮಾಣಕ್ಕೆ ವ್ಯಯಿಸಲಾಗಿರುವ ಶ್ರಮ ಮತ್ತು ಹಣ ನನ್ನ ದೇಶವಾಸಿಗಳದ್ದು ಎಂಬುದನ್ನು ಹೆಮ್ಮೆಯಿಂದ ಹೇಳಬಹುದು' ಎಂದು ಮೋದಿ ತಿಳಿಸಿದರು.

'ಈ ಸಂಸತ್ತಿನಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾಷಣವಾದ 'At the stroke of midnight' ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ' ಎಂದು ತಿಳಿಸಿದರು.
ಇದೇ ಸಂಸತ್ತಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು 'ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಪಕ್ಷಗಳು ಸ್ಥಾಪಿತವಾಗುತ್ತವೆ ಮತ್ತು ನಿರ್ಣಾವಾಗುತ್ತವೆ. ಆದರೆ, ಈ ದೇಶ ಮಾತ್ರ ಇರಲೇಬೇಕು' ಎಂಬುದಾಗಿ ಹೇಳಿದ್ದರು. ಇದು ನಮಗೆ ದಾರಿದೀಪವಾಗಿದೆ ಎಂದರು

'ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡ್ ರಾಜ್ಯಗಳನ್ನು ಘೋಷಿಸಿದಾಗ ಎಲ್ಲೆಡೆ ಸಂಭ್ರಮಾಚರಣೆ ಇತ್ತು. ಆದರೆ ತೆಲಂಗಾಣ ರಚನೆಯು ಕಹಿ ನೆನಪುಗಳನ್ನು ಉಳಿಸಿದೆ' ಎಂದು ಪ್ರಧಾನಿ ಮೋದಿ ಹೇಳಿದರು.
'ಕೇವಲ ನಾಲ್ಕು ಸಂಸದರನ್ನು ಹೊಂದಿರುವ ಪಕ್ಷವನ್ನು ಅಧಿಕಾರದಲ್ಲಿ ಕುಳಿಸಿದ ಹೆಮ್ಮೆ ಈ ಸಂಸತ್ತಿಗಿದೆ. ಆದರೆ 100 ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷವು ವಿರೋಧ ಪಕ್ಷದಲ್ಲಿ ಕುಳಿತಿತ್ತು' ಎಂದು ಅವರು ತಿಳಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ 'ಮತಕ್ಕಾಗಿ ಹಣ' ಹಗರಣಕ್ಕೂ ಈ ಸಂಸತ್ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
'ಉಭಯ ಸದನಗಳಿಗೆ ಇದು ವರೆಗೆ 7,500 ಕ್ಕೂ ಹೆಚ್ಚು ಸದಸ್ಯರು ಕೊಡುಗೆ ನೀಡಿದ್ದಾರೆ. ಸುಮಾರು 600 ಮಹಿಳಾ ಸಂಸದರು ಎರಡೂ ಸದನಗಳ ಘನತೆಯನ್ನು ಹೆಚ್ಚಿಸಿದ್ದಾರೆ' ಎಂದು ಅವರು ಅಭಿಪ್ರಾಯಪಟ್ಟರು.
'ಈ ಸಂಸತ್ತು ಮೂವರು ಪ್ರಧಾನ ಮಂತ್ರಿಗಳನ್ನು ಕಳೆದುಕೊಂಡಿತು. ನೆಹರೂ ಜಿ, ಶಾಸ್ತ್ರಿ ಜಿ ಮತ್ತು ಇಂದಿರಾ ಜಿ ಅವರಿಗೆ ಸೂಕ್ತ ಗೌರವವನ್ನು ಈ ಸಂಸತ್ ಭವನದಲ್ಲೇ ನೀಡಲಾಯಿತು' ಎಂದು ಅವರು ತಿಳಿಸಿದರು.
'ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಹೋಗುತ್ತೇವೆ. ಆದರೆ ಈ ಹಳೆಯ ಕಟ್ಟಡವು ಯಾವಾಗಲೂ ಸ್ಫೂರ್ತಿ ನೀಡುತ್ತದೆ' ಎಂದರು.
ಈ ಸದನದ 75 ವರ್ಷಗಳ ದೊಡ್ಡ ಸಾಧನೆ ಎಂದರೆ ಸಂಸತ್ತಿನಲ್ಲಿ ಜನರ ನಿರಂತರ ನಂಬಿಕೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.
'ನಾನು ಮೊದಲ ಬಾರಿಗೆ ಈ ಕಟ್ಟಡವನ್ನು ಸಂಸತ್ ಸದಸ್ಯನಾಗಿ ಪ್ರವೇಶಿಸಿದೆ. ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಎಂಬುದನ್ನು ನಾನು ಊಹಿಸಿರಲಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications