Get Updates
Get notified of breaking news, exclusive insights, and must-see stories!

Buddhadeb Bhattacharya: ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ವಿಧಿವಶ

ಕೋಲ್ಕತ್ತಾ, ಆಗಸ್ಟ್‌ 08: ಕಮ್ಯುನಿಸ್ಟ್ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ವಿಧಿವಶರಾದರು. ನವೆಂಬರ್ 2000 ದಿಂದ ಮೇ 2011ರ ತನಕ ಬುದ್ಧದೇವ್ ಭಟ್ಟಾಚಾರ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಹಲವು ಗಣ್ಯರು ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

80 ವರ್ಷದ ಬುದ್ಧದೇವ್ ಭಟ್ಟಾಚಾರ್ಯ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಲ್ಲಿ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

Former West Bengal Chief Minister Buddhadeb Bhattacharya No More

ಕಳೆದ ವರ್ಷ ಆಸ್ಪತ್ರೆಯಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಅದರಿಂದ ಚೇತರಿಸಿಕೊಂಡಿದ್ದರು. ಬುಧವಾರ ಮುಂಜಾನೆ ಅವರು ವಿಧಿವಶರಾಗಿದ್ದು, ಪತ್ನಿ ಮೀರಾ ಮತ್ತು ಮಗ ಸುಚೇತನ ಅವರನ್ನು ಆಗಲಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಸಿಪಿಎಂ ಪಕ್ಷದ ತೀರ್ಮಾನ ಕೈಗೊಳ್ಳುವ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಜ್ಯೋತಿ ಬಸು ಅವರ ಬಳಿಕ 2000 ದಿಂದ 2011ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

2011ರ ವಿಧಾನಸಭೆ ಚುನಾವಣೆಯಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಸಿಪಿಎಂ ಪಕ್ಷವನ್ನು ಮುನ್ನಡೆಸಿದ್ದರು. ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಐತಿಹಾಸಿಕ ಜಯ ಸಾಧಿಸಿತ್ತು ಮತ್ತು 34 ವರ್ಷದ ರಾಜ್ಯದಲ್ಲಿನ ಕಮ್ಯುನಿಷ್ಟ್ ಆಡಳಿತವನ್ನು ಅಂತ್ಯಗೊಳಿಸಿತ್ತು.

ಕೋಲ್ಕತ್ತಾದ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ರಾಜಕೀಯಕ್ಕೆ ಬರುವ ಮೊದಲು ಶಿಕ್ಷಕರಾಗಿದ್ದರು. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದ ಅವರು 2000ದಲ್ಲಿ ಜ್ಯೋತಿ ಬಸು ಅಧಿಕಾರದಿಂದ ಇಳಿಯುವ ಮೊದಲು ಉಪ ಮುಖ್ಯಮಂತ್ರಿಯಾಗಿದ್ದರು.

ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದಲ್ಲಿ 2001ರಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಿ ಸಿಪಿಎಂ ಪಕ್ಷ ಅಧಿಕಾರವನ್ನು ಪಡೆದಿತ್ತು. 2006ರ ತನಕ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಸರ್ಕಾರ ಜ್ಯೋತಿ ಬಸು ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಹಲವು ಬದಲಾವಣೆಗಳನ್ನು ತಂದಿತ್ತು.

2006ರ ಚುನಾವಣೆಯಲ್ಲಿ ಕೇವಲ 30 ಸೀಟು ಗೆದ್ದಿದ್ದ ಟಿಎಂಸಿ ಪಕ್ಷ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಿಂಗೂರಿನಲ್ಲಿ ನ್ಯಾನೊ ಕಾರು ತಯಾರಿಕಾ ಘಟಕ ಸ್ಥಾಪನೆ ಮಾಡುವುದರ ವಿರುದ್ಧ ಬೃಹತ್ ಹೋರಾಟ ನಡೆಸಿದ್ದರು. ಅಂತಿಮವಾದಿ ಟಾಟಾ ಮೋಟರ್ಸ್‌ಗೆ ಗುಜರಾತ್‌ಗೆ ಘಟಕ ಸ್ಥಳಾಂತರ ಮಾಡಿತ್ತು.

ಈ ಹೋರಾಟ, ಪ್ರತಿಭಟನೆ, ಹಿಂಸಾಚಾರ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟು ಮಾಡಿತ್ತು. ನಂದಿಗ್ರಾಮದಲ್ಲಿ ಟಾಟಾ ಮೋಟರ್ಸ್‌ಗೆ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ 14 ಜನರು ಮೃತಪಟ್ಟಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಗೂ ಕಾರಣವಾಯಿತು.

2011ರ ಚುನಾವಣೆಯಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧ ಅಲೆ ಟಿಎಂಸಿಗೆ ವರವಾಯಿತು. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ 2011ರ ಚುನಾವಣೆಯಲ್ಲಿ 184 ಸೀಟುಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಕಮ್ಯುನಿಷ್ಟ್ ಆಡಳತಿ ಅಂತ್ಯಗೊಳಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+