ಕ್ರಿಕೆಟ್ ಕನಸು ಕಂಡು ಚೆಸ್ ಚಾಂಪಿಯನ್ ಆದ ವಿದಿತ್‌ಗೆ ಒಲಿಯಿತು ಪ್ರತಿಷ್ಠಿತ ಅರ್ಜುನ ಪ್ರಶಸ್ತಿ

ಬಾಲ್ಯದಲ್ಲಿ ಎಲ್ಲ ಮಕ್ಕಳಿಗೆ ಇರುವಂತೆಯೇ ಕ್ರಿಕೆಟ್ ಆಟಗಾರನಾಗಬೇಕೆಂಬ ದೊಡ್ಡ ಕನಸು ಈ ಹುಡುಗನಿಗೂ ಇತ್ತು. ಆದ್ರೆ ಈ ಆರು ವರ್ಷದ ಬಾಲಕನಿಗೆ, ಸೀಸನ್ ಬಾಲ್ ಕ್ರಿಕೆಟ್ ಆಡಲು ಇನ್ನೂ ಕನಿಷ್ಠ ಒಂದು ವರ್ಷ ಕಾಯುವಂತೆ ಸ್ಥಳೀಯ ಕ್ರಿಕೆಟ್ ಕ್ಲಬ್‌ನವರು ಸಲಹೆ ನೀಡಿದರಂತೆ. ಆ ಒಂದು ವರ್ಷ ಸುಮ್ಮನೆ ಕುಳಿತುಕೊಳ್ಳುವ ಬದಲು ಆಕಸ್ಮಿಕವಾಗಿ ಚೆಸ್ ಬೋರ್ಡ್ ಎತ್ತಿಕೊಂಡ ಆ ಬಾಲಕ, ಇಂದು ಭಾರತೀಯ ಕ್ರೀಡಾಕ್ಷೇತ್ರದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಗದರೆ ಅವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದೆಯೇ? ಅವರೇ ಮಹಾರಾಷ್ಟ್ರದ ನಾಸಿಕ್ ಮೂಲದ, ಭಾರತದ ಹೆಮ್ಮೆಯ ಕ್ರೀಡಾಪಟು ಹಾಗೂ ಚೆಸ್ ಗ್ರಾಂಡ್‌ಮಾಸ್ಟರ್ ವಿದಿತ್ ಗುಜರಾತಿ.

Cricket

ಆಕಸ್ಮಿಕವಾಗಿ ಒಲಿದ ಚೆಸ್ ಆಟ

ಬಾಲ್ಯದಲ್ಲಿ ಬಹಳ ತುಂಟನಾಗಿದ್ದ ವಿದಿತ್ ಅವರನ್ನ ಯಾವುದಾದರೊಂದು ಕ್ರೀಡೆಯಲ್ಲಿ ಸೇರಿಸಬೇಕು ಎಂಬುದು ಅವರ ಪೋಷಕರ ಉದ್ದೇಶವಾಗಿತ್ತು. ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್‌ ಆಗಿರುವ ವಿದಿತ್ ಅವರ ತಂದೆ, ಡಾ. ಸಂತೋಷ್ ಗುಜರಾತಿ ಅವರೇ ವಿದಿತ್‌ಗೆ ಮೊಟ್ಟಮೊದಲ ಚೆಸ್ ತರಬೇತುದಾರರು ನೋಡಿ.

ತಂದೆಯನ್ನ ಆಟದಲ್ಲಿ ಹೇಗಾದರೂ ಮಾಡಿ ಸೋಲಿಸಬೇಕು ಎಂಬ ಹಠದಿಂದ ಆರಂಭವಾದ ಈ ಚೆಸ್ ಆಟ, ನಿಧಾನವಾಗಿ ಅವರ ಜೀವನದ ಬಹುದೊಡ್ಡ ಗುರಿಯಾಗಿ ಹಾಗೂ ಈಗ ವೃತ್ತಿಯಾಗಿ ಬದಲಾಗಿದೆ.

ಗ್ರಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ಪ್ರತಿಭೆ

ತಂದೆಯ ಬೆಂಬಲ ಹಾಗೂ ತಮ್ಮ ನಿರಂತರ ಪರಿಶ್ರಮದಿಂದ 2013ರ ವೇಳೆಗೆ ವಿದಿತ್ ಗುಜರಾತಿ ಪ್ರತಿಷ್ಠಿತ ಗ್ರಾಂಡ್‌ಮಾಸ್ಟರ್ ಪಟ್ಟವನ್ನ ಒಲಿಸಿಕೊಂಡರು. ಅಲ್ಲಿಂದ ಅವರ ಸಾಧನೆಯ ಗ್ರಾಫ್‌ ಅನ್ನ ನೋಡುವುದಾದರೆ ಸತತವಾಗಿ ಏರುಗತಿಯಲ್ಲೇ ಸಾಗುತ್ತಿದೆ. ಕೇವಲ ನಾಲ್ಕೇ ವರ್ಷಗಳಲ್ಲಿ, ಅಂದರೆ 2017ರಲ್ಲಿ 2700 ಎಲೋ (Elo) ರೇಟಿಂಗ್ಸ್ ಅನ್ನ ದಾಟುವ ಮೂಲಕ, ಈ ಮಹತ್ವದ ಸಾಧನೆ ಮಾಡಿದ ಭಾರತದ ನಾಲ್ಕನೇ ಚೆಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಮಟ್ಟದ ಚೆಸ್ ದಿಗ್ಗಜರ ವಿರುದ್ಧ ಕಾದಾಡುವ ಆತ್ಮವಿಶ್ವಾಸವನ್ನ ಅವರು ಇಲ್ಲಿಂದಲೇ ತಮ್ಮೊಳಗೆ ಗಟ್ಟಿ ಮಾಡಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಗುಜರಾತಿ

2023ರ ಎಫ್‌ಐಡಿಇ (FIDE) ಗ್ರಾಂಡ್ ಸ್ವಿಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ ವಿದಿತ್, ಆ ಮೂಲಕ 2024ರ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡರು. ಇಷ್ಟೇ ಅಲ್ಲದೆ, 2024ರ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಪ್ರಮುಖ ಆಟಗಾರರಾಗಿ ಮಿಂಚಿದ್ದರು. ಈ ಸತತ ಯಶಸ್ಸುಗಳು ಭಾರತೀಯ ಚೆಸ್ ಕ್ರೀಡೆಗೆ ಹೊಸ ಹುರುಪು ನೀಡಿವೆ.

ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಗರಿ

ತಮ್ಮ ಈ ಸುದೀರ್ಘ ಕ್ರೀಡಾ ಪಯಣದಲ್ಲಿ ಸದಾ ಮುಂಚೂಣಿಯಲ್ಲಿರುವ ವಿದಿತ್ ಗುಜರಾತಿ ಅವರು ಚೆಸ್ ಕ್ರೀಡೆಗೆ ನೀಡಿದ ಕೊಡುಗೆಯನ್ನ ಗುರುತಿಸಿ, ಭಾರತ ಸರ್ಕಾರದ ಕ್ರೀಡಾ ಸಚಿವಾಲಯವು ಇದೀಗ ಅವರಿಗೆ ಪ್ರತಿಷ್ಠಿತ 'ಅರ್ಜುನ ಪ್ರಶಸ್ತಿ' ನೀಡಿ ಗೌರವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+