ಅಂದೇ ಅಟಲ್ ಗೆ ಸಿಗಬೇಕಿತ್ತು ಭಾರತರತ್ನ: ಕೊಕ್ಕೆ ಹಾಕಿದವರಾರು?
ನವದೆಹಲಿ, ಜ 3: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರನ್ನು ಎಲ್ಲಾ ಪಕ್ಷದವರೂ ಗೌರವದಿಂದ ಕಾಣುತ್ತಾರೆ. ಅವರ ಮುತ್ಸದ್ದಿತನಕ್ಕೆ ತಲೆಬಾಗುತ್ತಾರೆ.
ಇತ್ತೀಚೆಗೆ ವಾಜಪೇಯಿಗೆ ಭಾರತರತ್ನ ಪ್ರಶಸ್ತಿ ಘೋಷಣೆಯಾದಾಗ ಹೆಚ್ಚುಕಮ್ಮಿ ಎಲ್ಲರೂ ಪಕ್ಷಭೇದ ಮರೆತು ಸ್ವಾಗತಿಸಿದ್ದು ಅವರನ್ನು ಗೌರವಿಸುತ್ತಿರುವುದಕ್ಕೆ ಕೊಡಬಹುದಾದ ಉದಾಹರಣೆ.
ಅಟಲ್ ಜನ್ಮದಿನದಂದು (ಡಿಸೆಂಬರ್ 25) ತಪ್ಪದೇ ಅವರ ನಿವಾಸಕ್ಕೆ ಹೋಗಿ ಅವರನ್ನು ಅಭಿನಂದಿಸುವುದರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. (ಅಟಲ್, ಮಾಳವೀಯರಿಗೆ ಭಾರತರತ್ನ)

ಯುಪಿಎ ಅಧಿಕಾರದ ಅವಧಿಯಲ್ಲೇ ವಾಜಪೇಯಿವರಿಗೆ ಭಾರತರತ್ನ ನೀಡಬೇಕೆಂದು ಮನಮೋಹನ್ ಸಿಂಗ್ ಬಯಸಿದ್ದರು ಎನ್ನುವ ಮಾಹಿತಿಯನ್ನು ತಡವಾಗಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ತಿಳಿಸಿದ್ದಾರೆ.
ಅಟಲ್ ಅಲ್ಲದೇ, ಇನ್ನೊಬ್ಬರು ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರಿಗೂ ಮರಣೋತ್ತರವಾಗಿ ಭಾರತರತ್ನ ನೀಡಬೇಕೆಂದು ಮನಮೋಹನ್ ಸಿಂಗ್ ಬಯಸಿದ್ದರೆಂದು ಬರು ಅಂದಿನ ಘಟನೆಯ ಮೆಲುಕು ಹಾಕಿದ್ದಾರೆ.
ಈ ಇಬ್ಬರೂ ಮಾಜಿ ಪ್ರಧಾನಿಗಳಿಗೆ ಒಟ್ಟಿಗೇ ಭಾರತರತ್ನ ನೀಡಬೇಕೆಂದು ನಾನು ಸಲಹೆ ಮಾಡಿದ್ದೆ. ಅದಕ್ಕೆ ಸಿಂಗ್, ದೂಸ್ರಾ ಮಾತನಾಡದೇ ಒಪ್ಪಿಗೆ ಸೂಚಿಸಿದ್ದರು. ಇದನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಸಿಂಗ್ ಚರ್ಚಿಸಿದ್ದರೂ ಕೂಡಾ.
ಸುಮಾರು ಎಂಟು ವರ್ಷದಿಂದ ಭಾರತರತ್ನ ಪ್ರಶಸ್ತಿಯ ಬಗ್ಗೆ ನಡೆಯುತ್ತಿದ್ದ ಸಭೆ, ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮನಮೋಹನ್ ಸಿಂಗ್, ಅಟಲ್ ಮತ್ತು ಪಿವಿಎನ್ ಹೆಸರನ್ನು ಪ್ರಸ್ತಾವಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.
ಅಟಲ್ ಗೆ ಭಾರತರತ್ನ ನೀಡುವುದಕ್ಕೆ ಕಾಂಗ್ರೆಸ್ ನಿಂದ ವಿರೋಧವಿತ್ತೋ ಅಥವಾ ಯುಪಿಎ ಅಂಗ ಪಕ್ಷಗಳಿಂದ ವಿರೋಧವಿತ್ತೋ ಎನ್ನುವ ಖಚಿತ ಮಾಹಿತಿಯ ಬಗ್ಗೆ ನನಗೆ ತಿಳಿದಿಲ್ಲ.
ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರ ಬಳಿ ಈ ವಿಷಯವನ್ನು ಚರ್ಚಿಸಿದ್ದರೋ ಎನ್ನುವ ಬಗ್ಗೆಯೂ ನನಗೆ ತಿಳಿದಿಲ್ಲ ಎಂದು ಸಿಂಗ್ ಮಾಧ್ಯಮ ಸಲಹೆಗಾರರಲ್ಲಿ ಒಬ್ಬರಾಗಿದ್ದ ಬರು ಹೇಳಿದ್ದಾರೆ.
ಒಟ್ಟಿನಲ್ಲಿ ಅಂದೇ ವಾಜಪೇಯಿಗೆ ಸಿಗಬೇಕಿದ್ದ 'ಭಾರತರತ್ನ' ಪ್ರಶಸ್ತಿಗೆ ಕೊಕ್ಕೆ ಹಾಕಿದವರಾರು ಎನ್ನುವ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. (ಮಾಹಿತಿ: ಟೈಮ್ಸ್ ಆಫ್ ಇಂಡಿಯಾ)
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications