ಟ್ವಿಟ್ಟರ್ ನಲ್ಲಿ ಮೂರ್ಖರ ದಿನದ್ದೇ ಗೌಜು!

ಪ್ರತಿವರ್ಷವೂ ಬರುವ ಮುರ್ಖರ ದಿನ ಅಪಹಾಸ್ಯದಿಂದ ನೋವುಂಟು ಮಾಡದೆ, ತಿಳಿ ಹಾಸ್ಯದಿಂದ ಮುಖದಲ್ಲಿ ನಗು ಮೂಡಿಸಲಿ ಎಂಬುದು ಎಲ್ಲರ ಹಾರೈಕೆ.

ಏಪ್ರಿಲ್ 1: ಹೊಸ ಆರ್ಥಿಕ ವರ್ಷದ ಮೊದಲ ದಿನವೆಂಬುದು ಒಂದೆಡೆಯಾದರೆ, ಮೂರ್ಖರ ದಿನ ಎಂಬುದು ಇನ್ನೊಂದೆಡೆ. ಒಟ್ಟಿನಲ್ಲಿ ಏಪ್ರಿಲ್ 1 ನಿರುಪದ್ರವಿ ಹಾಸ್ಯಕ್ಕೆ, ಜಂಜಾಟಗಳನ್ನೆಲ್ಲ ಮರೆತು ಒಂದು ದಿನವಾದರೂ ಖುಷಿಯಾಗಿರುವುದಕ್ಕೆ ಹೇಳಿಮಾಡಿಸಿದ ದಿನ.

ಆತ್ಮೀಯರೆದುರು ಮೂರ್ಖರಾಗುವುದರಲ್ಲಿಯೂ ಒಂದು ರೀತಿಯ ಮೋಜಿದೆ. ಮೂರ್ಖತನ ಒಂದರ್ಥದಲ್ಲಿ ಮುಗ್ಧತೆಯ ಮತ್ತೊಂದು ರೂಪವೇ. ಒಟ್ಟಿನಲ್ಲಿ ಪ್ರತಿವರ್ಷವೂ ಬರುವ ಮುರ್ಖರ ದಿನ ಅಪಹಾಸ್ಯದಿಂದ ನೋವುಂಟು ಮಾಡದೆ, ತಿಳಿ ಹಾಸ್ಯದಿಂದ ಮುಖದಲ್ಲಿ ನಗು ಮೂಡಿಸಲಿ ಎಂಬುದು ಎಲ್ಲರ ಹಾರೈಕೆ.[ನಿಜವಾದ ಮೂರ್ಖರು ಯಾರು? ಉತ್ತರ ಇಲ್ಲಿದೆ]

ಏಪ್ರಿಲ್ ಒಂದರ ಮೂರ್ಖರ ದಿನಕ್ಕೆ ಸಂಬಂಧಿಸಿದ ತರಹೇವಾರಿ ಜೋಕುಗಳು ಈಗಾಗಲೇ ಟ್ವಿಟ್ಟರ್ ನಲ್ಲಿ ಓಡಾಡುತ್ತಿವೆ. ಅವುಗಳಲ್ಲಿ ಕೆಲವು ನಿಮ್ಮ ಓದಿಗಾಗಿ ಇಲ್ಲಿವೆ...[ಯಾರು ಮೂರ್ಖ? ಒಂದು ಕಿರು ಸಂಶೋಧನೆ!]

ಮೂರ್ಖರದಿನ ಅವಿವಾಹಿತರಿಗೆ ಮಾತ್ರ!

ಮೂರ್ಖರ ದಿನ ಅವಿವಾಹಿತರಿಗೆ ಮಾತ್ರ. ಏಕೆಂದರೆ ವಿವಾಹಿತರಿಗೆ ಅವರ ವಿವಾಹ ವಾರ್ಷಿಕೋತ್ಸವವಿದೆ! ಎಂದು ಸತ್ಯೇಂದರ್ ಶುಕ್ಲಾ ಅವರು ಟ್ವೀಟ್ ಮಾಡಿ, ವಿವಾಹಿತರ ಪಡಿಪಾಟಲನ್ನು ಹೊರಹಾಕಿದ್ದಾರೆ![ಜೋಕು ಜೋಕಾಲಿ, ನಗು ಸದಾ ಜೀಕಲಿ !]

ಸಂಸದೀಯ ಚುನಾವಣೆಯೇ ಸುಳ್ಳಾಗಿದ್ದರೆ..!

ದೊನಾಲ್ಡ್ ಟ್ರಂಪ್ ಇಂದು, ಎಲ್ಲರೆದುರಲ್ಲಿ ನಿಂತು 'ಸಂಸದೀಯ ಚುನಾವಣೆ ಒಂದು ತಮಾಷೆಯಾಗಿತ್ತಷ್ಟೆ, ನಿಮ್ಮನ್ನೆಲ್ಲ ಏಪ್ರಿಲ್ ಫೋಲ್ ಮಾಡಿದ್ದೇನೆ' ಎನ್ನಲಿ ಎಂದು ನಾನು ಹಾರೈಸುತ್ತೇನೆ ಎಂದು ಪಿಯುಶ್ ಸೋಮಯ್ಯ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪಪ್ಪುಗೆ ಹಾರೈಕೆಯ ಸುರಿಮಳೆ!

ಮೂರ್ಖರ ದಿನದಂದು ಹಲವರು ರಾಹುಲ್ ಗಾಂಧಿಯವರಿಗೆ ಹ್ಯಾಪಿ ಬರ್ತ್ ಡೇ ಪಪ್ಪು ಎಂದು ಟ್ವೀಟ್ ಮಾಡಿ, ಮೂರ್ಖರ ದಿನಕ್ಕೆ ವಿಭಿನ್ನವಾಗಿ ಹಾರೈಸಿದ್ದಾರೆ!

ಜಿಯೋ ಆಫರ್ ನಂಬಿಬಿಟ್ಟೀರಾ ಜೋಕೆ!

ಜಿಯೋ ಆಫರ್ ಮತ್ತೆ ಮುಂದುವರಿಯುತ್ತೆ ಎಂಬ ಮೆಸೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಏಪ್ರಿಲ್ ಫೂಲ್ ಮಾಡುವುದಕ್ಕಾಗಿ ಹರಡಿರುವ ಜೋಕು, ಇದನ್ನು ನಂಬಿ ಮೂರ್ಖರಾಗಬೇಡಿ ಎಂದು ಆಕಾಶ್ ಶ್ರೀರಾಮ್ ಎಂಬುವವರು ಮನವಿ ಮಾಡಿದ್ದಾರೆ.

ಅಭ್ಯರ್ಥಿಯ ಹೆಸರು ಇಂದೇ ಘೋಷಣೆ!

ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಅಭ್ಯರ್ಥಿಯ ಹೆಸರನ್ನು ಇಂದೇ ಘೋಷಿಸಲು ಕೆಲ ರಾಜಕೀಯ ಪಕ್ಷಗಳು ನಿರ್ಧರಿಸಿವೆಯಂತೆ ಎಂದು ಕಪಿಲ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+