22 ವರ್ಷ ಹಿಂದೆ ಶಾಸಕನ ಹತ್ಯೆ, RJD ಮಾಜಿ ಸಂಸದನಿಗೆ ಜೈಲು

Subscribe to Oneindia Kannada

ಜಾರ್ಖಂಡ್: ಸುಮಾರು 22 ವರ್ಷಗಳ ಹಿಂದೆ ನಡೆದಿದ್ದ ಶಾಸಕರೊಬ್ಬರ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾದಳ (ಆರ್'ಜೆಡಿ) ಮಾಜಿ ಸಂಸದರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

22 ವರ್ಷದ ಹಿಂದೆ ಅಂದರೆ 1995ರಲ್ಲಿ ಜನತಾದಳದ ಶಾಸಕ ಅಶೋಕ್ ಸಿಂಗ್ ಅವರ ಹತ್ಯೆ ನಡೆದಿತ್ತು. ಆರ್'ಜೆಡಿ ಪಕ್ಷದ ಮಾಜಿ ಸಂಸದ, ಬಿಹಾರದ ಸರಣ್ ಜಿಲ್ಲೆಯ ಪ್ರಭಾವಿ ರಾಜಕಾರಣಿ ಪ್ರಭುನಾಥ್ ಸಿಂಗ್ ಹಾಗೂ ಅವರ ಇಬ್ಬರು ಸಹೋದರರು ಈ ಕೊಲೆ ಮಾಡಿದ್ದರು.

Former RJD MP convicted in 22 year old MLA murder case in Jharkhand

22 ವರ್ಷಗಳ ನಂತರ ತನಿಖೆ, ವಾದ-ವಿವಾದ, ವಿಚಾರಣೆಗಳೆಲ್ಲಾ ಮುಗಿದು ಮೂವರ ಆರೋಪವೂ ಸಾಬೀತಾಗಿದೆ. ಇದೀಗ ಮೂವರನ್ನೂ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಶಿಕ್ಷೆ ಪ್ರಮಾಣವನ್ನಿನ್ನೂ ಪ್ರಕಟಿಸಿಲ್ಲ. ಮೇ 23 ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದೆಂದು ಹಜರಿಬಾಗ್ ನ 9 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುರೇಂದ್ರ ಶರ್ಮಾ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಪ್ರಭುನಾಥ್ ಸಿಂಗ್, ಅವರ ಸಹೋದರರಾದ ದೀನನಾಥ್ ಸಿಂಗ್ ಮತ್ತು ರಿತೇಶ್ ಸಿಂಗ್ ರನ್ನು ಪೊಲೀಸರು ಬಂಧಿಸಿ ಹಜಾರಿಬಾಗ್ ಜೈಲಿಗೆ ಕಳುಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Rashtriya Janata Dal (RJD) MP Prabhunath Singh and two others were convicted on Thursday in an 22 year old MLA murder case by a local court of Hazaribagh in Jharkhand.
Please Wait while comments are loading...