ರೈಲ್ವೆ ಕೆಲಸ ಬಿಟ್ಟು ದೇವಸ್ಥಾನದ ಮುಂದೆ ಕಾಯಿ-ಕರ್ಪೂರ ವ್ಯಾಪಾರ: ಈತ ಈಗ ತಿಂಗಳಿಗೆ ಗಳಿಸೋದು ಬರೋಬ್ಬರಿ 3 ಲಕ್ಷ ರೂ.!

ಸರ್ಕಾರಿ ಕೆಲಸ ಸಿಕ್ಕರೆ ಜೀವನವೇ ಸೆಟಲ್ ಎಂದು ಭಾವಿಸುವವರೇ ಹೆಚ್ಚು. ಅದರಲ್ಲೂ ನಿರುದ್ಯೋಗವೇ ತಾಂಡವ ಆಡುತ್ತಿರುವ ನಮ್ಮ ಭಾರತದಲ್ಲಿ ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕೂ ಎಂದು ಹೇಳುವವರೇ ಸಂಖ್ಯೆ ಜಾಸ್ತಿಯಿದೆ. ಹಾಗಿದ್ದಾಗ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕರಂತೂ ಅದನ್ನು ಯಾರೂ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ.

ಆದರೆ, ತಿಂಗಳಿಗೆ 18,000 ರೂಪಾಯಿ ಸಂಬಳ ಸಿಗುತ್ತಿದ್ದ ರೈಲ್ವೆ ಇಲಾಖೆಯ ಉದ್ಯೋಗವನ್ನ ಬಿಟ್ಟು, ದೇವಸ್ಥಾನವೊಂದರ ಮುಂದೆ ಕಾಯಿ-ಕರ್ಪೂರ ಮತ್ತು ಹೂವು ಮಾರಾಟ ಮಾಡಲು ಆರಂಭಿಸಿದ ಬಚ್ಚಾ ಯಾದವ್ ಎಂಬುವವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Former Railway Employee

'ಸ್ವಾತಂತ್ರ್ಯವೇ ಜೀವನದ ಅತಿದೊಡ್ಡ ಪ್ರಮೋಷನ್' ಎಂಬುದನ್ನ ಇವರು ತಮ್ಮ ಸ್ವಂತ ವ್ಯಾಪಾರದ ಮೂಲಕ ಸಾಬೀತುಪಡಿಸಿದ್ದಾರೆ.

ರೈಲ್ವೆ ಕೆಲಸಕ್ಕೆ ರಾಜೀನಾಮೆ ನೀಡಿ ದೇವಸ್ಥಾನದ ಮುಂದೆ ವ್ಯಾಪಾರಕ್ಕೆ ಇಳಿದಾಗ ಆರಂಭದಲ್ಲಿ ಇವರನ್ನು ನೋಡಿ ಅನೇಕರು ನಕ್ಕಿದ್ದರು. " ರೈಲ್ವೆ ಇಲಾಖೆಯ ಒಳ್ಳೆ ಕೆಲಸ ಬಿಟ್ಟು ಕಾಯಿ ಮಾರಲು ಬಂದಿದ್ದಾನಲ್ಲ" ಎಂದು ಹೀಯಾಳಿಸಿದ್ದರು. ಆದರೆ, ಜನರ ಯಾವುದೇ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದ ಬಚ್ಚಾ ಯಾದವ್, ತಮ್ಮ ವ್ಯಾಪಾರದ ಮೇಲೆ ಸಂಪೂರ್ಣ ಗಮನ ಹರಿಸಿದರು. ಇದೀಗ ಸಾಮಾಜಿಕ ಜಾಲತಾಣ ಏಕ್ಸ್‌ ಖಾತೆಯಲ್ಲಿ ಪ್ರಥಮ್ ಎಂಬುವವರು ಬಚ್ಚಾ ಯಾದವ್ ಅವರ ವ್ಯಾಪಾರದ ಮಾದರಿ ಮತ್ತು ಆದಾಯದ ವಿವರಗಳನ್ನ ಹಂಚಿಕೊಂಡಿದ್ದು, ಈ ಲೆಕ್ಕಾಚಾರ ಓದುಗರನ್ನಾ ಬೆರಗಾಗುವಂತೆ ಮಾಡಿದೆ.

ಬಚ್ಚಾ ಯಾದವ್ ಯಶೋಗಾಥೆ

ಬಚ್ಚಾ ಯಾದವ್ ಅವರ ವ್ಯಾಪಾರದ ಮಾದರಿ ಅತ್ಯಂತ ಸರಳವಾಗಿದ್ದರೂ, ಅದರಲ್ಲಿರುವ ಲಾಭದ ಲೆಕ್ಕಾಚಾರ ಅನೇಕ ಕಾರ್ಪೊರೇಟ್ ಉದ್ಯೋಗಿಗಳನ್ನ ನಾಚಿಸುವಂತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೇಕಾದ ಪೂಜಾ ಸಾಮಗ್ರಿಗಳ ಪ್ಯಾಕೇಜ್ ಅನ್ನು ಇವರು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ.

ಒಂದು ತೆಂಗಿನಕಾಯಿಯ ಅಸಲು ವೆಚ್ಚ: ₹14

ಹೂವು ಮತ್ತು ಊದುಬತ್ತಿಯ ವೆಚ್ಚ: ₹6

ಒಂದು ಪೂಜಾ ಸೆಟ್‌ನ ಒಟ್ಟು ವೆಚ್ಚ: ₹20

ಗ್ರಾಹಕರಿಗೆ ಮಾರಾಟ ಮಾಡುವ ಬೆಲೆ: ₹50

ಒಂದು ಪ್ಯಾಕ್ ಮೇಲೆ ಸಿಗುವ ನಿವ್ವಳ ಲಾಭ: ₹30

ದೇವಸ್ಥಾನದ ಮುಂದೆ ನಿತ್ಯ ಭಕ್ತರ ಸಂಖ್ಯೆ ಹೆಚ್ಚಿರುವುದರಿದ, ಬಚ್ಚಾ ಯಾದವ್ ಅವರು ಪ್ರತಿದಿನ ಸರಾಸರಿ 300 ರಿಂದ 400 ಪೂಜಾ ಪ್ಯಾಕ್‌ಗಳನ್ನ ಮಾರಾಟ ಮಾಡುತ್ತಾರೆ. ಅಂದರೆ, ಕೇವಲ ಒಂದು ದಿನಕ್ಕೆ ಇವರಿಗೆ 9,000 ದಿಂದ 12,000 ರೂಪಾಯಿಗಳವರೆಗೆ ಲಾಭ ಸಿಗುತ್ತದೆ. ಇದನ್ನು ತಿಂಗಳ ಲೆಕ್ಕಕ್ಕೆ ತೆಗೆದುಕೊಂಡರೆ ಇವರ ಆದಾಯ ಬರೋಬ್ಬರಿ 2.7 ಲಕ್ಷದಿಂದ 3.6 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಇನ್ನೂ ವಾರ್ಷಿಕವಾಗಿ ಲೆಕ್ಕ ಹಾಕಿದರೆ, ಇವರ ಗಳಿಕೆ 32 ಲಕ್ಷದಿಂದ 43 ಲಕ್ಷ ರೂಪಾಯಿ ದಾಟುತ್ತದೆ.

ಸ್ವಂತ ವ್ಯಾಪಾರದ ಯಶಸ್ಸು: ಬಾಸ್ ಇಲ್ಲದ ಸ್ವಾತಂತ್ರ್ಯವೇ ನಿಜವಾದ ನೆಮ್ಮದಿ

ಬಚ್ಚಾ ಯಾದವ್ ಅವರ ಈ ಯಶೋಗಾಥೆಯಲ್ಲಿ ಹಣಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಅವರಿಗೆ ಸಿಕ್ಕಿರುವ ಸ್ವಾತಂತ್ರ್ಯ. ರೈಲ್ವೆ ಇಲಾಖೆಯಲ್ಲಿದ್ದಾಗ ನಿಗದಿತ ಸಮಯಕ್ಕೆ ಕೆಲಸ ಮಾಡಬೇಕಿತ್ತು, ಮೇಲಧಿಕಾರಿಗಳ ಆದೇಶ ಪಾಲಿಸಬೇಕಿತ್ತು. ಆದರೆ ಈಗ ತಮ್ಮ ಕೆಲಸಕ್ಕೆ ಇವರೇ ಬಾಸ್. ಪ್ರತಿದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ವ್ಯಾಪಾರ ಆರಂಭಿಸುವ ಇವರು, ಸಂಜೆ 6 ಗಂಟೆಯ ವೇಳೆಗೆಲ್ಲ ಕೆಲಸ ಮುಗಿಸಿ ಮನೆಗೆ ತೆರಳುತ್ತಾರೆ.

ಯಾವುದೇ ಒತ್ತಡವಿಲ್ಲ, ತಮಗೆ ಇಷ್ಟ ಬಂದಾಗ ಅಂಗಡಿ ತೆರೆಯುವ ಮತ್ತು ರಜೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಇವರಿಗಿದೆ. "ಕೆಲವೊಮ್ಮೆ ನಮ್ಮ ಇಷ್ಟದಂತೆ ಬದುಕಲು ಸಿಗುವ ಸ್ವಾತಂತ್ರ್ಯವೇ ನಮಗೆ ಸಿಗುವ ಅತ್ಯಂತ ದೊಡ್ಡ ಪ್ರಮೋಷನ್‌" ಎಂದು ನೆಟ್ಟಿಗರು ಇವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+