Get Updates
Get notified of breaking news, exclusive insights, and must-see stories!

ವೈಷ್ಣೋದೇವಿ ಯಾತ್ರಾರ್ಥಿ ಬೆಂಗಳೂರಿನ ಶಶಿಧರ್ ಸಾವು

ಜಮ್ಮು, ಆಗಸ್ಟ್ 06: ಮಾತಾ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಮೂವರು ಭಕ್ತರು ಹಾಗೂ ಒಬ್ಬ ಸಹಾಯಕ ಮೃತಪಟ್ಟಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ವೈಷ್ಣೋದೇವಿ ದೇಗುಲಕ್ಕೆ ತೆರಳುವ ಹಳೆ ಮಾರ್ಗದಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರ ಪೈಕಿ ಬೆಂಗಳೂರಿನ ಯಾತ್ರಿ ಶಶಿಧರ ಕುಮಾರ್ ಕೂಡಾ ಇದ್ದಾರೆ

ಕತ್ರಾ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 12 ಮಂದಿ ಸಂತ್ರಸ್ತರಾಗಿದ್ದಾರೆ. 3 ಜನ ಯಾತ್ರಾರ್ಥಿಗಳು ಮೃತಪಟ್ಟಿದ್ದು, ಓರ್ವ ಪೋನಿವಾಲ(ಕುದುರೆ ನೋಡಿಕೊಳ್ಳುವವರು) ಮೃತರಾಗಿದ್ದಾರೆ. [ವೈಷ್ಣೋದೇವಿ ದರ್ಶನಕ್ಕೆ ಹೋಗಲು ಬೆಂಗಳೂರಿನಿಂದ ರೈಲು]

Four die in landslide on Vaishno Devi Shrine track

ಮಿಕ್ಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆಬೆಂಗಾಂಗ-ಅರ್ಧಕುವಾರಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಯಾತ್ರಿಕರು ವಿಶ್ರಮಿಸುತ್ತಿದ್ದ ತಾತ್ಕಾಲಿಕ ಡೇರೆ ಮೇಲೆ ಮಣ್ಣು ಕುಸಿದಿದೆ.

ಈ ದುರ್ಘಟನೆಯಲ್ಲಿ 5 ವರ್ಷದ ಒಂದು ಮಗು ಸೇರಿದಂತೆ ಮೂವರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಅಜೀತ್ ಸಾಹು ತಿಳಿಸಿದ್ದಾರೆ.

ಮೃತರನ್ನು ಬೆಂಗಳೂರಿನ ಶಶಿಧರ ಕುಮಾರ್ (29) ಛತ್ತೀಸ್​ಗಢದ ಬಿಂದು ಸಾಹ್ನಿ (30) ಮತ್ತು ಆಕೆಯ 5 ವರ್ಷದ ಮಗ ವಿಶಾಲ್ ಹಾಗೂ ರಿಯಾಸಿಯ 'ಪೋನಿವಲ್ಲ' ಸಾದಿಕ್ (32) ಎಂದು ಗುರುತಿಸಲಾಗಿದೆ. (ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+