ಕುಡಿದ ಮತ್ತಿನಲ್ಲಿ ಮಗುವನ್ನು ಸೇತುವೆಯಿಂದ ಬೀಳಿಸಿದ ತಂದೆ

ಮುಂಬೈ, ಜೂನ್ 1: ಕುಡಿದ ಮತ್ತಿನಲ್ಲಿದ್ದ ತಂದೆ, ದೇಹದ ಸಮತೋಲನ ಕಳೆದುಕೊಂಡು ಸೇತುವೆ ಮೇಲಿನಿಂದ ತಾನು ಎತ್ತಿಕೊಂಡಿದ್ದ ಮಗುವನ್ನು ಕೈಬಿಟ್ಟ ಘಟನೆ ಮಾಂಡ್ವಿಯ ಸೈವಾನ್ ಹಳ್ಳಿಯ ತಡಚಾ ಪಾಡಾ ಎಂಬಲ್ಲಿ ನಡೆದಿದೆ.

ಮದುವೆ ಸಮಾರಂಭಕ್ಕೆ ಹೋಗಿದ್ದ ಮುಂಬೈನ ವಿಹಾರ್ ಎಂಬ ಪ್ರಾಂತ್ಯದ ನಿಲೇಶ್ ಸಾತ್ವಿ, ಆತನ ಪತ್ನಿ ಹಾಗೂ ಅವರ ಮಗು ಗೌರಿ, ಮದ್ಯರಾತ್ರಿ 2: 30ರ ಸುಮಾರಿಗೆ ತಮ್ಮ ಮನೆ ಕಡೆಗೆ ಪ್ರಯಾಣ ಬೆಳೆಸಿದೆ.

Four-Year-Old Dies As Drunk Father Drops Her From Bridge

ಮದುವೆಯಲ್ಲಿ ಸ್ನೇಹಿತರ ಜತೆಗೆ ಸೇರಿ ಸಿಕ್ಕಾಬಟ್ಟೆ ಕುಡಿದಿದ್ದ ಗಂಡ ತಾನೇ ಆಸೆ ಪಟ್ಟು ತನ್ನ ನಾಲ್ಕು ವರ್ಷದ ಹೆಣ್ಣು ಮಗಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ಹೆಜ್ಜೆ ಹಾಕಿದ್ದಾನೆ.

ತಡಚಾ ಪಾಡಾ ಎಂಬಲ್ಲಿಗೆ ನೆಡೆದುಕೊಂಡು ಬಂದಾಗ, ಅಲ್ಲಿರುವ ಪುಟ್ಟದೊಂದು ಸೇತುವೆ ಮೂಲಕ ಹಾದು ಹೋಗುವಾಗ ನೀಲೇಶ್ ಸಮತೋಲನ ತಪ್ಪಿದೆ. ಹಾಗಾಗಿ, ಭುಜದ ಮೇಲಿದ್ದ ಆತನ ಮಗಳು ಗೌರಿ, ಸೇತುವೆಯಿಂದ ಕೆಳಗೆ ಬಿದ್ದಿದ್ದಾಳೆ. ಆನಂತರ, ತಾನೂ ಜೋಲಾಡುತ್ತಾ ಸೇತುವೆಯಿಂದ ಕೆಳಗೆ ಬಿದ್ದಿದ್ದಾನೆ. ಕೇವಲ ಒಂದೆರಡು ಕ್ಷಣಗಳಲ್ಲೇ ಈ ಘಟನೆ ನಡೆದುಹೋಗಿದೆ.

ಮೊದಲು ಸೇತುವೆಯಿಂದ ಕೆಳಗೆ ಬಿದ್ದ ಮಗು ಅಲ್ಲಿದ್ದ ಬಂಡೆಗಲ್ಲುಗಳ ಮೇಲೆ ಅಪ್ಪಳಿಸಿದೆ. ಹಾಗಾಗಿ, ಆ ಮಗು ಅಲ್ಲೇ ಸಾವನ್ನಪ್ಪಿದೆ. ಆ ಮಗುವಿನ ಹಿಂದೆಯೇ ಬಿದ್ದ ನಿಲೇಶ್ ಸೀದಾ ಆ ಮಗುವಿನ ಮೇಲೆ ಬಂದು ಬಿದ್ದಿದ್ದಾನೆ.

ಹಲವಾರು ಗಾಯಗಳಾಗಿದ್ದರೂ ನಿಲೇಶ್ ಉಳಿದಿದ್ದಾನಾದರೂ, ಮಗು ಮಾತ್ರ ತಂದೆಯ ಎಡವಟ್ಟಿಗೆ ಪ್ರಾಣ ಬಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+